ಸನ್ಮಾರ್ಗ ವಾರ್ತೆ
ಚೆನ್ನೈ: ಬಿಜೆಪಿ ತೊರೆದು ಹೊಸ ರಾಜಕೀಯ ಸಂಘಟನೆ ಆರಂಭಿಸಿರುವ ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ, ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ತಮ್ಮ ‘ವೀ ದ ಲೀಡರ್ಸ್ ‘ ಸಂಘಟನೆಯ ಮೂಲಕ ಸ್ಪರ್ಧಿಸುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ.
ಮಣ್ಣಾರ್ಗುಡಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಸ್ಥಳೀಯ ಸಂಸ್ಥೆ ಚುನಾವಣೆ ಪ್ರವೇಶಿಸುವ ಬಗ್ಗೆ ಸುಳಿವು ನೀಡಿದರು. ಅವರು ಹೇಳಿರುವ ಪ್ರಕಾರ ತಮಿಳುನಾಡಿನಲ್ಲಿ ತಳಮಟ್ಟದಲ್ಲಿ ಬೇರೂರುವ ಉದ್ದೇಶದಿಂದ ‘ವೀ ದ ಲೀಡರ್ಸ್’ ಸಂಘಟನೆಯು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ.
ರಾಜ್ಯದ 234 ವಿಧಾನಸಭಾ ಕ್ಷೇತ್ರಗಳಲ್ಲಿ ಮತ್ತು 12,525 ಗ್ರಾಮ ಪಂಚಾಯತ್ಗಳಲ್ಲಿ ನಿಸ್ವಾರ್ಥ ಹೊಸ ನಾಯಕರನ್ನು ಬೆಳೆಸುವುದು ಸಂಘಟನೆಯ ಮುಖ್ಯ ಉದ್ದೇಶವೆಂದು ಅಣ್ಣಾಮಲೈ ಪ್ರತಿಪಾದಿಸಿದ್ದಾರೆ. ಚುನಾವಣೆಯ ನಂತರ ಜನರತ್ತ ತಿರುಗಿ ನೋಡದ ರಾಜಕೀಯ ಸಂಸ್ಕೃತಿಗೆ ಬದಲಾಗಬೇಕು ಎಂದ ಅವರು ಮತ ಪಡೆದ ನಂತರ ಬಣ್ಣಬದಲಾಯಿಸುವ ಕಳಪೆ ರಾಜಕೀಯ ಪ್ರವೃತ್ತಿಯನ್ನು ಬದಲಾಯಿಸಲು ಹೊಸ ನಾಯಕರಿಗೆ ಸಾಧ್ಯವಿದೆ. ಸ್ಥಳೀಯ ಸಂಸ್ಥೆ ಚುನಾವಣೆಯ ಸ್ಪರ್ಧೆಯ ಬಳಿಕ 2031ರ ವಿಧಾನಸಭಾ ಚುನಾವಣೆಯಲ್ಲೂ ತಮ್ಮದೇ ಆದ ವೀ ದ ಲೀಡರ್ಸ್ ಸ್ಪರ್ಧಿಸಲಿದೆ ಎಂದು ಅಣ್ಣಾಮಲೈ ಘೋಷಿಸಿದ್ದಾರೆ.












