ಅಬುಧಾಬಿ: ಪ್ರಥಮ ಮಹಿಳಾ ಪೊಲೀಸ್ ಅಧಿಕಾರಿಯಾಗಿ ನಯೀಮಿ

0
232

ಸನ್ಮಾರ್ಗ ವಾರ್ತೆ

ಅಬುಧಾಬಿ: ಡಿಜಿಟಲ್ ಅಪರಾಧ ವಿಶ್ಲೇಷಕರಾಗಿ ಕ್ಯಾಪ್ಟನ್ ಹಗರ್ ರಶೀದ್ ಅಲ್ ನಯೀಮಿ ಅಬುಧಾಬಿ ಪೊಲೀಸ್ ವಿಭಾಗಕ್ಕೆ ಸೇರ್ಪಡೆಯಾಗಿದ್ದಾರೆ.

ಅವರು ಇಂಟರ್‍ಪೋಲ್‍ನ ಇನ್ನೋವೇಶನ್ ಸೆಂಟರ್‌ನಲ್ಲಿ ಸಂಪರ್ಕ ಅಧಿಕಾರಿಯಾಗಿದ್ದು ಜೂನ್‍ನಲ್ಲಿ ಪ್ರಾರಂಭವಾಗಿರುವ ಇಂಟರ್‍ ನೇಶನಲ್ ಆರ್ಗನೈಝೇಶನ್‍ಗೆ ಮೂರು ವರ್ಷಗಳ ಕಾಲ ನಯೀಮಿ ಕೆಲಸ ಮಾಡಲಿದ್ದಾರೆ.

ಇಂಟರ್ ಪೋಲ್‍ನ ಅಧ್ಯಕ್ಷ ನಸರ್ ಅಲ್ ರಯಿಸಿ ಅವರು ನಯೀಮಿ ಅವರನ್ನು ಅಭಿನಂದಿಸಿದ್ದು. ಇಂಟರ್‍ಪೋಲ್‍ನಲ್ಲಿ ಸೈಬರ್ ಅಪರಾಧವನ್ನು ವಿಶ್ಲೇಷಿಸುವುದು ಅವರ ಜವಾಬ್ದಾರಿಯಾಗಿದೆ.

ಸಿಂಗಾಪುರದಲ್ಲಿರುವ ಇಂಟರ್‍ಪೋಲ್‍ನ ಇನ್ನೋವೇಶನ್ ಸೆಂಟರ್ ಗೆ ಸಂಪರ್ಕ ಅಧಿಕಾರಿಯಾಗಿ ಸೇರ್ಪಡೆಗೊಳ್ಳಲಿರುವ ನಯೀಮಿ ಡಿಜಿಟಲ್ ಅಪರಾಧಗಳ ವರ್ಚುವಲ್ ಮತ್ತು ವರ್ಧಿತ ರಿಯಾಲಿಟಿನಲ್ಲಿ ಪರಿಣತಿ ಹೊಂದಿರುವ ಮೊದಲ ಎಮಿರಾಟಿ ಮಹಿಳಾ ಪೊಲೀಸ್ ಅಧಿಕಾರಿಯಾಗಿದ್ದಾರೆ ಮತ್ತು ಅಬುಧಾಬಿ ಪೊಲೀಸ್ ಜನರಲ್ ಕಮಾಂಡ್‍ನಲ್ಲಿ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ಮೊದಲ ಮಹಿಳಾ ಪೊಲೀಸ್ ಅಧಿಕಾರಿ ಕೂಡಾ ಆಗಿರುವರು. ದುಬೈ ಪೊಲೀಸ್‍ ವಿಭಾಗವು 2017ರಲ್ಲಿ ದುಬೈ ಪೊಲೀಸ್ ಮಹಿಳಾ ಬೋರ್ಡ್ ಸ್ಥಾಪಿಸಿತ್ತು.