`ಪ್ರಭುವೇ ಕೊರೊನಾಕ್ಕೊಂದು ಪುಲ್‍ಸ್ಟಾಪ್ ಕೊಡು’- ಆಮೀನ್

0
1062

ಸನ್ಮಾರ್ಗ ವಾರ್ತೆ

ಅರಫಾ ಮಂಚಿ

ನೂಹರ ಕಾಲದ ವಿನಾಶಕಾರಿ ಜಲಪ್ರಳಯಕ್ಕೆ ಅಲ್ಲಾಹನು ಪುಲ್‍ಸ್ಟಾಪ್ ಕೊಟ್ಟ. ಪವಿತ್ರ ಕುರ್‍ಆನ್ ಅದನ್ನು ಹೀಗೆ ವಿವರಿಸಿದೆ- “ಓ ಭೂಮಿಯೇ, ನಿನ್ನ ನೀರನ್ನೆಲ್ಲ ಹೀರಿಕೊ, ಮತ್ತು ಆಕಾಶವೇ ತಡೆ! ಎಂದು ಅಪ್ಪಣೆಯಾಯಿತು. ಆ ಪ್ರಕಾರ ನೀರು ನೆಲದೊಳಗೆ ಇಂಗಿತು. ತೀರ್ಮಾನ ಆಗಿ ಹೋಯಿತು. ನೌಕೆಯು ಜೂದಿಯಲ್ಲಿ ತಂಗಿತು. ಅಕ್ರಮಿಗಳ ಜನಾಂಗ ದೂರ ತೊಲಗಿತೆಂದು ಹೇಳಲಾಯಿತು.” (11:44)

ಇಂತಹದೇ ಒಂದು ಕೊನೆ ಕೊರೊನಾ ಸೋಂಕಿಗೂ ಆಗಿಬಿಟ್ಟಿದ್ದರೆ… ನಿಜಕ್ಕೂ ಜಗದ್ರಕ್ಷನಾದ ಅಲ್ಲಾಹನನ್ನು ಪ್ರಾರ್ಥಿಸುವುದನ್ನು ಬಿಟ್ಟು ಬೇರೆ ಉಪಾಯವಿಲ್ಲ. ಯಾಕೆಂದರೆ ಈ ಕೊರೊನಾ ರೋಗಕ್ಕೆ ಮದ್ದಿಗಾಗಿ 80 ದೇಶಗಳು, 120 ಸ್ಥಳಗಳಲ್ಲಿ ಸಂಶೋಧನೆ ನಡೆಸುತ್ತಿವೆ. ಪರಿಣಾಮಕಾರಿ ಮದ್ದು ಈವರೆಗೂ ಕಂಡು ಹುಡುಕಲು ಯಾರಿಗೂ ಸಾಧ್ಯವಾಗಿಲ್ಲ. ಈಗ ಅಮೆರಿಕ, ಇಸ್ರೇಲ್, ಚೀನ ಮಾತಾಗಿ ಆರು ದೇಶಗಳು ನಾವು ಮದ್ದು ಕಂಡು ಹುಡುಕಿದ್ದೇವೆ ಅಂದವು. ಮದ್ದು ಕಂಡು ಹುಡುಕಿದ್ದರೆ ಯಾಕೆ ರೋಗಿಗಳ ಬಳಕೆಗೆ ಬಂದಿಲ್ಲ….! ಇಷ್ಟು ಸಾಲದ್ದಕ್ಕೆ ತನ್ನ ಸಂಶೋಧನೆಯನ್ನು ಚೀನ ಹ್ಯಾಕ್ ಮಾಡಿ ಕದಿಯುತ್ತಿದೆ ಎಂದು ಅಮೆರಿಕ ಹೇಳಿತು. ಯಾರ್ಯಾರು ಏನೇನೂ ಹೇಳ್ತಾರೋ. ಅಂತೂ ಇಂಥ ಆರೋಪಗಳಿಂದ ಮತ್ತು ಮನುಷ್ಯರ ಕೆಲಸಕ್ಕೆ ಬರದ ಉಪಯೋಗವಿಲ್ಲದ ಲಿಬರಲ್ ಥಿಂಕ್‍ಗಳಿಂದ ಕೊರೊನಾ ತಡೆಯಲು ಸಾಧ್ಯವೂ ಇಲ್ಲ.

