ಕರೆ ಮಾಡಿ ಮಾತನಾಡಿದ ಅಮಿತ್ ಷಾ: ಮಾತುಕತೆ ಸಫಲವಾದರೆ ಪ್ರತಿಭಟನೆ ನಿಲ್ಲಿಸುತ್ತೇವೆ ಎಂದ ರೈತ ಮುಖಂಡರು

0
233

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕಳೆದ ರಾತ್ರಿ ರೈತರಿಗೆ ಕರೆ ಮಾಡಿದ್ದು, ಮುಂದಿನ ವಾರ ಕೇಂದ್ರ ಸರಕಾರದೊಂದಿಗೆ ನಡೆಯಲಿರುವ ಮಾತುಕತೆ ಸಫಲವಾದರೆ ಮತ್ತು ಬೇಡಿಕೆಗಳು ಈಡೇರಿದರೆ ಪ್ರತಿಭಟನೆ ನಿಲ್ಲಿಸುವ ಚಿಂತನೆ ನಡೆಸಿರುವ ಬಗ್ಗೆ ರೈತ ಮುಖಂಡರು ಸೂಚನೆ ನೀಡಿದ್ದಾರೆ.

ರೈತರ ಮುಖಂಡರನ್ನು ಕರೆದು ಮೂರು ಹೊಸ ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಹಾಗೂ ಉಳಿದ ಸಮಸ್ಯೆಗಳ ಕುರಿತು ಚರ್ಚಿಸಲು ಐದು ಸದಸ್ಯರ ಸಮಿತಿಯನ್ನು ರೈತರು ಪ್ರಕಟಿಸಿದೆ.

ಸದ್ಯಕ್ಕೆ, ರೈತರು ತಮ್ಮ ಬೇಡಿಕೆಗಳಾದ ಕನಿಷ್ಠ ಬೆಂಬಲ ಬೆಲೆ ಅಥವಾ ಕೆಲವು ಬೆಳೆಗಳಿಗೆ ಬೆಲೆಯನ್ನು ಖಾತರಿಪಡಿಸುವ ಎಂಎಸ್‌ಪಿ ಕಾರ್ಯಕ್ರಮವನ್ನು ವಿಸ್ತರಿಸುವುದು ಮತ್ತು ಕಳೆದ ವರ್ಷದಿಂದ ಪ್ರತಿಭಟನಾಕಾರರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಕೈಬಿಡುವುದು ಮುಂತಾದ ಬೇಡಿಕೆಗಳನ್ನು ಸರಕಾರದ ಮುಂದಿಡುವುದಾಗಿ ತಿಳಿಸಿದ್ದಾರೆ.

ಅಮಿತ್ ಶಾ ಅವರು ನಿನ್ನೆ ರಾತ್ರಿ ಕರೆ ಮಾಡಿದರು. ಕಾನೂನುಗಳನ್ನು ಹಿಂದಕ್ಕೆ ತೆಗೆದುಕೊಳ್ಳಲಾಗಿದೆ ಮತ್ತು ನಡೆಯುತ್ತಿರುವ ಪ್ರತಿಭಟನೆಗೆ ಪರಿಹಾರವನ್ನು ಕಂಡುಕೊಳ್ಳುವಲ್ಲಿ ಸರ್ಕಾರವು ಗಂಭೀರವಾಗಿದೆ ಎಂದು ಹೇಳಿದರು. ಗೃಹ ಸಚಿವರು ಸರ್ಕಾರದೊಂದಿಗೆ ಸಂವಹನ ನಡೆಸಲು ಸಮಿತಿಯನ್ನು ಬಯಸಿದ್ದರು, ಆದ್ದರಿಂದ ನಾವು ಅಂತಿಮವಾಗಿ ಈಗ ಸಮಿತಿಯನ್ನು ಮಾಡಿದ್ದೇವೆ. ಎಂದು ರೈತ ಸಂಘದ ಮುಖಂಡ ಯುಧವೀರ್ ಸಿಂಗ್ ಎನ್‌ಡಿಟಿವಿಗೆ ತಿಳಿಸಿದ್ದಾರೆ.

ಸರಕಾರ ಮತ್ತು ಸಮಿತಿ ನಡುವಿನ ಸಭೆಯು ಡಿಸೆಂಬರ್ 7 ರಂದು ನಡೆಸಲಾಗುವುದು ಮತ್ತು ರಾಜಿ ಕಂಡುಬಂದರ ರೈತರು ಗಡಿಯಿಂದ ಹಿಂದಿರುಗುವ ಸಾಧ್ಯತೆಯಿದೆ ಎಂದವರು ಹೇಳಿದರು.

ಆಂದೋಲನದ ಭವಿಷ್ಯದ ಬಗ್ಗೆ ನಿರ್ಧರಿಸಲು ದೆಹಲಿ ಬಳಿಯ ಸಿಂಘು ಗಡಿಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಆಯೋಜಿಸಿದ್ದ ಸಭೆಯಲ್ಲಿ ಈ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ.