ಅಬೂ ಅನೀಸ್, ಕಲ್ಲಾಪು
ಮೂಲಭೂತ ಶಿಕ್ಷಣ ಮತ್ತು ಅದಕ್ಕೆ ಪೂರಕವಾದ ಸಂಸ್ಕಾರ, ನಾಗರಿಕತೆಯನ್ನು ತ್ಯಜಿಸಿದ ಸಮುದಾಯವು ಜಾಗತಿಕ ಮಟ್ಟದಲ್ಲೂ ನಿಂದ್ಯತೆ ಗೊಳಗಾಗುವುದು ಸಹಜ. ಪ್ರಾಯಶಃ ಪ್ರಸ್ತುತ ಸಮುದಾಯವು ತನ್ನ ಅಸ್ಮಿತೆಯನ್ನು ಉಳಿಸಿ ಕೊಂಡಿರಬಹುದಾದರೂ ತನ್ನ ವರ್ಚಸ್ಸು ಮತ್ತು ಮುತ್ಸದ್ದಿತನವನ್ನು ಕಳೆದುಕೊಳ್ಳುವುದು ನಿಶ್ಚಿತ. ದ್ವಿತೀಯ ಖಲೀಫಾ ಹ. ಉಮರ್ ಬಿನ್ ಖತ್ತಾಬ್(ರ)ರು 1400 ವರ್ಷಗಳ ಹಿಂದೆ ಇದೇ ಮಾತನ್ನು ಹೇಳಿದ್ದರು: “ನಾವು ಒಂದು ಸಮು ದಾಯದಾಗಿದ್ದೆವು. ಇಸ್ಲಾಮಿನ ಮೂಲಕ ನಮಗೆ (ಜಾಗತಿಕವಾಗಿ) ಅತ್ಯುನ್ನತ ಸ್ಥಾನಮಾನವನ್ನು ಅಲ್ಲಾಹನು ನೀಡಿದನು. ಯಾರಾದರೂ ಇಸ್ಲಾ ಮನ್ನು ಬಿಟ್ಟು ನಿಲ್ಲುವರೋ ಅವರು ಅತ್ಯಂತ ನಿಂದ್ಯರಾಗುವರು.”
ಉಮರ್(ರ)ರ ಮಾತಿನಂತೆ ಜಾಗತಿಕವಾಗಿ ಪ್ರಸಕ್ತ ಮುಸ್ಲಿಮರ ಸ್ಥಿತಿಗತಿಯು ನಿರಾಶಾದಾಯಕ ವಾದ ಒಂದು ಚಿತ್ರಣವನ್ನು ನಮ್ಮ ಕಣ್ಣೆದುರು ನಿಲ್ಲಿಸುತ್ತದೆ.
ಸಮೀಕ್ಷೆಯೊಂದರಂತೆ ಜಾಗತಿಕವಾಗಿ 125 ಕೋಟಿಗಿಂತಲೂ ಅಧಿಕ ಮುಸ್ಲಿಮರಿದ್ದಾರೆ. ಅದ ರಂತೆ ಹೆಚ್ಚಿನ ತೈಲ ಸಂಪನ್ನ, ಮುಸ್ಲಿಮ್ ರಾಷ್ಟ್ರ ಗಳಿವೆ. 52 ರಾಷ್ಟ್ರಗಳಲ್ಲಿ ಮುಸ್ಲಿಮರ ಆದಿಪತ್ಯವಿದೆ. ಮಾತ್ರವಲ್ಲ ಧಾರ್ಮಿಕ ಮತ್ತು ಆಧುನಿಕ ಶಿಕ್ಷಣ ಕ್ಷೇತ್ರದಲ್ಲೂ ಇದೀಗ ಮುಸ್ಲಿಮರು ಮುಂದುವರಿದಿದ್ದಾರೆ. ಇನ್ನಷ್ಟು ಮುಂದುವರಿಯುತ್ತಲೂ ಇದ್ದಾರೆ. ಸುಶಿಕ್ಷಿತ ಮುಸ್ಲಿಮ್ ಯುವಕ-ಯುವತಿಯರ ಸಂಖ್ಯೆಯೂ ಅಧಿಕವಿದೆ.
