ಮತ್ತೆ 52 ಮಂದಿಯ ಮಾರಣಹೋಮ ನಡೆಸಿದ ಇಸ್ರೇಲ್ ಪಡೆ; 42200 ದಾಟಿದ ಸಾವಿನ ಸಂಖ್ಯೆ

0
130

ಸನ್ಮಾರ್ಗ ವಾರ್ತೆ

ಅಂಕಾರಾ: ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಕನಿಷ್ಠ 52 ಫೆಲಸ್ತೀನಿಯರು ಸಾವನ್ನಪ್ಪಿದ್ದಾರೆ. ಕಳೆದ ವರ್ಷದಿಂದ ಒಟ್ಟಾರೆ ಸಾವಿನ ಸಂಖ್ಯೆ 42,227 ಕ್ಕೆ ಏರಿದ್ದು, ದಾಳಿಯಲ್ಲಿ ಸುಮಾರು 98,464 ಮಂದಿ ಗಾಯಗೊಂಡಿದ್ದಾರೆ ಎಂದು ಆರೋಗ್ಯ ಸಚಿವಾಲಯ ಭಾನುವಾರ ತಿಳಿಸಿದೆ.

“ಕಳೆದ 24 ಗಂಟೆಗಳಲ್ಲಿ ನಡೆದ ದಾಳಿಯಿಂದ ಇಸ್ರೇಲಿ ಪಡೆಗಳು 52 ಜನರನ್ನು ಕೊಂದರು ಹಾಗೂ 128 ಮಂದಿ ಗಾಯಗೊಂಡರು” ಎಂದು ಸಚಿವಾಲಯ ತಿಳಿಸಿದೆ.

ಅನೇಕ ಜನರು ಇನ್ನೂ ಅವಶೇಷಗಳ ಅಡಿಯಲ್ಲಿ ಮತ್ತು ರಸ್ತೆಗಳಲ್ಲಿ ಸಿಲುಕಿಕೊಂಡಿದ್ದಾರೆ. ಕುಟುಂಬಸವರಿಗೆ ಅವರನ್ನು ತಲುಪಲು ಸಾಧ್ಯವಾಗುತ್ತಿಲ್ಲ ಎಂದು ಹೇಳಲಾಗಿದೆ.