ಎಸ್ಐಆರ್ (SIR) ದಾಖಲೆಗಳಿಗೆ ತಹಸೀಲ್ದಾರ್ ಕಚೇರಿಯಲ್ಲಿ ಪ್ರತ್ಯೇಕ ಕೌಂಟರ್ ತೆರೆಯುವಂತೆ ಆಗ್ರಹಿಸಿದ ಎಪಿಸಿಆರ್

0
311

ಸನ್ಮಾರ್ಗ ವಾರ್ತೆ

ಮಂಗಳೂರು: ಎಪಿ‌ಸಿಆರ್ ದಕ್ಷಿಣ ಕನ್ನಡ ಜಿಲ್ಲೆಯ ವತಿಯಿಂದ ಎಸ್ಐಆರ್ (SIR)ನ ಎ.ಎಸ್.ಡಿ.ಡಿ.ಒ (ASDDO) ಪಟ್ಟಿಯಲ್ಲಿರುವವರ ಪೈಕಿ ತಪ್ಪಾಗಿ ಸೇರ್ಪಡೆಯಾದವರನ್ನು ಪರಿಶೀಲಿಸಿ ಯಾವೊಬ್ಬ ಅರ್ಹ ಮತದಾರರು ಕರಡು ಮತದಾರರ ಪಟ್ಟಿಯಲ್ಲಿ ಬಿಟ್ಟುಹೋಗದಂತೆ ಹಾಗೂ ತಾರ್ಕಿಕ ವ್ಯತ್ಯಾಸದ (ಕಾಗುಣಿತ) ಕಾರಣಕ್ಕಾಗಿ ಹಕ್ಕು ಮತ್ತು ಆಕ್ಷೇಪಣೆ ಅವಧಿಯಲ್ಲಿ (Claims and Objection/Notice period) ನೋಟಿಸ್ ಪಡೆಯುವ ಮತದಾರರಿಗೆ ಚುನಾವಣಾ ಆಯೋಗ ಸೂಚಿಸಿದ 11 ದಾಖಲೆಗಳ ಪೈಕಿ ಕಂದಾಯ ಇಲಾಖೆಯಿಂದ ನೀಡುವ ಮೂರು ಪ್ರಮಾಣ ಪತ್ರಗಳಾದ ಜಾತಿ ಪ್ರಮಾಣ ಪತ್ರ, ಕಾಯಂ ವಾಸ ಸ್ಥಳ ಪ್ರಮಾಣ ಪತ್ರ ಮತ್ತು ವಂಶಾವಳಿ ಪ್ರಮಾಣ ಪತ್ರವನ್ನು ನಾಗರಿಕರಿಗೆ ಒದಗಿಸಲು ಎಲ್ಲ ತಹಸೀಲ್ದಾರ್ ಕಚೇರಿಯಲ್ಲಿ ಪ್ರತ್ಯೇಕ ಕೌಂಟರ್ ತೆರೆದು, ಅರ್ಜಿ ವಿಲೇವಾರಿಯನ್ನು ಆದ್ಯತೆಯ ಮೇರೆಗೆ ಕಾಲಮಿತಿ ಆಧಾರದಲ್ಲಿ ನೀಡಲು ಕ್ರಮ ಕೈಗೊಳ್ಳುವ ಮೂಲಕ ನಾಗರಿಕರಿಗೆ ಅನುಕೂಲ ಮಾಡಿಕೊಡಲು ದಕ್ಷಿಣ ಕನ್ನಡ ಅಪರ ಜಿಲ್ಲಾಧಿಕಾರಿ ರವರಿಗೆ ಭೇಟಿ ನೀಡಿ ಮನವಿ ಪತ್ರ ಸಲ್ಲಿಸಿ ಆಗ್ರಹಿಸಲಾಯಿತು.

ಈ ಸಂದರ್ಭದಲ್ಲಿ ಎ ಪಿ ಸಿ ಆರ್ ಜಿಲ್ಲಾಧ್ಯಕ್ಷ ಅಬೂಬಕ್ಕರ್ ಸಿದ್ದಿಕ್ ಎಂ ಪಿ, ಉಪಾಧ್ಯಕ್ಷ ಅಡ್ವೋಕೇಟ್ ಹನೀಫ್, ಕಾರ್ಯದರ್ಶಿ ಅಡ್ವೋಕೇಟ್ ಮುಜಾಯಿದ್, ಕಾರ್ಯಕರ್ತರಾದ ಅಮೀನ್ ಹಸನ್, ನಿಸಾರ್, ಜಿಲ್ಲಾ ವಖ್ಫ್ ಮಾಜಿ ಉಪಾಧ್ಯಕ್ಷರಾದ ಪಕೀರಬ್ಬ ಉಪಸ್ಥಿತರಿದ್ದರು.