ಭಾರತದಲ್ಲಿ ಮುಸ್ಲಿಮರನ್ನು ಗುರಿ ಮಾಡಲಾಗುತ್ತಿದೆಯೇ?

0
122

ಸನ್ಮಾರ್ಗ ವಾರ್ತೆ

✍️ ಎ. ರಶೀದುದ್ದೀನ್

ಮುಸ್ಲಿಮರನ್ನು ಬೇಟೆಯಾಡುವ ದೇಶಗಳ ಪಟ್ಟಿಯಲ್ಲಿ ಭಾರತದ ಹೆಸರನ್ನು ಸೇರಿಸಿದ್ದಕ್ಕೆ ಕೇಂದ್ರ ವಿದೇಶಾಂಗ ಸಚಿವಾಲಯವು ಇರಾನನ್ನು ತೀವ್ರವಾಗಿ ವಿಮರ್ಶಿಸಿದ ದಿನದಂದು ಈ ಲೇಖನ ಬರೆಯುತ್ತಿದ್ದೇನೆ. ಭಾರತದಲ್ಲಿ ಮುಸ್ಲಿಮರಿಗೆ ಅಂತಹ ಸಮಸ್ಯೆಗಳೇನೂ ಇಲ್ಲವೆಂಬುದು ಕೇಂದ್ರ ಮಂತ್ರಿ ಜಯಶಂಕರ್‌ರ ವಾದ. ತನ್ನ ದೇಶದ ಅಲ್ಪಸಂಖ್ಯಾತರ ಸಮಸ್ಯೆಯನ್ನು ಪರಿಹರಿಸಿದ ಬಳಿಕ ಇರಾನ್ ಇತರರ ವಿಷಯದಲ್ಲಿ ತಲೆ ಹಾಕಿದರೆ ಸಾಕೆಂದು ಬಹಳ ತೀಕ್ಷ್ಣ ಭಾಷೆಯಲ್ಲಿ ಭಾರತ ಪ್ರತ್ಯುತ್ತರ ನೀಡಿದೆ. ದೆಹಲಿ ಗಲಭೆ ಮತ್ತು ಸಿ.ಎ.ಎ. ಕಾಯ್ದೆ ಘೋಷಿಸಿದಾಗಲೂ, ಬಾಬರಿ ಮಸೀದಿ ಧ್ವಂಸದ ಸಂದರ್ಭದಲ್ಲೂ ಇರಾನ್‌ನ ಧಾರ್ಮಿಕ ನಾಯಕ ಆಯತುಲ್ಲಾ ಅಲಿ ಖಾಮಿನಾಯವರು ಇದೇ ರೀತಿಯ ಹೇಳಿಕೆಯನ್ನು ನೀಡಿದ್ದರು. ಸಿ.ಎ.ಎ. ಕಾಯ್ದೆಗೆ ಸಂಬಂಧಿಸಿದಂತೆ ಭಾರತವನ್ನು ವಿಮರ್ಶಿಸಿದವರಲ್ಲಿ ವಿಶ್ವಸಂಸ್ಥೆ ಕೂಡಾ ಸೇರಿದೆ. ಅಸ್ಸಾಂ ಮತ್ತು ಇತರ ಕಡೆಗಳಲ್ಲಿ ಹಲವು ವರ್ಷಗಳಿಂದ ನಡೆಯುತ್ತಿರುವುದು ಮುಸ್ಲಿಮ್ ಬೇಟೆಯಲ್ಲ. ಕಾನೂನಿನಗೆ ಭಾಗವಾದ ಸ್ವಾಭಾವಿಕ ಪ್ರಕ್ರಿಯೆಗಳು ಎಂದೇ ವಿದೇಶಾಂಗ ಸಚಿವಾಲಯದ ಹೇಳಿಕೆಯಿಂದ ವಿಶ್ವದ ದೇಶಗಳು ಅರ್ಥಮಾಡಿಕೊಳ್ಳಬೇಕು. ಆದರೆ ವಾಸ್ತವ ಅದಲ್ಲ. ಅಲ್ಲಿ ನಡೆಯುತ್ತಿರುವುದೇ ಬೇರೆ.