ಇಂದು ಮುಸ್ಲಿಮರನ್ನು ನಮಾಝಿಗಾಗಿ ಜಾಗೃತಿ ಮೂಡಿಸುವ ತಬ್ಲೀಗಿಗಳು ಎಂಬ ಹೆಸರಿನಲ್ಲಿ ಕಾರ್ಯವೆಸಗುವ ಸಂಘಟನೆಗಳು, ತೌಹೀದ್ಗಾಗಿ ಪ್ರತ್ಯೇಕವಾಗಿ ಹೋರಾಡುವ ಸಂಘಟನೆಗಳು, ಮಾತ್ರವಲ್ಲ ಸನಾತನ ಇಸ್ಲಾಮೀ ಆಚಾರ ವಿಚಾರಗಳನ್ನು ಜೀವಂತವಾಗಿರಿಸಲು ಕ್ರಿಯಾಶೀಲವಾಗಿರುವ ಸುನ್ನಿ ಹಣೆಪಟ್ಟಿಯ ಸಂಘ ಟನೆಗಳು ಜಾಗತಿಕ ಮಟ್ಟದಲ್ಲಿ ಮುಂಚೂಣಿ ಯಲ್ಲಿವೆ. ಈ ಸಂಘಟನೆಗಳ ಹೋರಾಟದ ಫಲಶ್ರುತಿಯಾಗಿ ಅನೇಕ ಮಸೀದಿಗಳು, ಧಾರ್ಮಿಕ ವಿದ್ಯಾಲಯಗಳು ತಲೆ ಎತ್ತಿವೆ. ರಾಜಕೀಯವಾಗಿ ಕೆಲವಾರು ಮುಸ್ಲಿಮ್ ಪಕ್ಷಗಳು ವಿವಿಧ ರೀತಿಯಲ್ಲಿ ಕಾರ್ಯ ಶೀಲವಾಗಿವೆ. ಇವೆಲ್ಲದರ ಹೊರತಾ ಗಿಯೂ ವಿಶ್ವಮಟ್ಟದಲ್ಲಿ ಮುಸ್ಲಿಮರ ಸ್ಥಿತಿಗತಿಯು ಆಶಾದಾಯಕವಾಗಿಲ್ಲ. ಒಂದು ಸುಭದ್ರವಾದ ಧಾರ್ಮಿಕ, ಸಾಮಾಜಿಕ ಮತ್ತು ರಾಜಕೀಯ ಚೌಕಟ್ಟನ್ನು ಕಂಡುಕೊಳ್ಳುವಲ್ಲಿ ಸಮುದಾಯವು ವಂಚಿತವಾಗಿದೆ. ಮುಸ್ಲಿಮರು ಎಲ್ಲೂ ಸುಶಿಕ್ಷಿತರಲ್ಲ. ಕೆಲವಡೆ ಹಿಂಸಾತ್ಮಕ ದೌರ್ಜನ್ಯಗಳು ನಡೆಯುತ್ತಿದ್ದರೆ ಇನ್ನು ಕೆಲವೆಡೆ ಮುಸ್ಲಿಮರನ್ನು ಜನ್ಮ ಭೂಮಿಯಿಂದಲೇ ಬಲಾತ್ಕಾರವಾಗಿ ಹೊರದೂಡುವ ಪ್ರಯತ್ನಗಳಾಗುತ್ತಿದೆ. ಇನ್ನು ಕೆಲವೆಡೆ ತಮ್ಮ ಧರ್ಮಶ್ರದ್ಧೆಗಳನ್ನು ಪರಿತ್ಯಜಿಸುವಂತೆ ಒತ್ತಡ ಹೇರಲಾಗುತ್ತಿದೆ.
ಮಧ್ಯ ಪೂರ್ವದ ಆಡಳಿತರೂಢರು ಜಾಗತಿಕ ಮುಸ್ಲಿಮರ ಉಚ್ಛ್ರಾಯಕ್ಕೆ ಬಹುದೊಡ್ಡ ತಡೆಗೋಡೆಯಾಗಿದ್ದಾರೆ. ಇರಾಕಿನ ಮಾಜಿ ಸರ್ವಾಧಿಕಾರಿ ಸದ್ದಾಮ್ ಹುಸೇನ್ ತಾನು ಹುಟ್ಟು ಹಾಕಿದ “ಬಾತ್ ಕಮ್ಯೂನಿಸ್ಟ್ ಪಾರ್ಟಿ” ತನ್ನ ಧರ್ಮ ವೆಂದೂ ಅದರ ವಿಚಾರ ಪ್ರಣಾಳಿಕೆ ತನ್ನ ಧರ್ಮ ಗ್ರಂಥವೆಂದೂ ಹೇಳಿದ್ದ. ನಾಡಿನಾದ್ಯಂತ ತನ್ನ ಪುತ್ಥಳಿಯನ್ನು ಸ್ಥಾಪಿಸಿಕೊಂಡು ಜನರು ಅದನ್ನು ವಂದಿಸುವಂತೆ ಆಜ್ಞೆ ಹೊರಡಿಸಿದ್ದ, ಇರಾಕನ್ನು ಆಕ್ರಮಿಸಿದ ಅಮೇರಿಕನ್ನರು 1990ರ ಗಲ್ಫ್ ಯುದ್ಧದಲ್ಲಿ ಆ ಪುತ್ಥಳಿಗಳನ್ನು ಕೆಡವಿ ಹಾಕಿದ್ದರು.
