ಹೊಸದಿಲ್ಲಿ, ಆ. 9: ನೀರು, ಕರೆಂಟು ನಂತರ ದಿಲ್ಲಿ ನಿವಾಸಿಗಳಿಗೆ ಉಚಿತ ಇಂಟರ್ ನೆಟ್ ಕೊಡುಗೆಯನ್ನು ದಿಲ್ಲಿ ಮುಖ್ಯಮಂತ್ರಿ ಕೇಜ್ರಿವಾಲ್ ನೀಡಿದ್ದಾರೆ. ಗುರುವಾರ ಸಚಿವ ಸಂಪುಟ ಸಭೆಯ ಬಳಿಕ ಪ್ರತಿ ಬಳಕೆದಾರನಿಗೆ ಪ್ರತಿ ತಿಂಗಳು ಹದಿನೈದು ಜಿಬಿ ಉಚಿತ ಇಂಟರ್ ನೆಟ್ ನೀಡುವುದಾಗಿ ಹೇಳಿದರು. ಆದರೆ ದಿಲ್ಲಿ ಸರಕಾರ ಮೊದಲು ಎಲ್ಲರಿಗೂ ಉಚಿತ ಇಂಟರ್ ನೆಟ್ ನೀಡುವುದಾಗಿ ಹೇಳಿಕೊಂಡಿತ್ತು.
ದಿಲ್ಲಿ ಸರಕಾರ ಉಚಿತ ಇಂಟರ್ ನೆಟ್ ನೀಡುವ ಸಲುವಾಗಿ ಹನ್ನೊಂದು ಸಾವಿರ ವೈಫೈ ಹಾಟ್ ಸ್ಪಾಟ್ ಹಾಕಲಿದೆ. ದಿಲ್ಲಿಯ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲಿ ನೂರು ಹಾಟ್ ಸ್ಪಾಟ್ ಹಾಕಲಾಗುವುದು . ಇವಿಷ್ಟೇ ಅಲ್ಲ ಬಸ್ ಪ್ರಯಾಣಿಕರಿಗೆ ಈ ಸೌಲಭ್ಯ ಸಿಗಲಿದೆ. ಬಸ್ ನಿಲ್ದಾಣದಲ್ಲಿ 4000 ಹಾಟ್ಸ್ಪಾಟ್ ಹಾಕಲಾಗುವುದು ಎಂದು ಕೇಜ್ರಿವಾಲ್ ತಿಳಿಸಿದರು.