28 ಮಂದಿಯನ್ನು ಇತ್ತೀಚೆಗೆ ಬಂಧೀಖಾನೆಗೆ ಕಳುಹಿಸಲಾಗಿದೆ. ಅವರೆಲ್ಲರೂ ಮುಸ್ಲಿಮರೆಂಬುದು ಹೊರಬಂದ ವರದಿ. ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಕೂಡಲೇ ಕೆಲಸ ಆರಂಭಿಸಿದ ಬಂಧನ ಕೇಂದ್ರಗಳು ಅತ್ಯಧಿಕವಿರುವ ರಾಜ್ಯ ಅಸ್ಸಾಂ ಆಗಿದೆ. ಮುಸ್ಲಿಮರಿಗೆ ಪೌರತ್ವವಿಲ್ಲವೆಂಬ ಅಜೆಂಡಾವನ್ನು ಸಾಧಿಸಲಿಕ್ಕಾಗಿ ಕೇಂದ್ರ ಸರಕಾರವು ನಿರ್ಣಾಯಕ ಕ್ರಮಕೈಗೊಳ್ಳುವ ಮೊದಲೇ ವಿದೇಶೀ ಪೌರರಿಗೆ ಸಂಬಂಧಿಸಿದ ಕಾನೂನಿನ ವಿಷಯದಲ್ಲಿ ಸುಪ್ರೀಮ್ ಕೋರ್ಟ್ ನಿಂದ ಕೆಲವು ಹಸ್ತಕ್ಷೇಪವು ನಡೆಯಿತು. ಅಸ್ಸಾಂ ಮಾಜಿ ಮುಖ್ಯಮಂತ್ರಿ ಸರ್ಬಾನಂದ ಸೋನ್‌ವಾಲ್‌ರು ಪೌರತ್ವ ಪಟ್ಟಿಯನ್ನು ರಚಿಸುವಂತೆ ನ್ಯಾಯಾಲಯವನ್ನು ಕೋರಿದ ಬಳಿಕ ಆ ಕ್ರಮವನ್ನು ರಾಜ್ಯದ ಮುಸ್ಲಿಮರು ಹೃತ್ಫೂರ್ವಕವಾಗಿ ಸ್ವಾಗತಿಸಿದ್ದು ಮೋದಿಯವರ ಲೆಕ್ಕಾಚಾರವನ್ನು ತಪ್ಪಿಸಿದೆ.