ಈಜಿಪ್ಟನ ಸರ್ವಾಧಿಕಾರಿ ಅಧ್ಯಕ್ಷ ಜಮಾಲ್ ಅಬ್ದುಲ್ ನಾಸಿರ್ 1952ರಲ್ಲಿ ಅಲ್ಲಿನ ಮಾಜಿ ಸರ್ವಾಧಿಕಾರಿ ಅರಸ ಫಾರೂಕ್ನನ್ನು ಸೈನಿಕ ಕಾರ್ಯಾಚರಣೆಯ ಮೂಲಕ ಪದಚ್ಯುತಗೊಳಿಸಿ ಆಡಳಿತವನ್ನು ಸ್ವಾಧೀನಪಡಿಸಿದ. ಇಸ್ಲಾಮಿನ ಬದ್ಧ ವೈರಿಯಾದ ಈ ಸರ್ವಾಧಿಕಾರಿ ತನ್ನನ್ನು ಫಿರ್ಔನ್ ಸಂತತಿಯವನೆಂದು ಘೋಷಿಸಲೂ ಹಿಂಜರಿಯಲಿಲ್ಲ. “ನಅನು ಅಬುನಾವು ಫಿರ್ಔನ” ಎಂದು ಹೆಮ್ಮೆಯಿಂದ ಹೇಳುತ್ತಿದ್ದನು.
ಸಿರಿಯಾದ ಮಾಜಿ ಸರ್ವಾಧಿಕಾರಿ ಹಾಫಿಝ್ ಅಲ್ ಅಸದ್ನ ಪುತ್ರ ಬಶರ್ ಅಲ್ ಅಸದ್ ತನ್ನ ಆಡಳಿತದ ವಿರುದ್ಧ ಭುಗಿಲೆದ್ದ ದಂಗೆಯನ್ನು ಸದೆಬಡಿಯಲು ರಷ್ಯನ್ ಸೇನೆಯನ್ನು ಆಹ್ವಾನಿಸಿದ. ಮಾತ್ರವಲ್ಲ ಇರಾನ್ ಬೆಂಬಲಿತ ಹಿಝ್ಬುಲ್ಲಾ ಪಡೆಗಳು ಸಿರಿಯಾದಲ್ಲಿ ಮಹಿಳೆಯರು ಮಕ್ಕಳನ್ನು ಸಾಮೂಹಿಕವಾಗಿ ವಧಿಸಲು ಹೇಸಲಿಲ್ಲ. ಈ ವರೆಗೂ ಸುಮಾರು 6 ಲಕ್ಷಕ್ಕೂ ಹೆಚ್ಚು ನಾಗರಿಕ ರನ್ನು ಸಿರಿಯಾದ ಸೈನ್ಯವು ಕೊಂದು ಹಾಕಿದೆ.
ಅಫಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ಅಲ್ಲಿನ ಸರಕಾರಿ ಸೈನಿಕರನ್ನು, ನಾಗರಿಕರನ್ನು ಗುರಿಮಾಡಿ ಆತ್ಮಹತ್ಯಾ ಬಾಂಬರ್ಗಳ ಮೂಲಕ ಸ್ವದೇಶಿಯರ ರಕ್ತದ ಕಾಲುವೆಯನ್ನು ಹರಿಸಿದರೆ ಇನ್ನೊಂದೆಡೆ ತಾಲಿಬಾನಿಗಳನ್ನು ಸೆದೆಬಡಿಯುವ ನೆಪದಲ್ಲಿ ಅಮೇರಿಕನ್ ಪಡೆಗಳನ್ನು ಅಲ್ಲಿನ ಸರಕಾರವು ನಿಯುಕ್ತಿಗೊಳಿಸಿದೆ.
ಸೌದಿ ಅರೇಬಿಯಾದ ಅಭಿನವ ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ತಾನು ಮಹಾತ್ಮಾ ಗಾಂಧಿ, ನೆಲ್ಸನ್ ಮಂಡೇಲರಂತಹ ಕ್ರಾಂತಿಕಾರಿ ಯಲ್ಲ. ತಾನೊಬ್ಬ ಶ್ರೀಮಂತ ರಾಜಕುಮಾರನೆಂದೂ ತನ್ನಲ್ಲಿ ಖರ್ಚು ಮಾಡಲು ಅಪಾರ ಹಣವಿದೆ ಎಂದೂ ಬಹಿರಂಗವಾಗಿ ಸಾರಿದ್ದಾರೆ.
