ಪೌರತ್ವ ಕಾನೂನನ್ನು ಯಾವ ಕಾಲದಲ್ಲಿಯೂ ಬೆಂಬಲಿಸುವುದಿಲ್ಲ- ಎ ಕೆ ಆಂಟನಿ

0
848

ಹೊಸದಿಲ್ಲಿ, ಡಿ. 28: ಪೌರತ್ವ ಕಾನೂನನ್ನು ಕಾಂಗ್ರೆಸ್ ಎಂದೂ ಬೆಂಬಲಿಸುವುದಿಲ್ಲ ಎಂದು ಮಾಜಿ ರಕ್ಷಣಾ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಎ.ಕೆ ಆಂಟನಿ ಹೇಳಿದರು. ಪೌರತ್ವ ಕಾನೂನು ಮತ್ತು ಎನ್‍ಆರ್ ಸಿ ಜಾರಿಗೊಳಿಸಿದರೆ ಭಾರತದ ಆತ್ಮ ನಾಶವಾಗಲಿದೆ. ಮೋದಿ, ಅಮಿತ್ ಶಾ ಜನರಲ್ಲಿ ತಪ್ಪು ಕಲ್ಪನೆಯಿರಿಸಲು ಯತ್ನಿಸುತ್ತಿದ್ದಾರೆ ಎಂದು ಅವರು ಹೇಳಿದರು.

ಕಾಂಗ್ರೆಸ್ ಆಡಳಿತ ಕಾಲದಲ್ಲಿ ಸಂವಿಧಾನ ವಿರುದ್ಧವಾಗಿ ಏನೂ ಮಾಡಿಲ್ಲ. ಒಟ್ಟುಗೂಡಿಸಲು ಸಾಧ್ಯವಿರುವ ಎಲ್ಲರನ್ನೂ ಪ್ರತಿಭಟನೆಯಲ್ಲಿ ಒಟ್ಟುಗೂಡಿಸುವೆವು. ರಾಜ್ಯಗಳ ವಿಷಯವನ್ನು ಆಯಾ ಪಾರ್ಟಿ ಸಮಿತಿ ತೀರ್ಮಾನಿಸಬೇಕಾಗಿದೆ. ಪ್ರತಿಭಟನೆಯ ಮುಂದೆ ಮೋದಿ -ಅಮಿತ್‍ಶಾ ಮಂಡಿಯೂರಬೇಕಾದೀತು ಎಂದು ಅವರು ಹೇಳಿದರು. ಪೌರತ್ವ ಕಾನೂನು ತಿದ್ದುಪಡಿಯ ವಿರುದ್ಧ ಕಾಂಗ್ರೆಸ್ ಸ್ಥಾಪನೆಯ ದಿನದಲ್ಲಿ ದೇಶವ್ಯಾಪಿ ಪ್ರತಿಭಟನೆಯನ್ನು ನಡೆಸಲಿದೆ ಎಂದು ಎಐಸಿಸಿ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎ ಕೆ ಆಂಟನಿ ಹೇಳಿದರು.

(source: https://www.madhyamam.com/india/ak-anotony-congress-india-news/657407)