ಅಬ್ದುಲ್ಲಾ ಮದುಮೂಲೆಯವರಿಗೆ ಅಬುಧಾಬಿಯಲ್ಲಿ ಅದ್ಧೂರಿಯ ಬೀಳ್ಕೊಡುಗೆ.

0
138

ಸನ್ಮಾರ್ಗ ವಾರ್ತೆ

ಅಬುಧಾಬಿ: ಇಪ್ಪತ್ತೈದು ವರ್ಷಗಳ ದೀರ್ಘಕಾಲದ ಅನಿವಾಸಿ ಜೀವನವನ್ನು ಕೊನೆಗೊಳಿಸಿ ತಾಯ್ನಾಡಿಗೆ ಮರಳುತ್ತಿರುವ ಸಾಮಾಜಿಕ ಮುಂದಾಳು, ಝಾಇದ್ ಫೌಂಡೇಶನ್ ಅಬುಧಾಬಿ ಇದರ ಆರ್ಥಿಕ ತಜ್ಞ ,ಇಂಡಿಯನ್ ಸ್ಕೂಲ್ ಅಬುಧಾಬಿ ಇದರ ಬೋರ್ಡ್ ಸದಸ್ಯರೂ ಆಗಿದ್ದ ಅಬ್ದುಲ್ಲಾ ಮದುಮೂಲೆಯವರಿಗೆ ಅನಿವಾಸಿ ಕನ್ನಡಿಗ ಸಂಘಟನೆಯಾದ ಕೆಸಿಎಫ್ ಯುಎಇ ಇದರ ವತಿಯಿಂದ ಬಿಳ್ಕೊಡುಗೆ ಸಮಾರಂಭವನ್ನು ಕೆಸಿಎಫ್ ಅಬುಧಾಬಿ ಕಚೇರಿಯಲ್ಲಿ ನಡೆಯಿತು.

ಹಸೈನಾರ್ ಅಮಾನಿಯವರ ಅಧ್ಯಕ್ಷತೆಯಲ್ಲಿ ಪ್ರಾರಂಭಗೊಂಡ ಪ್ರಸ್ತುತ ಕಾರ್ಯಕ್ರಮದಲ್ಲಿ ಕೆ ಸಿ ಎಫ್ ಅಂತರ್ರಾಷ್ಟ್ರೀಯ ಸಮಿತಿ ಕಾರ್ಯದರ್ಶಿ ಅಬ್ದುಲ್ ಹಮೀದ್ ಪಿಎಂ ಹೆಚ್, ಹಕೀಂ ತುರ್ಕಳಿಕೆ, ಕೆ ಹೆಚ್ ಸಖಾಫಿ ಮೊದಲಾದವರು ಶುಭ ನುಡಿಗಳನ್ನು ಆಡಿದರು.

ಸಂಘಟನೆಯ ಗೌರವ ಸ್ಮರಣಕೆಗಳನ್ನು ಸ್ವೀಕರಿಸಿದ ಅಬ್ದುಲ್ಲಾ ಮದುಮೂಲೆಯವರು ಕೆಸಿಎಫ್ ನ ಸಾಮಾಜಿಕ ಸಾಂಸ್ಕೃತಿಕ ಸೇವಾ ಚಟುವಟಿಕೆಯೊಂದಿಗಿನ ಅಭಿಮಾನವನ್ನು ಹಾಗೂ ಉತ್ತರ ಕರ್ನಾಟಕದಲ್ಲಿ ನಡೆಸಿಕೊಂಡು ಬರುತ್ತಿರುವ ಶೈಕ್ಷಣಿಕ ಕ್ರಾಂತಿಯನ್ನೂ ಅಭಿನಂದಿಸಿ ಮಾತನಾಡಿದರು.

ಅದೇ ರೀತಿ ಸಮುದಾಯದ ಹಕ್ಕುಗಳ ರಕ್ಷಣೆಗೆ ವಿದ್ಯಾಭ್ಯಾಸ ಒಂದೇ ದಾರಿ, ಆದುದರಿಂದ ಯುವ ಸಮೂಹವು ವಿದ್ಯಾಭ್ಯಾಸಕ್ಕೆ ಒತ್ತು ನೀಡಬೇಕಾಗಿದೆ ಎಂದರು.

ಕಬೀರ್ ಬಾಯಂಬಾಡಿ ಸ್ವಾಗತಿಸಿದ ಕಾರ್ಯಕ್ರಮವನ್ನು ಉಮರ್ ಈಶ್ವರಮಂಗಲ ವಂದಿಸಿದರು.