ಈ ಆಡಂಬರದ ಅಟ್ಟಹಾಸದ ಮಧ್ಯೆ ಮ್ಯಾನ್ಮಾರ್ನಲ್ಲಿ ಅಲ್ಲಿನ ಮುಸ್ಲಿಮರನ್ನು ಬೌದ್ಧ ಮತದ ಆಡಳಿತರೂಢರು ದೇಶದಿಂದ ಹೊರ ದೂಡುತ್ತಿದ್ದಾರೆ. ಚೀನಾದಲ್ಲೂ ಮುಸ್ಲಿಮರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ಮಾತ್ರವಲ್ಲ, ಹಿಂಸಾ ತ್ಮಕವಾಗಿಯೂ ವೈಚಾರಿಕವಾಗಿಯೂ ಮುಸ್ಲಿಮರಿಗೆ ನೆಲೆಯಿಲ್ಲದಂತೆ ಮಾಡಲಾಗುತ್ತಿದೆ.
ಈ ಅನಿಶ್ಚಿತತೆಗೆ ಮುಖ್ಯ ಕಾರಣ 20ನೇ ಶತಕದ ಜಾಗತಿಕ ಮುಸ್ಲಿಮ್ ಆಡಳಿತಗಾರರು ಮೆಲುದ್ಧರಿಸಿದಂತೆ ಇಸ್ಲಾಮೀ ಮೌಲ್ಯಾಧಾರಿತ ಆಡಳಿತ ಸೂತ್ರವನ್ನು ಪೂರ್ಣವಾಗಿ ಪರಿತ್ಯಜಿಸಿ ಕೊಂಡು ಇಸ್ಲಾಮೇತರ ಮಾರ್ಗವನ್ನು ಆವಿಷ್ಕರಿಸಿ ಕೊಂಡಿರುವುದಾಗಿದೆ. ಈ ದಿಸೆಯಲ್ಲಿ ಕಿಂಚಿತ್ ಇಸ್ಲಾಮೀ ಇತಿಹಾಸದತ್ತ ಗಮನಹರಿಸಿದಲ್ಲಿ ಖುಲಫಾವುರ್ರಾಶಿದೀನ್ಗಳ ನಂತರ ಸುಮಾರು ಕ್ರಿ.ಶ. 743ರ ವರೆಗೆ (90 ವರ್ಷ) ಉಮಯ್ಯ ಖಿಲಾಫತ್, ಆನಂತರ ಕ್ರಿ.ಶ. 1258ರ ವರೆಗೂ ಅಬ್ಬಾಸಿಯ ಖಿಲಾಫತ್ ಅಸ್ತಿತ್ವದಲ್ಲಿತ್ತು. ಅಬ್ಬಾಸಿಯ ಖಿಲಾಫತ್ನ ಪತನದ ನಂತರ ಖಿಲಾಫತ್ ದುರ್ಬಲಗೊಂಡಿತಾದರೂ ಉತ್ತರ ಆಫ್ರಿಕ, ಸ್ಪೈನ್, ಬಲ್ಕಾನ್, ಉತ್ತರ ಏಷ್ಯಾ ಮತ್ತು ಏಷ್ಯಾ ಮೈನರ್(ಭಾರತ)ಗಳಲ್ಲೂ ಮುಸ್ಲಿಮ್ ಆಡಳಿತ ಪ್ರಬಲವಾಗಿತ್ತು. 19ನೇ ಶತಮಾನದ ಕೊನೆವರೆಗೂ ಮುಸ್ಲಿಮರು ಜಾಗತಿಕ ಮಟ್ಟದಲ್ಲಿ ಪ್ರಬಲ ಸೈನಿಕ ಶಕ್ತಿಯಾಗಿದ್ದರು.
1923ರಲ್ಲಿ ಟರ್ಕಿಯಲ್ಲಿ ಸುಲ್ತಾನ್ ಅಬ್ದುಲ್ ಹಮೀದ್ ಖಾನ್ರ ಖಿಲಾಫತ್ತನ್ನು ಬ್ರಿಟಿಷ್ ಮತ್ತು ಝಿಯೋನಿಸ್ಟರು ಕುತಂತ್ರದಿಂದ ಪದಚ್ಯುತ ಗೊಳಿಸುವ ವರೆಗೂ ಮುಸ್ಲಿಮ್ ಸಮುದಾಯಕ್ಕೆ ಜಾಗತಿಕ ಮಟ್ಟದಲ್ಲಿ ದುರ್ಬಲವಾದರೂ ಒಂದು ಕೇಂದ್ರೀಕೃತ ನಾಯಕತ್ವವು ಅಸ್ತಿತ್ವದಲ್ಲಿತ್ತು. ಕಮ್ಯೂನಿಸ್ಟ್ ಸೋವಿಯತ್ ರಷ್ಯಾದಿಂದ 90ರ ದಶಕದಲ್ಲಿ ಸ್ವತಂತ್ರಗೊಂಡಿರುವ ಮುಸ್ಲಿಮ್ ಬಾಹುಳ್ಯವಿರುವ ತಾಜಕಿಸ್ತಾನ, ತುರ್ಕ್ಮೆನಿಸ್ತಾನ, ಉಜ್ಬೆಕಿಸ್ತಾನ, ಆಜರ್ಬೈಝಾನ್ ಮಾತ್ರವಲ್ಲ ಇನ್ನೂ ಕೆಲವು ಮುಸ್ಲಿಮ್ ಬಾಹುಳ್ಯವಿರುವ ದೇಶಗಳು ಕಮ್ಯೂನಿಸ್ಟ್ ಆಡಳಿತರೂಢರ ಕೈಕೆಳಗಿವೆ.