ಹೀಗಾಗಿ ಅಂದದ್ದು, ನಾವೀಗ ಪ್ರವಾದಿ ನೂಹರ ಕಾಲದ ಜಲಪ್ರಳಯಕ್ಕೆ ಒಂದು ಪುಲ್ ಸ್ಟಾಪ್ ಕೊಟ್ಟಂತೆ ಕೊರೊನಾ ಸೋಂಕಿಗೂ ಪುಲ್‍ಸ್ಟಾಪ್ ಕೊಡು ಅಂದರೆ ಪೂರ್ಣ ವಿರಾಮ ಹಾಕು ಎಂದು ಅಲ್ಲಾಹನನ್ನು ಪ್ರಾರ್ಥಿಸಬೇಕು. ಮುಖ್ಯವಾಗಿ ವಿಶ್ವಾಸಿಗಳು. ವಿಶೇಷತಃ ಸತ್ಯವಿಶ್ವಾಸಿ ಗಳು. ಪವಿತ್ರ ಕುರ್‍ಆನ್‍ನಲ್ಲಿ ಘಟನೆಗಳನ್ನು ಅಲ್ಲಾಹನು ಹೇಳಿಕೊಟ್ಟದ್ದು ಸುಮ್ಮನಲ್ಲ ಅದು ಇಡೀ ಮನುಷ್ಯ ಕುಲಕ್ಕೆ ಮಾರ್ಗದರ್ಶಿ ಮತ್ತು ಪಾಠ ದಾಯಕ ಆಗಬೇಕೂಂತ. ಸಹಜೀವಿಗಳ ಮೇಲಿನ ದೌರ್ಜನ್ಯ ಕತೆಗಳು ಯಮನ್, ಲೆಬನಾನ್, ಈಜಿಪ್ಟ್, ಅಮೆರಿಕ, ಇಸ್ರೇಲ್ ಕೊನೆಗೆ ನಮ್ಮ ಭಾರತದಲ್ಲೂ ಇವೆ. ಸಹಜೀವಿಗಳ ಹತ್ಯೆ- ಕೊಲೆ ಹಾಗೂ ಸೈನಿಕ ಕಾರ್ಯಾಚರಣೆ ಗಳಿಗೆ ನಮ್ಮವರ ಅಧಿಕಾರದ ವ್ಯಾಮೋಹ ಮತ್ತು ರಾಜಕೀಯ ಮಹಾತ್ವಾಕಾಂಕ್ಷೆ ಕಾರಣ. ಧರ್ಮ, ಗೋವುಗಳಿಗಾಗಿ ಲಿಂಚಿಂಗೂ ನಡೆ ದಿದ್ದು ನಮ್ಮಲ್ಲೇ ತಾನೆ. ಕೊನೆಗೆ ಈಗ ಕೊರೊನ ವೈರಸ್ ಅನ್ನೇ ಈ ಮನುಷ್ಯರು ತಬ್ಲೀಗಿಗಳ ಕೊರಳಿಗೆ ಕಟ್ಟುವಷ್ಟು ನಿರ್ಲಜ್ಜರಾದರು…

