ರಾಜ್ಯ ಮಟ್ಟದ ಕ್ವಿಝ್ ಸ್ಪರ್ಧೆಯಲ್ಲಿ ಆಲಿಯಾ ಕಾಲೇಜಿಗೆ ದ್ವಿತೀಯ ಸ್ಥಾನ

0
77

ಸನ್ಮಾರ್ಗ ವಾರ್ತೆ

ಕೋಝಿಕೋಡ್: ಪ್ರವಾದಿ ಮುಹಮ್ಮದ್ (ಸ)ರ ಸೀರತ್ ಪ್ರಯುಕ್ತ ಕೇರಳ ರಾಜ್ಯ ಸಂಘಟಿಸಿದ ರಾಜ್ಯಮಟ್ಟದ ಕ್ವಿಝ್ ಸ್ಪರ್ಧೆಯಲ್ಲಿ ಆಲಿಯಾ ಅರೆಬಿಕ್ ಕಾಲೇಜು ಕಾಸರಗೋಡ್ ಇಲ್ಲಿನ ವಿಧ್ಯಾರ್ಥಿಗಳಾದ ಮುಹಮ್ಮದ್ ಸಫ್ವಾನ್ ಬೋಳಂಗಡಿ ಹಾಗೂ ಅಬ್ದುಲ್ ಬಾಸಿತ್ ರ ತಂಡವು ದ್ವಿತೀಯ ಸ್ಥಾನ ಗಳಿಸಿದೆ.

ಮುಹಮ್ಮದ್ ಸಫ್ವಾನ್ ಬೋಳಂಗಡಿ ಮತ್ತು ಅಬ್ದುಲ್ ಬಾಸಿತ್ ಕುಶಾಲನಗರ

ಬಹಳ ಜಿದ್ದಾಜಿದ್ದಿನಿಂದ ಕೂಡಿದ ಸ್ಪರ್ದೆಯಲ್ಲಿ ಚಾಲಕ್ಕಾಡ್ ಇಸ್ಲಾಮಿಯಾ ಕಾಲೇಜಿನ ವಿಧ್ಯಾರ್ಥಿನಿಗಳಾದ ಹನ ವಿ.ಎ. ಹಾಗೂ ಫಾರಿಷಾ.ಎ.ಎ. ಪ್ರಥಮ ಸ್ಥಾನಿಯಾಗಿ ಉಮ್ರಾ ಯಾತ್ರೆಯ ಅರ್ಹತೆ ಗಳಿಸಿದರು.

ಮೂರನೇಯ ಸ್ಥಾನಿಯಾಗಿ ಮಾಹೆಯ ಅಲ್ ಪಲಾಹ್ ಕಾಲೇಜಿನ ಅಮ್ನ ಮತ್ತು ಶಹಾನ ಜಯಗಳಿಸಿದರು.

ಜಿಲ್ಲಾಮಟ್ಟದಲ್ಲಿ ವಿಜೇತರಾದ ವಿವಿಧ ಜಿಲ್ಲೆಗಳ ಒಟ್ಟು24 ಇಸ್ಲಾಮಿಕ್ ಕಾಲೇಜುಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಕಳೆದ ವರ್ಷ ಆಲಿಯಾ ಕಾಲೇಜು ತೃತೀಯ ಸ್ಥಾನ ಗಳಿಸಿತ್ತು.