ನ್ಯಾಯಾಲಯದ ಮೇಲ್ನೋಟದಲ್ಲಿ ನಡೆಯುವ ಪೌರತ್ವ ಪರಿಶೀಲನೆಯಲ್ಲಿ ತಾವು ಪಾರಾಗಬಹುದು ಎಂಬ ದೃಢ ನಂಬಿಕೆ ಮುಸ್ಲಿಮರಲ್ಲಿತ್ತು. ಹಾಗಿದ್ದರೂ ಸಂಘಪರಿವಾರದ ಬೆಂಬಲಿಗ ಅಧಿಕಾರಿಯನ್ನು ನೇಮಿಸಿ ಕೃತಕತೆ ತೋರಿಸಬಹುದೆಂದು ಸೋನಾವಾಲ್‌ರೂ ಲೆಕ್ಕ ಹಾಕಿದರು. ಅಸಾಮ್‌ನ ಮುಸ್ಲಿಮರಲ್ಲಿ ಕನಿಷ್ಠ 40 ರಿಂದ 80 ಲಕ್ಷ ಮಂದಿಯು ನುಸುಳುಕೋರರೆಂಬ ಪ್ರಚಾರ ಹಲವು ವರ್ಷಗಳಿಂದ ಅಸ್ಸಾಂನಲ್ಲಿ ಕೇಳಿ ಬರುತ್ತಿದೆ. ಆದ್ದರಿಂದ ಸುಳ್ಳು ಲೆಕ್ಕ ಹಾಕಿದರೂ ಸಾರ್ವಜನಿಕ ಮನಸ್ಸು ಅದನ್ನು ಒಪ್ಪುತ್ತದೆಂದು ಬಿ.ಜೆ.ಪಿ. ಲೆಕ್ಕ ಹಾಕಿತು. ಮುಸ್ಲಿಮರನ್ನು ದೇಶದಿಂದ ಹೊರ ಹಾಕಲು ಅಥವಾ ಅವರ ಪೌರತ್ವ ರದ್ದುಗೊಳಿಸಲು ಸಾಧ್ಯವಾದರೆ ಅದು ಉತ್ತಮ ರಾಜಕೀಯ ನಡೆಯಾಗಬಹುದು ಎಂಬ ನಿರೀಕ್ಷೆಯಲ್ಲಿ ಕೇಂದ್ರ ಸರಕಾರವು ಡಿಟೆನ್ಶನ್ ಕ್ಯಾಂಪ್ ನಿರ್ಮಾಣದ ಕೆಲಸವನ್ನು ಆರಂಭಿಸಿತು. ಅಸ್ಸಾಂನಲ್ಲಿ ಮಾತ್ರವಲ್ಲ, ಭಾರತ ಹೆಚ್ಚಿನ ರಾಜ್ಯಗಳಲ್ಲಿ ಈ ಯೋಜನೆಯು ಜಾರಿಗೆ ಅಗತ್ಯವಾದ ಹಣವನ್ನು ಕೇಂದ್ರ ಸರ್ಕಾರ ನೀಡಿತ್ತು. ಭಾರತದ 10 ರಾಜ್ಯಗಳಲ್ಲಿ ಇಂತಹ ಕೇಂದ್ರಗಳು ಸ್ಥಾಪಿತವಾಗಿವೆ. ಆದರೆ ಬಿ.ಜೆ.ಪಿ.ಯ ನಿರೀಕ್ಷೆಗೆ ವಿರುದ್ಧವಾಗಿ ಪೌರತ್ವ ಪರೀಕ್ಷೆಯ ಅಂತಿಮ ತೀರ್ಪು ಹೊರಬಂತು.

