ಸನ್ಯಾಸಿ ವೇಷ ಧರಿಸಿ ವೃಂದಾವನದಲ್ಲಿ ತಲೆಮರೆಸಿಕೊಂಡಿದ್ದ 300 ಕೋಟಿ ವಂಚನೆ ಪ್ರಕರಣದ ಆರೋಪಿಯ ಬಂಧನ

0
211

ಸನ್ಮಾರ್ಗ ವಾರ್ತೆ

ಮಥುರಾದ ಕೃಷ್ಣ ಬಲರಾಮ್ ಮಂದಿರದ ಸಮೀಪದಿಂದ ಸನ್ಯಾಸಿ ಬಾಬಾ ವಿಶ್ವನಾಥ್ ಶಿಂದೆಯನ್ನು ಬಂಧಿಸಲಾಗಿದೆ. ಈತ ಮುನ್ನೂರು ಕೋಟಿ ರೂಪಾಯಿ ವಂಚನೆಯ ಆರೋಪಿಯಾಗಿದ್ದ. ತನ್ನ ಬಂಧನವನ್ನು ತಪ್ಪಿಸಿಕೊಳ್ಳುವುದಕ್ಕಾಗಿ ಆತ ಬೃಂದಾವನದಲ್ಲಿ ಸನ್ಯಾಸಿ ವೇಷವಿಟ್ಟು, ಬದುಕುತ್ತಿದ್ದ ಎಂದು ತಿಳಿದು ಬಂದಿದೆ.

ಸುಮಾರು 300 ಕೋಟಿ ರೂಪಾಯಿ ವಂಚನೆಗೆ ಸಂಬಂಧಿಸಿ ಈತನ ವಿರುದ್ಧ ವಿವಿಧ ಠಾಣೆಗಳಲ್ಲಿ ಎಫ್ಐಆರ್ ದಾಖಲಾಗಿತ್ತು. ಈತನನ್ನು ಪತ್ತೆ ಹಚ್ಚುವುದಕ್ಕಾಗಿ ಪೊಲೀಸರು ವ್ಯಾಪಕ ಬಲೆ ಬೀಸಿದ್ದರು ಎಂದು ಮಥುರಾದ ಪೊಲೀಸರು ತಿಳಿಸಿದ್ದಾರೆ.

ದೆಹಲಿ ಅಸ್ಸಾಂ ಮತ್ತು ಉತ್ತರ ಪ್ರದೇಶದ ವಿವಿಧ ಕಡೆ ಹಾಗೂ ನೇಪಾಳದಲ್ಲಿ ಈತ ಸನ್ಯಾಸಿ ವೇಷದಲ್ಲಿ ತಿರುಗಾಡಿದ್ದ ಎಂದು ಡೆಪ್ಯುಟಿ ಪೊಲೀಸ್ ಸೂಪರ್ ಡೆಂಟ್ ಸಂದೀಪ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ನೀವು ಹಣ ಹೂಡಿಕೆ ಮಾಡಿದರೆ ನಿಮಗೆ ಭಾರಿ ಮೊತ್ತದ ಬಡ್ಡಿ ನೀಡುತ್ತೇನೆ ಎಂದು ನಂಬಿಸಿ ಈತ ನಿರ್ದಿಷ್ಟ ಬ್ಯಾಂಕಿನ ನಾಲ್ಕು ಶಾಖೆಗಳಲ್ಲಿ ಹಣ ಠೇವ ಣಿ ಇಡುವಂತೆ ಈತ ಪ್ರೇರೇಪಿಸುತ್ತಿದ್ದ. 2000 ಕ್ಕಿಂತಲೂ ಅಧಿಕ ಮಂದಿ ಈತನ ವಂಚನೆಗೆ ಬಲಿಯಾಗಿದ್ದಾರೆ ಎಂದು ತಿಳಿದು ಬಂದಿದೆ.