ಈ ರೀತಿ ಮುಸ್ಲಿಮ್ ರಾಷ್ಟ್ರಗಳ ಆಡಳಿತ ರೂಢರ ಪಲಾಯನವಾದದ ಫಲಶ್ರುತಿಯೊ ಎಂಬಂತೆ ಜಾಗತಿಕ ಮಟ್ಟದಲ್ಲಿ ಸಮುದಾಯವನ್ನು ದಮನಿಸುವ ಕಾರ್ಯಗಳು ವ್ಯಾಪಕವಾಗುತ್ತಿದೆ. `ಭಯೋತ್ಪಾದನೆ’ ಮತ್ತು `ಇಸ್ಲಾಮೋಫೆÇಬಿಯಾ ದಂತಹ ಕಪೆÇಲ ಕಲ್ಪಿತ ಆರೋಪಗಳನ್ನು ಹೊರಿಸಿ ಜಾಗತಿಕ ಮುಸ್ಲಿಮ್ ಸಮುದಾಯವನ್ನು ತೇಜೋವಧೆಗೈಯ್ಯುವಂತಹ ಪ್ರಯತ್ನಗಳಾಗುತ್ತಿವೆ. ಮುಸ್ಲಿಮ್ ಪಂಡಿತ ವೇಷಧಾರಿಗಳಾಗಿ ಯಹೂದಿಯರು ಮತೀಯ ವಿಚಾರಧಾರೆಗಳನ್ನು ವ್ಯತಿರಿಕ್ತವಾಗಿ ವಿಶ್ಲೇಷಿಸಿಕೊಂಡು ಲೇಖನಗಳ ಮೂಲಕ ಸಮುದಾಯದಲ್ಲಿ ಆಂತರಿಕ ಭಿನ್ನತೆ, ವಿದ್ವೇಷಗಳನ್ನು ಉಲ್ಬಣಗೊಳಿಸುವ ಕಾರ್ಯಗಳಲ್ಲಿ ಮುಂದುವರಿಯುತ್ತಾ ಇದ್ದಾರೆ.
ಸಮುದಾಯದ ನಿರ್ಲಕ್ಷ್ಯದ ಫಲಶ್ರುತಿಯೊ ಎಂಬಂತೆ ಜಗತ್ತಿನಾದ್ಯಂತ ಮುಸ್ಲಿಮ್ ಹೆಸರುಗಳಲ್ಲಿ ಭಯೋತ್ಪಾದಕ ಶಕ್ತಿಗಳು ಪ್ರಬಲವಾಗುತ್ತಾ ಇವೆ. ಅಲ್ಖಾಯಿದ, ತಾಲಿಬಾನ್ನಂತಹ ಉಗ್ರವಾದಿ ಸಂಘಟನೆಗಳ ಔಚಿತ್ಯ, ಅದರ ಸತ್ಯಾಸತ್ಯತೆಯ ಬಗ್ಗೆ ಬಾಹ್ಯ ಮುಸ್ಲಿಮ್ ಜಗತ್ತಿಗೆ ಯಾವುದೇ ಅರಿವು ಇರುವುದಿಲ್ಲ. ಇಸ್ಲಾಮಿಕ್ ಸ್ಟೇಟ್(ಐಸಿಸ್)ನಂತಹ ಉಗ್ರ ಸಂಘಟನೆಯೂ ಮುಸ್ಲಿಮರನ್ನೇ ಗುರಿಯಾಗಿಸಿ ಹತ್ಯಾಕಾಂಡ ನಡೆಸುತ್ತಿದೆ. ಇಸ್ಲಾಮಿನ ಹೆಸರೆತ್ತಿ ಕಾರಸ್ತಾನ ನಡೆಸುವ ಈ ಸಂಘಟನೆಯು ಯಹೂದಿಯರ ಸೃಷ್ಟಿ ಎಂದು ಹೇಳಲಾಗುತ್ತದೆ. ಇದರ ಸ್ಥಾಪಕ ಅಬೂಬಕರ್ ಬಾಗ್ದಾದಿ ಮೂಲತಃ ಒಬ್ಬ ಯಹೂದಿಯಾಗಿದ್ದಾನೆ. ಆದರೂ ಪೂರ್ವಾಪರ ವಿವೇಚನೆಯಿಲ್ಲದೆ ಕೆಲವು ಉನ್ಮತ್ತ ಮುಸ್ಲಿಮ್ ಯುವಕರು ಈ ಉಗ್ರ ಸಂಘಟನೆಗೆ ಬಲಿ ಬೀಳುತ್ತಿದ್ದಾರೆ. ಇತ್ತೀಚೆಗೆ ಕೊಲಂಬೊದಲ್ಲಿ ಈಸ್ಟರ್ ಹಬ್ಬದದಂದು ಚರ್ಚ್ಗಳ ಮೇಲೆ ದಾಳಿ ನಡೆಸಿ ನೂರಾರು ಕ್ರೈಸ್ತರನ್ನು ಕೊಂದವರಾರು? ತೌಹೀದಿ ಮುಖದಲ್ಲಿ ನಡೆದಿರುವ ಈ ಉಗ್ರ ಚಟುವಟಿಕೆಗಳ ನೇಪಥ್ಯದಲ್ಲಿರುವವರಾರು?