ಹಲವು ಬಾರಿ ಅದನ್ನು ಅಡಗಿಸಿಟ್ಟುಕೊಂಡು ಕೊನೆಗೆ 2021, ಎಪ್ರಿಲ್‌ನಲ್ಲಿ ಅಸ್ಸಾಂನ ನಿಜವಾದ ನುಸುಳುಕೋರ ಯಾರೆಂಬ ಲೆಕ್ಕವನ್ನು ಸರ್ಕಾರವು ಪ್ರಕಟಿಸಿತು. ಮೊದಲ ಪಟ್ಟಿಯಂತೆ ರಾಜ್ಯದಲ್ಲಿ ಮುಸ್ಲಿಮ್ ನುಸುಳುಕೋರರ ಸಂಖ್ಯೆ 40 ಲಕ್ಷ ಆಗಿದ್ದಾರೆ. ಈಗಿನ ಪಟ್ಟಿಯಲ್ಲಿ ಅದು 7 ಲಕ್ಷಕ್ಕೆ ಇಳಿದಿದೆ. ಈಗಿನ ಪಟ್ಟಿಯ ಪ್ರಕಾರ ರಾಜ್ಯದಲ್ಲಿ 16 ಲಕ್ಷ ಮಂದಿ ವಿದೇಶಿಗಳಿದ್ದಾರೆ. ಮಾಜಿ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹ್ಮದ್‌ರ ಕುಟುಂಬ ಮತ್ತು ಕಾರ್ಗಿಲ್‌ನಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ ಪದಕ ವಿಜೇತ ಸೈನಿಕ ಸೇರಿದಂತೆ ಹಲವು ಪ್ರಮುಖರು ಪಟ್ಟಿಯಲ್ಲಿ ಇಲ್ಲದಕ್ಕೆ ಕೋಲಾಹಲ ಉಂಟಾಯಿತು. 2019ರಲ್ಲಿ ನ್ಯಾಯಾಲಯದ ಆದೇಶದಂತೆ ಪೌರತ್ವ ಪಟ್ಟಿಯನ್ನು ಸಿದ್ಧಪಡಿಸಲು ಯಾವುದೆಲ್ಲಾ ವಾಮಮಾರ್ಗವನ್ನು ಅನುಸರಿಸಲಾಗಿತ್ತೋ ಮುಸ್ಲಿಮರ ವಿಚಾರದಲ್ಲಿ ಅದನ್ನೇ ಪುನರಾವರ್ತಿಸಲಾಯಿತು. ಅಂದು ಕೇಳಿ ಬಂದ ದೂರುಗಳು ಈಗಿನ ಪಟ್ಟಿ ಬಿಡುಗಡೆಯ ಬಳಿಕವೂ ಇದೆ. ತಂದೆ-ತಾಯಿ ಭಾರತೀಯರಾಗಿರುವಾಗಲೂ ಮಗಳು ಭಾರತದ ಪ್ರಜೆಯಲ್ಲ! ಸಣ್ಣ ಅಕ್ಷರದ ತಪ್ಪಿನ ಕಾರಣದಿಂದ ಪೌರತ್ವ ನಿಷೇಧಿಸಲ್ಪಟ್ಟ ಲಕ್ಷಾಂತರ ಪ್ರಕರಣಗಳು ಮೊದಲ ಪಟ್ಟಿಯಲ್ಲಿತ್ತು. ಅಸ್ಸಾಂನ ಒಂದು ಮೂಲೆಯಲ್ಲಿರುವ ಮುಸ್ಲಿಮರಿಗೆ ಒಂದೇ ರಾತ್ರಿಯಲ್ಲಿ ಬಂದು ತಲುಪಲು ಸಾಧ್ಯವಿಲ್ಲದ ಯಾವುದೇ ನಗರಕ್ಕೆ ದಾಖಲೆಗಳೊಂದಿಗೆ ಹಾಜರಾಗಲು ಸೂಚಿಸಿದಂತಹ ಘಟನೆಗಳು ನಡೆದಿವೆ.

ಈಗಿನ ಪರಿಸ್ಥಿತಿ ಜಟಿಲವಾಗಿದೆ. ಸಾಧ್ಯವಿರುವ ಎಲ್ಲಾ ಕೃತಕ ಮಾಪಕಗಳನ್ನು ಬಳಸಿ ಸಿದ್ಧಪಡಿಸಿರುವ ಅಂತಿಮ ಪಟ್ಟಿಯಿಂದ ಮುಸ್ಲಿಮರನ್ನು ಹೊರಗಿಟ್ಟರೂ ಉಳಿದ 9 ಲಕ್ಷ ನುಸುಳುಕೋರರ ಬಗ್ಗೆ ಸರ್ಕಾರದ ಮುಂದಿನ ನಡೆ ಏನೆಂಬುದು ಸ್ಪಷ್ಟವಾಗಿಲ್ಲ. ಆರನೇ ಶೆಡ್ಯೂಲ್‌ಗೆ ಒಳಪಡದ ರಾಜ್ಯವಾದ್ದರಿಂದ ಅಸ್ಸಾಂ ಸಿ.ಎ.ಎ.ಯ ಪರಿಧಿಗೆ ಬರುತ್ತದೆ.