ಹಾಗಂತ ಇಲ್ಲಿ ನಾನು ಆರಂಭದಲ್ಲಿ ನೂಹರ ಕಾಲದ ಜಲಪ್ರಳಯ ನಿಂತದ್ದನ್ನು ವಿವರಿಸಿದ್ದು ತಾನೆ. ಹಾಗಿದ್ದರೆ, ನೂಹರ ಕಾಲದಲ್ಲಿ ಜಲಪ್ರಳಯ ಬಂದಿದ್ಯಾಕೆ ಇರಬಹುದು?. ಪ್ರವಾದಿ ನೂಹರು ತನ್ನ ಜನರ ಮುಂದೆ ಅಲ್ಲಾಹನ ಏಕದೇವತ್ವವನ್ನು ಬೋಧಿಸಿದಾಗ ಜನರು ನಿರಾ ಕರಿಸಿದ್ದಕ್ಕೆ, ಸ್ವಚ್ಛಂದವಾಗಿ ಬದುಕುತ್ತಿದ್ದುದ್ದಕ್ಕೆ. ಒಟ್ಟಿನಲ್ಲಿ ಪ್ರವಾದಿ(ಅ) ತಂದ ಸತ್ಯವನ್ನು ವಿರೋಧಿಸಿದ್ದಕ್ಕೆ. ಆ ಜನರನ್ನು ಅಲ್ಲಾಹನಿಗೆ ನಿಯಂತ್ರಿಸಬೇಕಿತ್ತು ಅದಕ್ಕೆ. ಆಗಲೂ ಸತ್ಯ ಮಾರ್ಗದಲ್ಲಿದ್ದ ತನ್ನ ಪ್ರವಾದಿ ನೂಹರ(ಅ)ನ್ನು ಮತ್ತು ನೂಹರ ಮಾರ್ಗದಲ್ಲಿದ್ದ ಅವರ ಸಂಗಡಿಗರನ್ನು ಜಲಪ್ರಳಯದಿಂದ ಅಲ್ಲಾಹನು ಕಾ ಪಾಡು ತ್ತಾನೆ. ಅವರ ಜನತೆಯಲ್ಲಿ ಒಳ್ಳೆಯವರು ನೂಹರ ನೌಕೆಯಲ್ಲಿ ಹತ್ತಿ ಕೂತರು. ಜಲಪ್ರಳಯ ದಿಂದ ಪಾರಾಗಿ ಜೂದಿ ಪರ್ವತದಲ್ಲಿ ಬಂದು ಇಳಿದರು. ನಂತರ ಈ ನೌಕೆಯಲ್ಲಿದ್ದವರಿಂದ ಮಾನವ ಸಂತಾನ ಜಗತ್ತಿನಲ್ಲಿ ಮುಂದುವರಿ ಯಿತು ಎಂದು ಇಸ್ಲಾಮೀ ಇತಿಹಾಸ ವಿವರಿಸಿದೆ. ನಾವು ನೀವು ನೂಹರ ನೌಕೆಯವರ ಸಂತಾನ. ಈಗಲೂ ನಮ್ಮಲ್ಲಿ ಅಲ್ಲಾಹನಿಗೆ ಭಾಗೀದಾರಗೊಳಿ ಸುವ ಆರಾಧನಾ ರೀತಿ; ಸ್ವಚ್ಛಂಧ ಬದುಕುವ ಶೈಲಿ ಇವೆ. ಜೊತೆ ಜೊತೆಗೇ ಪ್ರವಾದಿ ನೂಹರ, ಇಬ್ರಾಹೀಮರ, ಮೂಸಾ, ಈಸಾರ ಕಾಲದಲ್ಲಿದ್ದ ಅದೇ ಕೆಡುಕುಗಳು ಪ್ರವಾದಿ ಮುಹಮ್ಮದರ(ಸ) ಅನುಯಾಯಿಗಳಿರುವ ನಮ್ಮ ಈ ಕಾಲದಲ್ಲಿಯೂ ನಮ್ಮ ನಡುವೆ ಇದೆ. ಪವಿತ್ರ ಕುರ್‍ಆನ್ ಘಟನೆ ಗಳನ್ನು ವಿವರಿಸಿದ್ದು ಇಂತಹ ಕಡು ಕೆಟ್ಟ ವಾತಾ ವರಣವನ್ನು ನಿಯಂತ್ರಿಸಿದ್ದು ಒಂದು ಪಾಠವಾಗಿ. ನಮ್ಮ ನಡುವೆ ಇಂದು ಕೊರೊನಾ ವೈರಸ್ ದೆಸೆಯಿಂದ ವಿರೋಧ ಇಲ್ಲದೆಯೇ ಲಾಕ್‍ಡೌನ್,
ಸಾಮಾಜಿಕ ಅಂತರ, ಮುಖಪರದೆ ಇತ್ಯಾದಿ ಜಾರಿಗೆ ಬಂತು. ಅಂದರೆ ಮನುಷ್ಯ ತನ್ನ ಅಸ್ತಿತ್ವಕ್ಕೆ ಅಪಾಯ ವಿದೆ ಎಂದಾದಾಗ ಸ್ವಯಂ ನಿಯಂತ್ರಿಸಿಕೊಂಡ.

ಇವಿಷ್ಟಕ್ಕೆ ಮನುಷ್ಯನ ಲಗಾಮಿಲ್ಲದ ಬದುಕುವ ರೀತಿ ಸೀಮಿತವಾಗಿಲ್ಲ.
ಪ್ರ

ವಾದಿ ಲೂತರ(ಅ)ರ ಕಾಲದಲ್ಲಿ ದುರ್ಜನರ ನಾಶಕ್ಕೆ ಕಾರಣವಾದ ಅದೇ ಲೈಂಗಿಕ ಅರಾಜಕತೆ ಇಂದು ವಿಶ್ವಾದ್ಯಂತ ವ್ಯಾಪಿಸಿದೆ. ಕೋರ್ಟೇ ಸಲಿಂಗರತಿಗೆ ಮನ್ನಣೆಯನ್ನೂ ನೀಡಿದೆ.

ಹೀಗೆ ಮನುಷ್ಯನ ಲೈಫು ಮತ್ತು ಲೈಫು ಸ್ಟೈಲು ದೇವನ ನೀತಿಗೆ ವಿರುದ್ಧ ಆದಾಗ ಅದನ್ನು ನಿಯಂತ್ರಿಸುವಲ್ಲಿ ನೆಲದ ಕಾನೂನುಗಳು ವಿಫಲವಾದಾಗ ಇವೆಲ್ಲಕ್ಕೆ ಮನುಷ್ಯ ಹಿತಕ್ಕಾಗಿ ಲಾಕ್‍ಡೌನ್ ಅಗತ್ಯ. ಹೀಗೆ ದೇವನೇ ನಿಯಂತ್ರಿ ಸಲು ಹೊರಟು ಬಿಡುವಾಗ ಕೊರೊನಾ ದುರಂತವು ನಮ್ಮ ಮುಂದೆ ಬಂದು ಬಿಡುತ್ತದೆ. ಮನುಷ್ಯರಿಗೆ ಸವಾಲಾಗಿ ನಿಲ್ಲುತ್ತದೆ.