ಈ ಬಗ್ಗೆ ಅನ್ವೇಷಣೆ ನಡೆಸುವ ಅಥವಾ ಇಂತಹ ಉಗ್ರ ಸಂಘಟನೆಗೂ ಇಸ್ಲಾಮಿಗೂ ಯಾವುದೇ ನಂಟು ಇಲ್ಲವೆಂದು ಪ್ರಖ್ಯಾಪಿಸುವ ಯಾವುದೇ ಜಾಗತಿಕ ಮಟ್ಟದ ನೇತೃತ್ವದ ಬಗ್ಗೆ ಸಮುದಾಯ ಇನ್ನೂ ಆಲೋಚಿಸಿದಂತಿಲ್ಲ.
ವಾಸ್ತವದಲ್ಲಿ ಈ ನಿಂದನೀಯ ಪರಿಸ್ಥಿತಿಗೆ ಕಾರಣ ಏನಾಗಿರ ಬಹುದು? ಮುಸ್ಲಿಮ್ ಆಡಳಿತವಿರುವ ಈ ದೇಶಗಳಲ್ಲಿ ನಮಾಝಿಗರ ಕೊರತೆಯೇನೂ ಇರಲಾರದು. ಸಾಕಷ್ಟು ಪುರಾತನ ಮತ್ತು ನೂತವಾಗಿ ನಿರ್ಮಿಸಲ್ಪಟ್ಟ ಅತ್ಯಾಕರ್ಷಕ ಮಸೀದಿಗಳು ಇಂದಿಗೂ ತಲೆ ಎತ್ತುತ್ತಿವೆ. ವ್ರತಾನುಷ್ಠನಿಗರೂ, ಹಜ್ಜ್ ಕರ್ಮ ನಿರ್ವಹಿಸುವವರೂ ಸಾಕಷ್ಟು ಉಪಾಸನೆ- ಕೀರ್ತನೆ ಮಾಡುವವರ ಕೊರತೆಯೇನೂ ಇಲ್ಲ.
ಆದರೆ… ದುರದೃಷ್ಟವಶಾತ್ ಹ. ಉಮರ್(ರ)ರವರು ಪ್ರತಿಪಾದಿಸಿ ದಂತೆ ಇಸ್ಲಾಂ ಅರ್ಥಾತ್ ಇಸ್ಲಾಮೀ ಮೌಲ್ಯಗಳು ನಮ್ಮನ್ನು ಬಿಟ್ಟು ಅಗಲಿವೆ ಎಂದು ಹೇಳಬಹುದೆ? ನಮಾಝಿಗರಾದ ನಾವು ಅಲ್ಲಾಹ ನೊಂದಿಗೆ ನಮಾಝ್ನಲ್ಲಿ ಗೈಯ್ಯುವ ಪ್ರತಿಜ್ಞೆಗಳನ್ನು ಮೈಗೂಡಿಸಿಕೊಳ್ಳುವಲ್ಲಿ ಹಿಂದೇಟು ಹಾಕುತ್ತಿದ್ದೇವೆ ಅಥವಾ ಅಶ್ರದ್ಧರಾಗಿದ್ದೇವೆ.
ಫಾತಿಹದಲ್ಲಿ… “ತೋರಿಸು ನಮಗೆ ನೀನು ಅನಗ್ರಹಿಸಿದವರ ಮಾರ್ಗ. ಆ ದಿಕೆಟ್ಟ ಧಿಕ್ಕಾರಿಗಳ ಮಾರ್ಗವಲ್ಲ”ವೆಂದು ಪ್ರತಿಜ್ಞೆ ಮಾಡುತ್ತೇವೆ. ಅರ್ಥಾತ್ ಪ್ರವಾದಿಗಳ ಸತ್ಯಸಂಧರ, ಹುತಾತ್ಮರ, ಸಜ್ಜನರ ಮಾರ್ಗ. ದಿಕ್ಕು ತಪ್ಪಿದ ಯಹೂದಿಯರ ಮತ್ತು ಪಾಶ್ಚಾತ್ಯರ ಮಾರ್ಗವಲ್ಲ. ನಮಾಝ್ನಲ್ಲಿ ಮಾಡುವ ಈ ಪ್ರತಿಜ್ಞೆಗಳು ಮುಸಲ್ಮಾನರ ನಿಜ ಬದುಕಿನಲ್ಲಿ ಎಷ್ಟು ಸಾಕ್ಷಾತ್ಕಾರಗೊಳ್ಳುತ್ತದೆ.
ನಮ್ಮ ಆಡಳಿಗಾರರು ಮೇಲುದ್ಧರಿಸಿದಂತೆ ಇಸ್ಲಾಮ್ ವಿರೋಧಿ ವಿಚಾರಧಾರೆಗಳ ಮೂಲಕ ಆಡಳಿತ ನಡೆಸುತ್ತಿದ್ದಾರೆ. ವಿದ್ವಾಂಸರುಗಳಲ್ಲಿ ಒಂದು ವಿಭಾಗ ಪುರೋಹಿತಶಾಹಿಗಳಾಗಿ ಧರ್ಮದ ಮುಖವಾಡದಲ್ಲಿ ಮೌಢ್ಯತೆ ಮತ್ತು ಕಂದಾಚಾರಗಳ ರೂವಾರಿಗಳಾಗಿದ್ದಾರೆ. ಮಾತ್ರವಲ್ಲ ಸಮಾಜದ ಶ್ರೀಮಂತರು ಉಮರಾಗಳ ಸ್ಥಾನಮಾನಗಳನ್ನು ತುಂಬಿಕೊಳ್ಳು ತ್ತಿದ್ದಾರೆ. ಈ ರೀತಿ ಜಗತ್ತಿಗೆ ಮಾದರಿಯಾಗಬಲ್ಲ ಇಸ್ಲಾಮೀ ಮೌಲ್ಯ ಗಳು ಸಂಪ್ರದಾಯಗಳ ಸುಳಿಗೆ ಸಿಲುಕಿ ಮೌಲ್ಯಹೀನವಾಗುತ್ತಿದೆ. ಪ್ರವಾದಿಗಳ, ಸಜ್ಜನರ, ಸತ್ಯಸಂದರ, ಮಾರ್ಗದರ್ಶನಗಳು ನಮಾಝಿನಲ್ಲಿ ಪ್ರತಿಜ್ಞೆಗಳಿಗೆ ಸೀಮಿತವಾಗಿದ್ದು ಅವರ ಆದರ್ಶ ಪಾಲನೆಗಳು ನಿಜ ಜೀವನದಲ್ಲಿ ಕೆಲವೊಂದು ಸ್ವಾರ್ಥ ಆಡಂಬರದ ಆಚರಣೆಗಳಲ್ಲಿ ಮುಗಿದು ಹೋಗುತ್ತಿದೆ. ಆರ್ಥಿಕತೆ, ಶಿಕ್ಷಣ, ಸಾಮಾಜಿಕ ಚಟು ವಟಿಕೆಗಳು ಸಂಘಟನೆ ರಾಜಕೀಯದ ಹೆಜ್ಜೆಗಳಲ್ಲಿ ಇಸ್ಲಾಮೀ ಆದರ್ಶಕ್ಕಿಂತ ಹೆಚ್ಚಾಗಿ ಪಾಶ್ಚಾತ್ಯರ ಅನುಕರಣೆಯಲ್ಲಿ ಅಧಿಷ್ಟಿತವಾಗಿವೆ.
ಇಸ್ಲಾಮ್ ವಿರೋಧಿಸಿದ ಬಡ್ಡಿಯ ಕೊಡುಕೊಳ್ಳುವಿಕೆಯನ್ನು ನಿಯಂತ್ರಿಸುವ ಅಥವಾ ನಿರಸ್ತ್ರಗೊಳಿಸುವ ನಿಟ್ಟಿನಲ್ಲಿ ಯಾವುದೇ ಪರ್ಯಾಯ ವ್ಯವಸ್ಥೆಯನ್ನು ಈ ಬೃಹತ್ ಸಮುದಾಯವು ಇನ್ನೂ ಕಂಡುಕೊಂಡಿಲ್ಲ. ಝಕಾತನ್ನು ನ್ಯಾಯೋಚಿತವಾಗಿ ವಿತರಣೆ ಮಾಡುವ ಸಂಘಟನ ವ್ಯವಸ್ಥೆ, ದಾನ-ಧರ್ಮಗಳನ್ನು ವ್ಯವಸ್ಥಿತವಾಗಿ ವಿತರಿಸುವ ವಿಧಿ-ವಿಧಾನಗಳು ಇನ್ನೂ ಇಸ್ಲಾಮೀ ಮೌಲ್ಯಾಧಾರಿತವಾಗಿಲ್ಲ. ಏತನ್ಮಧ್ಯೆ ಕುರ್ಆನ್ ಪ್ರತಿಪಾದಿಸುವಂತೆ ಒಳಿತನ್ನು ಪ್ರತಿಷ್ಠಾಪಿಸುವವರು ಕೆಡುಕನ್ನು ಕಿತ್ತೊಗೆಯುವವರು ಎಂಬ ಮೌಲ್ಯೋಪದೇಶಗಳು ಸಕಾಲಿಕ ಮುಸ್ಲಿಮ್ ಸಮುದಾಯದ ಧ್ಯೇಯವಾಗಿ ಇನ್ನೂ ಮೂಡಿಬಂದಿಲ್ಲ.
ಖಿಲಾಫತ್ ಆಡಳಿತದಿಂದ ವಂಚಿತವಾದ ಜಾಗತಿಕ ಮುಸ್ಲಿಮ್ ಸಮುದಾಯಕ್ಕೆ ಒಂದು ನಿರ್ಲಿಪ್ತ ನೇತೃತ್ವದ ಅಗತ್ಯವಿದೆ. ಜಾಗತಿಕ ಮಟ್ಟದಲ್ಲಿ ಉಲೆಮಾ ಮತ್ತು ಉಮರಾಗಳಿಂದ ಪ್ರತಿನಿಧೀ ಕರಿಸಲ್ಪಟ್ಟಿ ರುವ ಇಸ್ಲಾಮೀ ಸಂವೇದನೆಗಳಿಗೆ ಪೂರಕವಾಗಿ ಮೇಲ್ನೋಟ ವಹಿಸಿ ತೀರ್ಮಾನ(ಫತ್ವಾ) ನೀಡುವ ಒಂದು ಬೃಹತ್ ಸಂಘಟನೆಯ ಅನಿವಾರ್ಯತೆ ಇದೆ.
ಈ ಜಾಗತಿಕ ಇಸ್ಲಾಮೀ ವಾತಾವರಣವು ವಿಶ್ವದಾದ್ಯಂತ ಮಸೀದಿಗಳ ಮೂಲಕ ಆಯ್ಕೆ ಹೊಂದಿದ ಪ್ರತಿನಿಧಿಗಳಿಂದ ಕೂಡಿದ ಜಾಗತಿಕ ಮುಖದ ಸಂಘಟನೆಯೊಂದು ಮೂಡಿಬರಬೇಕಾಗಿದೆ. ಹಾಗಾದರೆ, ಗತ ಗೌರವ ವರ್ಚಸ್ಸು ಮುತ್ಸದ್ದಿತನವನ್ನು ಪಡೆಯಲು ಸಾಧ್ಯವಾದೀತು. ತನ್ಮೂಲಕ ವೈವಿಧ್ಯತೆಯಲ್ಲಿ ಏಕತೆಯಿರುವ ಒಂದುತ್ತಮ ಸ್ವರೂಪವನ್ನು ಪಡೆಯಬಹುದಾಗಿದೆ. ಭಯೋತ್ಪಾದನೆಯು ಇಸ್ಲಾಮೋ ಪೆÇಬಿಯಾದ ಆರೋಪಗಳ ಮೂಲಕ ಸಮುದಾಯವನ್ನು ತೇಜೋವಧೆ ಗೈಯ್ಯುವ ಷಡ್ಯಂತ್ರಗಳನ್ನು ಮೆಟ್ಟಿ ನಿಲ್ಲಲು ಸಾಧ್ಯವಾದೀತು. ಕುರ್ಆನ್ ಪ್ರತಿಪಾದಿಸಿದಂತೆ ಒಳಿತಿನ ಪ್ರತಿಷ್ಠಾಪನೆ ಕೆಡುಕಿನ ಉನ್ಮೂಲನೆಯ ಹಂತಗಳಲ್ಲಿ ಕಾರ್ಯೋನ್ಮುರಾಗಲು ಇಸ್ಲಾಮೀ ಪ್ರಜ್ಞೆಯು ದಾರಿದೀಪವಾಗಬಹುದು. ಈ ವಿಚಾರಗಳ ಬಗ್ಗೆ ಚರ್ಚೆ ಚಿಂತನೆ ಮೀಮಾಂಸೆಗಳು ಸಮುದಾಯದಲ್ಲಿ ಪೂರ್ವಭಾವಿಯಾಗಿ ಬೆಳೆದುಬರಬೇಕಾಗಿದೆ.