ಆರನೇ ಶೆಡ್ಯೂಲ್‌ನಲ್ಲಿ ಬರುವ ಮಿಝೋರಂ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮಣಿಪುರ, ಮೇಘಾಲಯ ಎಂಬ ರಾಜ್ಯಗಳಿಗೆ ಪ್ರಯಾಣಿಸಲು ಇನ್ನರ್‌ಲೈನ್ ಪರ್ಮಿಟ್‌ನ ಅಗತ್ಯವಿರುವುದರಿಂದ ಅಲ್ಲಿಗೆ ಸಿ.ಎ.ಎ. ಅನ್ವಯಿಸುವುದಿಲ್ಲ. ಪೌರತ್ವ ಪಟ್ಟಿಯಲ್ಲಿಲ್ಲದ 16 ಲಕ್ಷ ಜನರ ವಿಷಯದಲ್ಲಿ ಬಹಳ ಆತಂಕದ ಪರಿಸ್ಥಿತಿ ಅಸ್ಸಾಂನಲ್ಲಿದೆ. ಕೆಲವು ಪ್ರದೇಶಗಳಲ್ಲಿ ಸಿ.ಎ.ಎ. ಜಾರಿಗೊಳಿಸಲಾಗುತ್ತದೆ ಎಂಬುದರ ಅರ್ಥ ಅಲ್ಲಿ ನುಸುಳುಕೋರರಾದ ಬಾಂಗ್ಲಾ ಹಿಂದುಗಳಿಗೆ ಭಾರತೀಯ ಪೌರತ್ವ ನೀಡಲಾಗುವುದು ಎಂಬುದೇ ಆಗಿದೆ. ಒಂದೆಡೆ ಅಸ್ಸಾಂನ ವಿಶಿಷ್ಟ ಸಂಸ್ಕೃತಿಯು ಕಳಂಕವಾಗುತ್ತದೆಂದು ಅಲ್ಲಿನ ಮಣ್ಣಿನ ಮಕ್ಕಳವಾದ. ಇನ್ನೊಂದೆಡೆ ಅಷ್ಟು ದೊಡ್ಡ ಸಂಖ್ಯೆಯ ಜನರಿಗೆ ರಾಜ್ಯದ ಸಂಪನ್ಮೂಲಗಳು ಮತ್ತು ಯುವಕರು 1971 ಮಾರ್ಚ್ 25 ಎಂಬ ಕಟ್ ಆಫ್ ಡೇಟ್‌ನ ಬಳಿಕ ಅಸ್ಸಾಂಗೆ ತಲುಪಿರುವ ಒಬ್ಬರಿಗೂ ಪೌರತ್ವ ನೀಡಬಾರದೆಂದು ಅಸ್ಸಾಂ 16 ಪ್ರತಿಪಕ್ಷ ಸಂಘಟನೆಗಳು ಮತ್ತು 30 ಸಾಮಾಜಿಕ ಸಂಘಟನೆಗಳು ಹೋರಾಟ ನಡೆಸುತ್ತಿದೆ. ಇವರ ಕಣ್ಣಿಗೆ ಮಣ್ಣೆರಚಲು ಮುಸ್ಲಿಮರನ್ನು ಹುಡುಕಿ ಬಂಧನ ಶಿಬಿರಗಳಿಗೆ ಕಳುಹಿಸಲಾಗುತ್ತದೆ. 2015ರ ಬಳಿಕ ಬಂದವರನ್ನು ಮಾತ್ರ ಬಂಧನ ಕೇಂದ್ರಗಳಿಗೆ ತರಲಾಗಿದೆಯೆಂದು ಅಸ್ಸಾಂ ಸರ್ಕಾರ ವಾದಿಸಿದರೂ ಅದು ನಿಜವಲ್ಲ. ಸುಪ್ರೀಮ್ ಕೋರ್ಟ್‌ನ ಆದೇಶವನ್ನು ಬೆಂಬಲಿಸಿದ ಮುಸ್ಲಿಮ್ ಸಂಘಟನೆಗಳು ರಾಜ್ಯದಲ್ಲಿ ಬಾಂಗ್ಲಾದೇಶಿ ಮುಸ್ಲಿಮರ ಸಂಖ್ಯೆ ಕೇವಲ 40,000 ಎಂದು ಬೊಟ್ಟು ಮಾಡುತ್ತದೆ. 1971ರ ಕಟ್ ಆಫ್ ಡೇಟ್‌ನ ಬಳಿಕ ಬಂದಿದ್ದರೂ 80ರ ದಶಕದ ನಂತರ ಬಂದವರಲ್ಲ.