ದೇವನು ಸ್ವಚ್ಛಂದ ಜನರಿಗೆ ಹಾಕಿದ ಲಗಾ ಮಿನ ಅರ್ಥಾತ್ ನಿಯಂತ್ರಣದ ಕಥೆಗಳನ್ನೇ ಪ್ರವಾದಿ ನೂಹರ ಜಲಪ್ರಳಯ, ಲೂತರ ಅಕ್ರಮಿ ಜನರ ಮೇಲೆ ಸುಡುಗಲ್ಲು ಶಿಕ್ಷೆ, ಶುಹೈಬರ ಜನಾಂಗದ ಅಕ್ರಮಿ ಜನರ ಮೇಲಿನ ಘನ ಸ್ಫೋಟ ಎಲ್ಲವೂ ಹೇಳುತ್ತಿದೆ. ಪವಿತ್ರ ಕುರ್‍ಆನ್ ದುರ್ಜನರ ವಿನಾಶಕ್ಕೆ ಕಾರಣವಾದ ಘಟನೆಗಳನ್ನು- “ನಿಮ್ಮ ಪ್ರಭು ಯಾವುದಾದರೂ ಅಕ್ರಮಿ ನಾಡನ್ನು ಹಿಡಿಯುವಾಗ ಅವನ ಹಿಡಿತ ಹೀಗೆ ಇರುತ್ತದೆ. ವಾಸ್ತವದಲ್ಲಿ ಅವನ ಹಿಡಿತವು ಬಹಳ ಬಿಗಿಯೂ ವೇದನಾಯುಕ್ತವೂ ಆಗಿರುತ್ತದೆ” (11: 102) ಎಂದಿದೆ. ಒಟ್ಟಿನಲ್ಲಿ ಇಂದಿನ ನಾವು ಅಂದಿನ ನೂಹರ ನಾವೆಯನ್ನು ಏರಿ ಜೂದಿ ಬೆಟ್ಟದಲ್ಲಿಳಿದವರ ಸಂತಾನವೇ. ಆಗಿದ್ದೇವೆ. ಆದ್ದ ರಿಂದ ಕೊರೊನಾ ನಮ್ಮವರ ಸ್ವಚ್ಛಂಧತೆ ರೀತಿಯ ವಿರುದ್ಧ ಎಚ್ಚರಿಕೆಯ ಕರೆಗಂಟೆಯಾಗಿ ಬಿಟ್ಟಿತೆ? ಸಾಧ್ಯತೆ ಇದೆ. ಈಗ ನಮ್ಮ ರಕ್ಷಣೆ ಬೇಕಿದೆ.

ನಾವು ಅಲ್ಲಾಹನಲ್ಲಿ ಕೈಯೆತ್ತಿ ಪ್ರಾರ್ಥಿಸ ಬೇಕಿದೆ. ಜೊತೆಗೆ ವಿಜ್ಞಾನಿಗಳ ಮದ್ದು ಕಂಡು ಹುಡುಕುವ ಪ್ರಯತ್ನವೂ ಮುಂದೆ ಸಾಗಲಿ. ವೈರಸ್‍ಗೆ ಒಂದು ಪುಲ್‍ಸ್ಟಾಪ್ ಬೀಳಬೇಕಿದೆ.

ಹಾಗಿದ್ದರೆ ಕೊರೊನಾ ಇಂದಿನ ಜನರ ಸ್ವಚ್ಛಂದ ಲೈಫು ಸ್ಟೈಲ್, ಲಿಬರಲ್ ಥಿಂಕಿಂಗ್, ಅರಾಜಕ ಬದುಕು ಹಾಗೂ ಸಹಜೀವಿಗಳ ಹತ್ಯೆ ಇತ್ಯಾದಿ ಅಕ್ರಮಗಳನ್ನು ನಿಲ್ಲಿಸುವ ಬಗ್ಗೆ ಮುನ್ನೆ ಚ್ಚರಿಕೆ ನೀಡುತ್ತಿದೆಯೇ? ಯಾಕೆಂದರೆ ಈಗ ಎಲ್ಲರಲ್ಲೂ ಒಂದೇ ಜಪ ಕೊರೊನಾದಿಂದ ಪಾರಾಗುವುದು ಹೇಗೇ? ಎಲ್ಲ ರನ್ನೂ ಅದರಿಂದಾಗಬಹುದಾದ ಸಾವಿನ ಭೀತಿ ಬೆಂಬತ್ತಿ ಜನರನ್ನು ಕೊರೊಂಟೈನ್ ಮತ್ತು ಲಾಕ್ ಡೌನ್ ಮಾಡಿಸಿ ನಿಯಂತ್ರಿಸುತ್ತಿದೆ. ಒಟ್ಟಿನಲ್ಲಿ ಮನುಷ್ಯ ತನ್ನನ್ನು ನಿಯಂತ್ರಿಸುವುದೇ ಕೊರೊನಾ ಮುಂದಿಟ್ಟ ಅಪಾಯಕ್ಕೆ ಸದ್ಯದ ಪರಿಹಾರವಾಗಿದೆ. ಇರಲಿ,

