ಸನ್ಮಾರ್ಗ ವಾರ್ತೆ
ದುಬೈ, ಮೇ. 20: ಕೋಮವಾದಿ, ಜನಾಂಗೀಯವಾದಿ ಹೇಳಿಕೆಗಳ ಮೂಲಕ ಸಾಮಾಜಿಕ ಮಾಧ್ಯಮಗಳಲ್ಲಿ ದ್ವೇಷಪೂರಿತ ವೈರಸ್ ಹರಡುತ್ತಿರುವ ಭಾರತದ ಕೋಮುವಾದಿಗಳ ವಿರುದ್ಧ ಅರಬ್ ಜಗತ್ತಿನಲ್ಲಿ ಪ್ರತಿಭಟನೆ ತೀವ್ರಗೊಂಡಿದೆ. ಗಲ್ಫ್ ದೇಶಗಳಲ್ಲಿ ಉದ್ಯಮ ಮತ್ತು ಕೆಲಸ ಮಾಡುವ ಸಂಘಪರಿವಾರದ ಬೆಂಬಲಿಗರು ಎಲ್ಲ ಮಿತಿಯನ್ನು ಮೀರಿ ಹೀನಾಯ ಭಾಷೆಯಲ್ಲಿ ಜನಾಂಗೀಯ ದ್ವೇಷ ಹರಡುವುದು ರೂಢಿಯಾಗುವುದರೊಂದಿಗೆ ಯುಎಇ ಪ್ರಮುಖರು ಈ ವಿಷಯದಲ್ಲಿ ಮಧ್ಯ ಪ್ರವೇಶಿಸಿದ್ದಾರೆ. ಯುಎಇ ಕಾನೂನಿನ ಮೂಲಕ ದೇಶ, ಧರ್ಮ, ಜಾತಿಗೆ ಸಂಬಂಧಿಸಿದ ತಾರತಮ್ಯವನ್ನು ನಿಷೇಧಿಸಿರುವ ಯುಎಇಯಂತಹ ದೇಶಗಳಲ್ಲಿ ಕೋಮುವಾದಿ ಪೋಸ್ಟ್ ಗಳ ಮೂಲಕ ಜನರ ನಡುವೆ ಒಡಕು ಸೃಷ್ಟಿಸುವವರ ವಿರುದ್ಧ ರಾಜ ಕುಟುಂಬಗಳು, ಸಾಂಸ್ಕೃತಿಕ ಕಾರ್ಯಕರ್ತರು, ಧಾರ್ಮಿಕ ವಿದ್ವಾಂಸರು ಧ್ವನಿ ಎತ್ತಿದ್ದಾರೆ.
ಅರಬ್ ಮಹಿಳೆಯರ ಕುರಿತು ಲೈಂಗಿಕ ಆಕ್ಷೇಪ ಎತ್ತಿದ ಬೆಂಗಳೂರು ದಕ್ಷಿಣ ಬಿಜೆಪಿ ಸಂಸದ ತೇಜಸ್ವಿ ಸೂರ್ಯರ ಪೋಸ್ಟನ್ನು ನೋಡಿದ ಹಲವು ಸಾಂಸ್ಕೃತಿಕ ಕಾರ್ಯಕರ್ತರು ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರಧಾನ ಮಂತ್ರಿಗೆ ಸಂದೇಶ ಕಳುಹಿಸಿದ್ದಾರೆ. ಕೆಲವು ವರ್ಷ ಮೊದಲು ತೇಜಸ್ವಿ ಸೂರ್ಯ ಮಾಡಿದ್ದ ಅಶ್ಲೀಲ, ಅವಹೇಳನಕಾರಿ ಟ್ವಿಟರ್ ಪೋಸ್ಟ್ ಅನ್ನು ನಂತರ ಅಳಿಸಿದ್ದರು. ಅದರ ಸ್ಕೀನ್ ಶಾಟ್ ಗಮನಕ್ಕೆ ಬಂದೊಡನೆ ಕುವೈಟ್ ಪ್ರಮುಖ ಸಾಂಸ್ಕೃತಿಕ ಕಾರ್ಯಕರ್ತರು ಕ್ರಮ ಜರಗಿಸುವಂತೆ ಪ್ರಧಾನಿಯನ್ನು ಆಗ್ರಹಿಸಿದ್ದಾರೆ.
ಯಾವುದಾದರೂ ಒಂದು ಘಟ್ಟದಲ್ಲಿ ವಿದೇಶ ಸಚಿವರಾಗಿ ಅರಬ್ ನಾಡಿಗೆ ಬರಲು ಅವಕಾಶ ಸಿಕ್ಕಿದರೆ ಹೊರಟು ಬಿಡಬೇಡಿ. ನಿಮ್ಮನ್ನು ನಾವು ಸ್ವಾಗತಿಸುವುದಿಲ್ಲ ಎಂದು ಮುನ್ನೆಚ್ಚರಿಕೆಯನ್ನೂ ನೀಡಿದ್ದಾರೆ.
ಹಲವು ಸಂಘಪರಿವಾರ ಕಾರ್ಯಕರ್ತರು ಕೊರೊನಾ ಪ್ರತಿರೋಧ ಕಾಲದಲ್ಲಿ ಕೋಮುವಾದ ಹರಡಿದ್ದು ನಂತರ ಗಲ್ಫ್ ದೇಶಗಳಲ್ಲಿ ಕ್ರಮವನ್ನು ಎದುರಿಸಬೇಕಾಗಿ ಬಂದಿದೆ. ಕೇರಳದ ಉದ್ಯಮಿ ಸೋಹನ್ ಓಯ್ ಅವರು ಕೋಮು, ಜನಾಂಗೀಯ ಆಕ್ಷೇಪದ ಕವಿತೆಯನ್ನು ಪೋಸ್ಟ್ ಮಾಡಿ ವಿವಾದಕ್ಕೊಳಗಾಗಿದ್ದು.ನಂತರ ತನ್ನ ಕವಿತೆಯಲ್ಲಿ ಕೋಮುವಾದ ಇರಲಿಲ್ಲ. ಗ್ರಾಫಿಕ್ ಡಿಸೈನ್ ಮಾಡಿದ ವ್ಯಕ್ತಿಯಲ್ಲಾದ ಪ್ರಮಾದ ಇದು ಎಂದು ರಾಯ್ ಹೇಳಿಕೊಂಡಿದ್ದರು. ಆದರೆ ಇವರ ಹಲವಾರು ಕವಿತೆಗಳು ಅತಿಥಿ ಕಾರ್ಮಿಕರು ಮತ್ತು ಅಲ್ಪಸಂಖ್ಯಾತರನ್ನು ಅವಹೇಳಿಸುವಂತಿದೆ ಎಂದು ಬೆಟ್ಟು ಮಾಡಿ ತೋರಿಸಲಾಗಿದೆ.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












