ಸನ್ಮಾರ್ಗ ವಾರ್ತೆ
ಉತ್ತರಾಖಂಡದ ಹರಿದ್ವಾರದಲ್ಲಿ 22 ವರ್ಷದ ಯುವಕ ಮುಹಿಬ್ ಎಂಬವರನ್ನು ತೀವ್ರವಾಗಿ ಥಳಿಸಿದ ಘಟನೆ ವರದಿಯಾಗಿದೆ. ಅವರ ಮುಸ್ಲಿಂ ಐಡೆಂಟಿಟಿಯೇ ಈ ಹಲ್ಲೆಗೆ ಕಾರಣ ಎಂದು ಕುಟುಂಬಿಕರು ಹೇಳಿದ್ದಾರೆ. ಇವರು ಹರಿದ್ವಾರದಲ್ಲಿ ಎಲೆಕ್ಟ್ರಿಷಿಯನ್ ಆಗಿ ದುಡಿಯುತ್ತಿದ್ದು, ಪ್ರಜ್ಞಾ ಶೂನ್ಯರಾಗಿ ಬಿದ್ದಿದ್ದರು. ಬಳಿಕ ಅವರನ್ನು ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಆಸ್ಪತ್ರೆ ಆತನಿಗೆ ಪ್ರಾಥಮಿಕ ಚಿಕಿತ್ಸೆಯನ್ನು ನೀಡಿ ಕಳುಹಿಸಿಕೊಟ್ಟಿತು ನಮ್ಮಲ್ಲಿ ಸರ್ಜನ್ ಇಲ್ಲ ಎಂದು ಅದು ಹೇಳಿತು. ಆ ಬಳಿಕ ಅವರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತು.
ಆದರೆ ಕುಟುಂಬ ಆರ್ಥಿಕವಾಗಿ ತುಂಬಾ ಸೋತಿತ್ತು. ಆದ್ದರಿಂದ ಆಸ್ಪತ್ರೆಯಿಂದ ಮನೆಗೆ ಕರೆತರಲಾಯಿತು. ಮತ್ತೆ ಆರೋಗ್ಯ ಬಿಗಡಾಯಿಸಿದ ಕಾರಣ ಇನ್ನೋರ್ವ ಡಾಕ್ಟರ್ ಗೆ ತೋರಿಸಿದಾಗ ಅವರು ತಕ್ಷಣ ಆಸ್ಪತ್ರೆಗೆ ಸೇರಿಸುವಂತೆ ಸಲಹೆ ನೀಡಿದರು.
ಆ ಬಳಿಕ ಸ್ಥಳೀಯರು ಸೇರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು. ಪೊಲೀಸರು ಅಪರಿಚಿತರ ಮೇಲೆ ಪ್ರಕರಣ ದಾಖಲಿಸಿದ್ದಲ್ಲದೆ ಜೂನ್ 28ರಂದು ಪವನ್ ಎಂಬವನನ್ನು ವಿಚಾರಣೆ ನಡೆಸಿ ಬಿಟ್ಟುಬಿಟ್ಟಿದ್ದಾರೆ.
ಪೊಲೀಸರು ನಿರ್ಲಕ್ಷ ತೋರಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನಾಧಿಕಾರ್ ಪಾರ್ಟಿಯ ಸದಸ್ಯರು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.