ಒಂದ್ಸಲ, ಕೊರೊನಾದ ಲಾಕ್‍ಡೌನ್ ಅನ್ನು ಪರ್ದಾಕ್ಕೆ ಹೋಲಿಸಿದಾಗ ಫೇಸ್‍ಬುಕ್ ಮಿತ್ರ ರೊಬ್ಬರು ಕೊರೊನಾಕ್ಕೂ ಇಸ್ಲಾಮಿನ ಪರ್ದಾ (ಹಿಜಾಬ್, ನಿಕಾಬ್) ನಿಯಮಕ್ಕೂ ಏನು ಸಂಬಂಧ? ಎಂದು ಪ್ರಶ್ನಿಸಿದ್ದರು.

ಹೀಗಿದ್ದೂ ಈ ವಿಷಯವನ್ನು ಇಲ್ಲಿ ಎತ್ತಿ ಕೊಳ್ಳೋಣ, ಅಂದರೆ ಪರ್ದಾವನ್ನು ಪವಿತ್ರ ಕುರ್‍ಆನ್ ಹೀಗೆ ಬಿಂಬಿಸುತ್ತದೆ.

“ಪೈಗಂಬರರೇ, ಸತ್ಯವಿಶ್ವಾಸಿಗಳೊಡನೆ ತಮ್ಮ ದೃಷ್ಟಿಗಳನ್ನು ಕೆಳಗಿರಿಸಿಕೊಳ್ಳಲಿಕ್ಕೂ ಮತ್ತು ಗುಪ್ತಾಂಗ ಗಳನ್ನು ರಕ್ಷಿಸಿಕೊಳ್ಳಲಿಕ್ಕೂ ಹೇಳಿರಿ.” (2430)

“ಪೈಗಂಬರರೇ, ಸತ್ಯವಿಶ್ವಾಸಿನಿಯರೊಡನೆ ಹೇಳಿರಿ- ಅವರು ತಮ್ಮ ದೃಷ್ಟಿಗಳನ್ನು ಕೆಳಗಿರಿಸಿ ಕೊಳ್ಳಲಿ ಮತ್ತು ತಮ್ಮ ಗುಪ್ತಾಂಗಗಳನ್ನು ರಕ್ಷಿಸಿ ಕೊಳ್ಳಲಿ ಮತ್ತು ತಮ್ಮ ಶೃಂಗಾರಗಳನ್ನು ತೋರಿಸ ದಿರಲಿ (ಆದರೆ) ಸ್ವಯಂ ಪ್ರಕಟವಾಗುವಂತಹುವು ಗಳನ್ನು ಹೊರತು ಮತ್ತು ತಮ್ಮ ಎದೆಯ ಮೇಲೆ ತಮ್ಮ ಮೇಲು ಹೊದಿಕೆಯ ಸೆರಗನ್ನು ಹಾಕಿ ಕೊಂಡಿರಲಿ.” (24: 31)

