ಹರಿದ್ವಾರ ದ್ವೇಷ ಭಾಷಣ ಪ್ರಕರಣ: ವ್ಯಾಪಕ ಖಂಡನೆಯ ಬಳಿಕ ವಾಸೀಮ್ ರಿಝ್ವಿ ಯಾನೆ ಜೀತೇಂದ್ರ ತ್ಯಾಗಿ ವಿರುದ್ಧ ಎಫ್‍ಐಆರ್

0
570

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಮುಸ್ಲಿಮರ ಸಾಮೂಹಿಕ ಹತ್ಯೆಗೆ ಬಹಿರಂಗ ಕರೆ ನೀಡಿದ ಪ್ರಕರಣದಲ್ಲಿ ಇತ್ತೀಚೆಗೆ ಹಿಂದೂ ಧರ್ಮಕ್ಕೆ ಮತಾಂತರಗೊಂಡ ವಾಸೀಮ್ ರಿಝ್ವಿ ಯಾನೆ ಜೀತೇಂದ್ರರ ನಾರಾಯಣ ತ್ಯಾಗಿ ವಿರುದ್ಧ ಕೊನೆಗೂ ಪೊಲೀಸರು ಕೇಸು ದಾಖಲಿಸಿದ್ದಾರೆ. ಹರಿದ್ವಾರದಲ್ಲಿ ನಡೆದ ಧರ್ಮ ಸಂಸದ್‍ನಲ್ಲಿ ಮುಸ್ಲಿಮರ ಕಗ್ಗೊಲೆಗೆ ಹಿಂದುತ್ವ ನಾಯಕರು ಕರೆ ನೀಡಿದ್ದರು. ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾದ ನಂತರ ತ್ಯಾಗಿಯ ಮೇಲೆ ಎಫ್‍ಐಆರ್ ದಾಖಲಿಸಲಾಗಿದ್ದು, ಇದುವರೆಗೆ ಬಂಧಿಸಲಾಗಿಲ್ಲ.

ಡಿಸೆಂಬರ್ 17ರಿಂದ 20ರವರೆಗೆ ಧರ್ಮ ಸಂಸತ್ತು ನಡೆದಿತ್ತು. ಉಗ್ರ ಭಾಷಣ ಮತ್ತು ಮುಸ್ಲಿಮರ ಹತ್ಯೆಗೆ ಕರೆ ನೀಡುತ್ತಿರುವ ಕ್ಲಿಪ್‍ಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ್ದವು. ಇದರ ವಿರುದ್ಧ ಮಾಜಿ ಸೈನಿಕರು, ಹೋರಾಟಗಾರರು, ಅಂತಾರಾಷ್ಟ್ರೀಯ ಟೆನಿಸ್ ಇತಿಹಾಸ ಮಾರ್ಟಿನ ನವ್ರಾಟಿಲೋವ ಮುಂತಾದವರು ಟೀಕಾ ಪ್ರಹಾರ ನಡೆಸಿದ್ದರು. ಆದರೆ, ನಾಲ್ಕು ದಿನಗಳ ಬಳಿಕ ಓರ್ವರ ಮೇಲೆ ಎಫ್‍ಐಆರ್ ದಾಖಲಿಸಿಕೊಳ್ಳಲಾಗಿದೆ. ತೃಣಮೂಲ ಕಾಂಗ್ರೆಸ್ ನಾಯಕ ಸಾಕೇತ್ ಗೋಖಲೆಯ ದೂರಿನಲ್ಲಿ ಜೀತೇಂದರ ತ್ಯಾಗಿಯ ಹೆಸರಿತ್ತು. ಇವರು ಮತ್ತು ಇತರರು ಕಾರ್ಯಕ್ರಮದಲ್ಲಿ ಇಸ್ಲಾಮಿನ ವಿರುದ್ಧ ಅಪಮಾನಕರ ಹೇಳಿಕೆ ನೀಡಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಬರೆಯಲಾಗಿದೆ.