ಸನ್ಮಾರ್ಗ ವಾರ್ತೆ
ಉಡುಪಿ : ಮಣಿಪಾಲ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ಸ್ನಲ್ಲಿ ನಡೆದ 23ನೇ ವಾರ್ಷಿಕ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 2021ನೇ ಸಾಲಿನ ಅತ್ಯುತ್ತಮ ವಿದ್ಯಾರ್ಥಿಯಾಗಿ ಉಡುಪಿಯ ನಿವಾಸಿ ‘ಅರೀಝ್ ಅಹಮದ್ ಅವರನ್ನು ಪುರಸ್ಕರಿಸಲಾಯಿತು.
ಆರೀಜ್ ಅವರು ಆಡಿಯೊಲಜಿ ಮತ್ತು ಸ್ಪೀಚ್ ಲ್ಯಾಂಗ್ವೇಜ್ ಪ್ಯೆಥಾಲಜಿಯಲ್ಲಿ (BASLP) ಪದವಿಯನ್ನು ಡಿಸ್ಟಿಂಕ್ಷನ್ನೊಂದಿಗೆ ಪೂರ್ಣಗೊಳಿಸಿದ್ದಾರೆ. ‘ಅರೀಝ್ ಉಡುಪಿಯ ಖಲೀಲ್ ಅಹಮದ್ ಮತ್ತು ಝೀನತ್ ದಂಪತಿಯ ಪುತ್ರಿ. ಮಣಿಪಾಲ ಮತ್ತು ಮಂಗಳೂರು ಕ್ಯಾಂಪಸ್ಗಳಿಂದ BASLP ಬ್ಯಾಚ್ನ ಅತ್ಯುತ್ತಮ ನಿರ್ಗಮನ ವಿದ್ಯಾರ್ಥಿ ಪ್ರಶಸ್ತಿ ಪಡೆದಿದ್ದಾರೆ.