ಇವಿಷ್ಟು ಮನುಷ್ಯ ಚರಿತ್ರೆ ಶುದ್ಧಿಗೆ ಕರೆ ನೀಡುವ ಸೂಕ್ತಗಳು. ಕೊರೊನಾದಿಂದ ಹೆಚ್ಚು ಸಾವುಗಳಿಗೆ ಇಂದಿನ ಜನರ ಜೀವನ ಶೈಲಿಯೂ ಒಂದು ಕಾರಣವಾಗಿದೆ ಎಂದು ಇಂಗ್ಲೆಂಡಿನ ವೈದ್ಯ ಡಾ| ಅಸೀಮ್ ಮಲ್ಹೊತ್ರ ಹೇಳಿದ್ದಾರೆ. ಈ ಅರ್ಥದಲ್ಲಿ ಮನುಷ್ಯನ ವರ್ತನೆ ಚಾರಿತ್ರ್ಯ ಸರಿಯಾದರೆ ಬಹುತೇಕ ಎಲ್ಲವೂ ಸರಿಯಾಗುತ್ತದೆ. ಪರ್ದಾ ಗಂಡಿಗಿರಲಿ, ಹೆಣ ್ಣ ಗಿರಲಿ ಸ್ಚಚ್ಛಂಧವಾಗಿ ವಿಹರಿಸದಂತೆ ಲಾಕ್‍ಡೌನ್ ವಿಧಿಸುತ್ತಿದೆ. ಇದು ಫೇಸ್‍ಬುಕ್‍ನ ಆ ಗೆಳೆಯರಿಗೂ ಗೊತ್ತು. ಹೀಗೆ ಪರ್ದಾ ಮನುಷ್ಯನ ಸ್ವಚ್ಛಂದ ಜೀವನ ಶೈಲಿಗೆ ಲಾಕ್‍ಡೌನಾಗುತ್ತದೆ.
ಕೊರೊನಾ ವೈರಸ್ ಕೂಡ ಇಂದು ಮನುಷ್ಯನ ಸ್ವಚ್ಛಂಧ ಜೀವನಕ್ಕೆ ಖಂಡಿತಾ ಲಾಕ್‍ಮಾಡಿದೆ. ಧಾರ್ಮಿಕವಾಗಿ ಬದುಕಲು ಒತ್ತಾಯಿಸುತ್ತಿದೆ ಎನ್ನ ಬಹುದು. ಧರ್ಮ ಕೇವಲ ಆಡಿಕೊಂಡು ಸುಮ್ಮನಾಗಿ ಬಿಡುವ ವಿಷಯವೇ?

ಪವಿತ್ರ ಕುರ್‍ಆನ್ ಹೇಳುತ್ತಿದೆ, “ಅಲಾಲಿಲ್ಲಾಹಿದ್ದೀನುಲ್ ಖಾಲಿಸ್ (ಎಚ್ಚರಿಕೆ! ಧರ್ಮವು ನಿಷ್ಕಳಂಕವಾಗಿ ಕೇವಲ ಅಲ್ಲಾಹನ ಹಕ್ಕಾಗಿದೆ.” (ಪವಿತ್ರ ಕುರ್‍ಆನ್-39:3)

ಅಲ್ಲಾಹನು ಧರ್ಮವನ್ನು ಮನುಷ್ಯರಿಗೆ ಸರಿ ಯಾದ ಜೀವನ ಮಾರ್ಗವಾಗಿ ತೋರಿಸಿದ್ದಾನೆ. ಧಾರ್ಮಿಕ ಜೀವನ ಅಲ್ಲಾಹನಿಗೆ ದಾಸನು ಸಲ್ಲಿಸುವ ಹಕ್ಕು ಆಗಿದೆ. ಹಾಗಿದ್ದರೆ ಮನುಷ್ಯ ದೇವನ ಇತಿ ಮಿತಿ ಮೀರಿ ಸ್ವಚ್ಛಂಧವಾಗಿ ಬದುಕುವುದು ದೇವನ ಹಕ್ಕಿನ ಉಲ್ಲಂಘನೆಯಾಗುತ್ತದೆ. ಅದು ಮುಚ್ಚಿ ಹೋಗಬೇಕು. ಲಾಕ್‍ಡೌನ್ ಬೀಳ್ಭೇಕು. ಯಾಕೆಂದರೆ ದೇವನು ಜಗತ್ತಿನಲ್ಲಿ ಶಾಂತಿ ನೆಲೆಯಾಗುವುದನ್ನು ಬಯಸುತ್ತಾನೆ.

ನೂಹರ ಕಾಲದ ಜಲಪ್ರಳಯ ಇಂದಿನ ಸಂದರ್ಭದಂತಹ ಕೊರೊನಾ ಮಹಾಮಾರಿ, ಲೂತರ ದುರಾಚಾರಿ ಜನರ ಮೇಲೆರಗಿದ ಸುಡು ಗಲ್ಲು ಶಿಕ್ಷೆ, ಶುಹೈಬರ ಜನರ ಮೇಲಿನ ಹಠಾತ್ ಘನ ಸ್ಫೋಟಗಳೆಲ್ಲ ಜಗತ್ತಿನ ಶಾಂತಿಗಾಗಿತ್ತು. ಹಾಗಿದ್ದರೆ ಈಗಿನ ಕೊರೊನಾ ಶಾಂತಿಗಾಗಿಯೇ ಇದೆ.