ಏಕೆಂದರೆ ಕಳೆದ ಮೂರು ನಾಲ್ಕು ದಶಕಗಳಿಂದ ಕೋಮುಗಲಭೆಯಿಂದ ತತ್ತರಿಸಿದ ರಾಜ್ಯಕ್ಕೆ ತಮ್ಮ ಜೀವದ ಆಶೆಯಿರುವ ಯಾರೂ ಬರುವ ಧೈರ್ಯ ತೋರಿಲ್ಲ. ಮತ್ತು ಅಲ್ಲಿನವರಿಗೆ ಭಾರತದಲ್ಲಿ ಬಂದು ದುಡಿಯಬೇಕಾದ ಪರಿಸ್ಥಿತಿಯೂ ಇರಲಿಲ್ಲ. ಆದ್ದರಿಂದ ಪೌರತ್ವ ಪಟ್ಟಿಯಲ್ಲಿನ ನಿಜವಾದ ಖಳನಾಯಕರು ಮುಸ್ಲಿಮರಲ್ಲ. ಅದು ಬಾಂಗ್ಲಾದೇಶಿ ಹಿಂದೂಗಳು ಎಂಬುದು ಸ್ಪಷ್ಟವಾದಾಗ, ಬಿಜೆಪಿ ಅಂತಿಮವಾಗಿ ಅವರಿಗೆ ಸಂಪೂರ್ಣ ಭಾರತೀಯ ಪೌರತ್ವವನ್ನು ನೀಡುವ ಮೂಲಕ, ತನ್ನದೇ ಆದ ರಾಜಕೀಯ ಕಾರ್ಯಸೂಚಿಯನ್ನು ಉಳಿಸಲು ಸಿ.ಎ.ಎ.ಯನ್ನು ಅಂಗೀಕರಿಸಬೇಕಾಯಿತು.

ಬಾರ್ಪೆಟಾದ ಬಂಧನ ಶಿಬಿರಕ್ಕೆ ಕಳುಹಿಸಲಾಗಿರುವ 19 ಮುಸ್ಲಿಮ್ ಪುರುಷರ ಮತ್ತು ಸ್ತ್ರೀಯರ ವಿಷಯದಲ್ಲಿ ಮುಂದೇನು? ಎಂದು ದೇಶವೇ ಆತಂಕದಿಂದ ಎದುರು ನೋಡುತ್ತಿದೆ. ಇವರನ್ನು ಬೇರೆ ಯಾರಾದರೂ ಯಾವುದೇ ದೇಶದ ನಾಗರಿಕರಾಗಿ ಸ್ವೀಕರಿಸುವ ಯಾವುದೇ ದಾಖಲೆಯನ್ನು ಹೊಂದಿಲ್ಲ. ಹಾಗಿದ್ದರೂ ಅವರ ಉಳಿದ ಕುಟುಂಬದ ಸದಸ್ಯರು ಅಧಿಕೃತ ನಾಗರಿಕರಾಗಿ ಅಸ್ಸಾಂನಲ್ಲಿ ವಾಸಿಸುತ್ತಿ ದ್ದಾರೆ. ಅವರು ನಿಜವಾದ ನುಸುಳುಕೋರರೇ ಆಗಿದ್ದರೂ ಅವರನ್ನು ಇನ್ನುಳಿದಿರುವಷ್ಟು ಕಾಲ ಈ ಬಂಧನ ಶಿಬಿರಗಳಲ್ಲಿ ಬಂಧಿಸಿಡುವುದರ ಹೊರತು ಬೇರೆ ಯಾವ ಸಾಧ್ಯತೆಗಳೂ ಪ್ರಸ್ತುತ ನಡೆಯಿಂದ ಹೊರಹೊಮ್ಮುವುದಿಲ್ಲ.