ಕಾಂಗ್ರೆಸ್ ತೊರೆದರೂ ನೆಹರೂ, ಗಾಂಧಿಯವರ ಆದರ್ಶಗಳನ್ನು ತೊರೆದಿಲ್ಲ- ಶರದ್ ಪವಾರ್

0
219

ಸನ್ಮಾರ್ಗ ವಾರ್ತೆ

ಪುಣೆ: ಕಾಂಗ್ರೆಸ್ ತೊರೆದು ಸ್ವಂತ ಪಾರ್ಟಿ ಕಟ್ಟಿದರೂ ತಾನು ಮಹಾತ್ಮಾಗಾಂಧಿ, ಜವಾಹರಲಾಲ್ ನೆಹರೂ, ಯಶ್ವಂತ್ ರಾವ್ ಚವ್ಹಾಣ್‍ರ ಆದರ್ಶನಗಳನ್ನು ಎಂದೂ ತೊರೆದಿಲ್ಲ ಎಂದು ಎನ್‍ಸಿಪಿ ಅಧ್ಯಕ್ಷ ಶರದ್‍ ಪವಾರ್ ಹೇಳಿದರು. ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ ರಚಿಸಲು 1999ರವೆಗೆ ಕಾದಿದ್ದಕ್ಕೆ ತನಗೆ ಯಾವುದೇ ಪಶ್ಚಾತ್ತಪಗಳಿಲ್ಲ ಎಂದು ಪುಣೆಯ ಒಂದು ಕಾರ್ಯಕ್ರಮದಲ್ಲಿ ಹೇಳಿದರು.

ನನ್ನ ಕುಟುಂಬ ಭಿನ್ನವಾದ ಆದರ್ಶವನ್ನು ಅನುಸರಿಸುತ್ತಿತ್ತು. ಅದು ಎಡಪಕ್ಷದ ಆದರ್ಶವಾಗಿತ್ತು. 1958ರಲ್ಲಿ ನಾನು ಪುಣೆಗೆ ಬಂದೆ. ನನ್ನಂತಹ ಯುವಕರು ಗಾಂದಿ, ನೆಹರೂ ಚವ್ಹಾಣ್‍ರ ಆದರ್ಶವನ್ನು ಮೈಗೂಡಿಸಿಕೊಂಡೆವು. ಕಾಂಗ್ರೆಸ್‍ಗಾಗಿ ದುಡಿದೆವು ಎಂದು ಹೇಳಿದರು. ಕಾಂಗ್ರೆಸ್ ಆ ಆದರ್ಶದ ಬೆನ್ನೆಲುಬು ಆಗಿತ್ತು. ಅದರಿಂದ ಹಿಂದೆ ಸರಿಯುವ ಕುರಿತು ತಾನು ಎಂದೂ ಯೋಚಿಸಲಿಲ್ಲ. ಕಾಂಗ್ರೆಸ್‍ನಿಂದ ತನ್ನನ್ನು ಉಚ್ಚಾಟಿಸಿದ್ದು ಎನ್‍ಸಿಪಿ ಕಟ್ಟಲು ಕಾರಣ ಎಂದು ಅವರು ಹೇಳಿದರು. ಅವರಿಂದ ಎಂದೂ ಸಹಿಸಲು ಆಗದಂತಹ ಕೆಲವು ಅಭಿಪ್ರಾಯಗಳನ್ನು ಕಾರ್ಯಕಾರಿಣಿ ಸಭೆಯಲ್ಲಿ ಹೇಳಿದ್ದಕ್ಕೆ ತಾನು ಬೆಲೆ ತೆರಬೇಕಾಯಿತು. ದೇಶದಲ್ಲಿ ಈಗಿನ ಪರಿಸ್ಥಿತಿ ಆತಂಕಕಾರಿಯಾಗಿದೆ. ಸಮಾನ ಆದರ್ಶದ ಎಲ್ಲ ಘಟಕಗಳು ಒಟ್ಟುಗೂಡಿಸಿ ಕೆಲಸ ಮಾಡುವ ಅಗತ್ಯವಿದೆ. ಕಾಂಗ್ರೆಸ್‍ಅನ್ನು ಪುನಃ ಮುಖ್ಯಧಾರೆಗೆ ತರಲು ಪವಾರ್‌ರ ಸಹಾಯದ ಅಗತ್ಯವಿದೆ ಎಂಬ ಸಾರ್ವಜನಿಕ ಅಭಿಪ್ರಾಯದ ಕುರಿತ ಪ್ರಶ್ನೆಗೆ ಅವರು ಹೀಗೆ ಉತ್ತರಿಸಿದರು.