“ನಾವು ನೂಹರನ್ನು ಅವರ ಜನಾಂಗದ ಕಡೆಗೆ ಕಳುಹಿಸಿದ್ದಾಗ (ಇಂತಹ ಪರಿಸ್ಥಿತಿಯೇ ಇತ್ತು) ನೂಹರು ಇಂತೆಂದರು” ನಾನು ನಿಮಗೆ ಸುವ್ಯಕ್ತ ಎಚ್ಚರಿಕೆ ನೀಡುತ್ತೇನೆ. ನೀವು ಅಲ್ಲಾಹನ ಹೊರತು ಇನ್ನಾರ ದಾಸ್ಯ ಆರಾಧನೆಯನ್ನೂ ಮಾಡಬೇಡಿರಿ. ಅನ್ಯಥಾ ನಿಮ್ಮ ಮೇಲೆ ಒಂದು ದಿನ ವೇದನಾಯುಕ್ತ ಯಾತನೆ ಎರಗುವುದೆಂದು ನಾನು ಭಯಪಡುತ್ತೇನೆ” (ಹೂದ್11: 25-26) ಪವಿತ್ರ ಕುರ್‍ಆನ್‍ನ ಈ ಸಂದೇಶ ನೂಹರ ಕಾಲದ ಜಲಪ್ರಳಯಕ್ಕೆ ಕಾರಣ ತಿಳಿಸುತ್ತಿದೆ.

ಹಾಗಿದ್ದರೆ, ಇಂದು ನಮ್ಮ ನಡುವೆ ಇರುವ ವರ್ತನೆ ಹೇಗಿದೆ, “ಭೂಮಿಯ ಮೇಲೆ ಕ್ಷೋಭೆ ಯನ್ನುಂಟು ಮಾಡದಿರಿ ಎಂದು ಅವರೊಡನೆ ಹೇಳಿದಾಗಲೆಲ್ಲ. ಅವರು, ನಾವು ಸುಧಾರಕರು ಮಾತ್ರ ಎಂದು ಹೇಳುತ್ತಾರೆ ಜಾಗ್ರತೆ! ವಾಸ್ತವದಲ್ಲಿ ಅವರೇ ಗೊಂದಲಕಾರಿಗಳು ಆದರೆ ಅವರಿಗೆ ಬೋಧವಿರುವುದಿಲ್ಲ.” (2:12)

ಇಂದು ಯಾರು ಹೇಗೆ ಎಂದು ಹೇಳಲಾಗ ದಷ್ಟು ನಮ್ಮ ನಡುವೆ ಗೊಂದಲಗಳಿವೆ.

ಭೂಮಿಯಲ್ಲಿ ಕ್ಷೋಭೆಯೆಬ್ಬಿಸುವವರು ಯಾರು? ನಿಜವಾದ ಸುಧಾರಕರು ಯಾರೆಂದು ಅರಿತುಕೊಳ್ಳಲಾಗದಷ್ಟು ಅಬ್ಬರದ ಪ್ರಚಾರಗಳು ಪ್ರಚಾರ ತಂತ್ರಗಳು ನಡೆದುಬಿಡುತ್ತಿದ್ದು ಎಲ್ಲರೂ ತಮ್ಮ ಹೆಚ್ಚುಗಾರಿಕೆಗಳನ್ನು ಹೇಳಿಕೊಳ್ಳುತ್ತಾರೆ. ಸ್ವಯಂ ಬಿಂಬಿಸಿಕೊಳ್ಳುತ್ತಾರೆ. ಒಳಿತನ್ನು ಹೇಳವವನು ಯಾರು? ಯಾರು ಕೆಡುಕನ್ನು ಪ್ರಾಯೋಜಿಸುವುದು ಯಾರು? ಆದ್ದರಿಂದ ಸ್ವಚ್ಛಂದ ಜೀವನ ಶೈಲಿಗೆ ಲಾಕ್‍ಡೌನ್ ಹಾಕಿ. ದೇವ ಧರ್ಮದಂತೆ ಜೀವನ ನಡೆಸುವಂತೆ ಕೊರೊನಾ ಕರೆ ನೀಡುತ್ತಿದೆ.

