ವಾಷಿಂಗ್ಟನ್, ಜು. 27: ಅಧ್ಯಕ್ಷ ಡೊನಾಲ್ಡ್ ಟ್ರಂಪ್ರೊಡನೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಸಮಾಲೋಚನೆ ನಡೆಸಿರುವ ಬೆನ್ನಿಗೆ ಎಫ್ -16 ಯಯದ್ಧ ವಿಮಾನವನ್ನು ನೀಡಲು ಅಮೆರಿಕ ನಿರ್ಧರಿಸಿದೆ. 125 ಮಿಲಿಯನ್ ಡಾಲರ್ ನ ವ್ಯವಹಾರಕ್ಕೆ ಅಮೆರಿಕದ ರಕ್ಷಣಾ ಸಚಿವಾಲಯ ಅನುಮತಿ ನೀಡಿದೆ. ಟ್ರಂಪ್ರ ನಿರ್ದೇಶ ಪ್ರಕಾರ 2018 ಜನವರಿಯಿಂದ ಪಾಕಿಸ್ತಾನಕ್ಕೆ ನೀಡಬೇಕಾಗಿದ್ದ ಸುರಕ್ಷೆಯನ್ನು ಹಿಂತೆಗೆದುಕೊಳ್ಳಲಾಗಿತ್ತು. ಆದರೆ, ತಾಂತ್ರಿಕ ಸಹಾಯ ನೀಡಬೇಕೆಂದು ಪಾಕಿಸ್ತಾನ ಕೇಳಿಕೊಂಡಿದ್ದರಿಂದ ಈಗ ವಿಮಾನಗಳನ್ನು ನೀಡಲಾಗುತ್ತಿದೆ.
ಪಾಕಿಸ್ತಾನದ ಸುರಕ್ಷೆಗೆ ಬೆಂಬಲ ನೀಡಲಾಗದೆನ್ನುವ ಹಿಂದಿನ ನೀತಿಯಲ್ಲಿ ಬದಲಾವಣೆಗಳಿಲ್ಲ. ಆದರೆ ಈಗಿನ ಪರಿಸ್ಥಿತಿಯಲ್ಲಿ ಎರಡು ದೇಶಗಳ ನಡುವಿನ ಸಂಬಂಧ ಉತ್ತಮಗೊಳಿಸುವ ಭಾಗವಾಗಿ ಎಫ್-16 ವಿಮಾನಗಳನ್ನು ಹಸ್ತಾಂತರಿಸಲು ತೀರ್ಮಾನಿಸಲಾಗಿದೆ ಎಂದು ಅಮೆರಿಕ ಸ್ಟೇಟ್ ಡಿಪಾರ್ಟ್ಮೆಂಟ್ ವಕ್ತಾರರು ತಿಳಿಸಿದ್ದಾರೆ.