ಇರಲಿ, ಮೊದಲೇ ತಿಳಿಸಿದಂತೆ ಪರ್ದಾವನ್ನು ಕೊರೊನಾದ ಜೊತೆಗಿಟ್ಟು ನಾನು ಹೇಳಿದ್ದಕ್ಕೆ ಸೂಚಿಸಬಹುದಾದ ಇನ್ನೂ ಒಂದು ಕಾರಣವಿದೆ. ಪಾಶ್ಚಾತ್ಯ ಸಮುದಾಯದಲ್ಲಿ ಮುಸ್ಲಿಂ ಮಹಿಳೆಯರ ಪರ್ದಾ ದೊಡ್ಡ ವಿವಾದವಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಪರ್ದಾವನ್ನು ಹಿಡಿದೆಳದು ಹರಿದದ್ದು, ಪರ್ದಾಧಾರಿಣ ಯರಿಗೆ ಹೊಡೆದದ್ದು, ಪರ್ದಾ ನಿಷೇಧಿಸಿ ಅಲ್ಲಿನ ಸರಕಾರ ಕಾನೂನು ತಂದ್ದದ್ದು ಇಷ್ಟೆಲ್ಲ ಅಸಹ ನೆಯಿದ್ದ ಅದೇ ಜನರು ಈಗ ಮನೆಯಿಂದ ಹೊರಗೆ ಕಾಲಿಡುವುದಿದ್ದರೆ ಮುಖ ಗವಸು ಧರಿಸಬೇಕು. ಕೈಗೆ ಗ್ಲೌಸ್ ಧರಿಸಬೇಕು ಎನ್ನುತ್ತಿದ್ದಾರೆ. (ಮುಸ್ಲಿಮ್ ಮಹಿಳೆಯರು ಪಾಶ್ಚಾತ್ಯ ಮಹಿಳೆಯರಿಗಿಂತ ಭಿನ್ನವಾಗಿ ಪರ್ದಾ ಎಂದು ಧರಿಸಿದ್ದು ಇಷ್ಟನ್ನು ಮತ್ತು ಮೈಯಿಡೀ ಬಟ್ಟೆಯನ್ನು) ಇಂದು ಕೊರೋನಾ ಕೂಡ ವ್ಯಾಪಕ ಪರ್ದಾ ನಿಯಮವನ್ನೇ ಇವರಿಂದ ಜಾರಿಗೆ ತಂರಿಸುತ್ತಿದೆನ್ನಿ.

ಮನುಷ್ಯ ಬದಲಾಗದಿದ್ದರೆ ಪರಿಸ್ಥಿತಿ, ಪರಿಸರ ಅವನನ್ನು ಬದಲಾಯಿಸುತ್ತದೆ. “ನಾನು ಯಾವ ಸಂದೇಶವನ್ನು ಕೊಟ್ಟು ನಿಮ್ಮ ಬಳಿಗೆ ಕಳುಹಿಸಲ್ಪಟ್ಟಿ ದ್ದೆನೊ ಅದನ್ನು ನಾನು ನಿಮಗೆ ತಲುಪಿಸಬಿಟ್ಟಿದ್ದೇನೆ. ಇನ್ನು ನನ್ನ ಪ್ರಭೂ ನಿಮ್ಮ ಸ್ಥಾನದಲ್ಲಿ ಇನ್ನೊಂದು ಜನಾಂಗವನ್ನು ಎಬ್ಬಿಸುವನು. ನೀವು ಅವನಿಗೆ (ಅಲ್ಲಾಹನಿಗೆ) ಯಾವ ಹಾನಿಯನ್ನೂ ಮಾಡಲಾರಿರಿ. ನಿಶ್ಚಯವಾಗಿಯೂ ನನ್ನ ಪ್ರಭೂ ಸಕಲ ವಸ್ತುಗಳ ಸಂರಕ್ಷಕನು.” ಪ್ರವಾದಿ ಹೂದರು(ಅ) ಸತ್ಯ ನಿಷೇಧಿಗಳ ಮುಂದೆ ಎಚ್ಚರಿಸಿದ್ದ ಮಾತಿದು.

ಹೌದಲ್ಲ ಮನುಷ್ಯ ಒಳ್ಳೆಯವನಾಗಿದಿದ್ದರೆ ಜಗತ್ತಿನಲ್ಲಿ ನಿರಾಶ್ರಿತರ ಸಮಸ್ಯೆಯೂ ಇರುತ್ತಿರಲಿಲ್ಲ. ಪರಸ್ಪರ ಪ್ರೀತಿ ವಿಶ್ವಾಸವೇ ತುಂಬಿ ಇರುತ್ತಿತ್ತು. ಏಕದೇವ ವಿಶ್ವಾಸದಲ್ಲಿ ಮಾನವತೆ ಗಟ್ಟಿಯಾಗಿರುತ್ತಿತ್ತು. ಏ ನಿದ್ದರೂ ಸದ್ಯ ಕೊರೊನಾಕ್ಕೊಂದು ಪುಲ್‍ಸ್ಟಾಪ್ ಬೇಕಿದೆ. ನೂಹರ ಕಾಲದ ಪುಲ್‍ಸ್ಟಾಪಿನಂತೆ ಅದಿರಲಿ. ಇದು ಅಲ್ಲಾಹನಿಂದಲೇ ಸಾಧ್ಯ. ಅಲ್ಲಾಹ ನಲ್ಲಿ ಕೈ ಎತ್ತಿ ಪ್ರಾರ್ಥಿಸೋಣ “ಕೊರೊನಾಕ್ಕೊಂದು ಪುಲ್‍ಸ್ಟಾಪ್ ಕೊಡು ದೇವನೇ” -ಆಮೀನ್

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.