ಬಂದೂಕು ಹಿಡಿದು ನಾನು “ಡಾನ್” ಆಗಲು ತಾನು ಬಯಸುತ್ತೇನೆ ಎಂದಾತ ಸದ್ಯ ಜೈಲಿಗೆ

0
740

ಸನ್ಮಾರ್ಗ ವಾರ್ತೆ

ನವದೆಹಲಿ: ಬಂದೂಕುಗಳನ್ನು ಹಿಡಿದು ಹವ್ಯಾಸಕ್ಕಾಗಿ ವಿಡಿಯೋವನ್ನು ಚಿತ್ರೀಕರಿಸುತ್ತ ನಾನು ಪಶ್ಚಿಮ ಉತ್ತರ ಪ್ರದೇಶದ (ಯುಪಿ) “ಡಾನ್” ಆಗಲು ತಾನು ಬಯಸುತ್ತೇನೆ ಎಂದು ಸ್ವತಃ ಘೋಷಿಸಿದ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಯುವಕನೋರ್ವನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಈ ವ್ಯಕ್ತಿಯನ್ನು ಗಾಝಿಯಾಬಾದ್‌ನ ಲೋನಿ ಪ್ರದೇಶದ ನಿವಾಸಿ ರಿತಿಕ್ ಮಲಿಕ್ ಎಂದು ಗುರುತಿಸಲಾಗಿದೆ. ವೀಡಿಯೊದಲ್ಲಿ ಬಾಲಿವುಡ್ ಶೈಲಿಯ ಹಿನ್ನೆಲೆ ಸಂಗೀತದೊಂದಿಗೆ ನಾನು ಪಶ್ಚಿಮ ಉತ್ತರ ಪ್ರದೇಶದ (ಯುಪಿ) “ಡಾನ್” ಆಗಲು ತಾನು ಬಯಸುತ್ತೇನೆ. ಆ ಪ್ರದೇಶದ ಅತ್ಯಂತ ಕುಖ್ಯಾತ ಅಪರಾಧಿಯಾಗಬೇಕೆಂಬುದು ತನ್ನ ಮಹತ್ವಾಕಾಂಕ್ಷೆ ಎಂದು ಘೋಷಿಸಿದ್ದನು. ಈ ಹಿನ್ನೆಲೆಯಲ್ಲಿ ವಿಡಿಯೋ ವೈರಲ್ ಆಗಿತ್ತು. ಬಳಿಕ ವಿಡಿಯೋದ ಜಾಡು ಹಿಡಿದ ಪೊಲೀಸರು ಮಲಿಕ್ ನನ್ನು ನಿನ್ನೆ ಬಂಧಿಸಿದ್ದಾರೆ. ಅಲ್ಲದೇ ಬಂದೂಕುಗಳನ್ನು ಹಿಡಿದುಕೊಂಡು ಬೇರೆ ಬೇರೆ ಸ್ಥಳಗಳಲ್ಲಿ ಪೋಸ್ ನೀಡುವ ವಿಡಿಯೋವನ್ನು ಕೂಡ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಗಾಜಿಯಾಬಾದ್ ಎಸ್ಪಿ (ಗ್ರಾಮೀಣ) ಇರಾಜ್ ರಾಜಾ ಅವರು ಟ್ವೀಟ್ ಮಾಡಿದ್ದು, ಬಂದೂಕುಗಳ ಮೇಲಿನ ಪ್ರೀತಿಯಿಂದಾಗಿ ಒಬ್ಬ “ಮಹಾನ್ ವ್ಯಕ್ತಿ” ಜೈಲಿಗೆ ಬಂದಿದ್ದಾರೆ. ಆ ವ್ಯಕ್ತಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು ದೊಡ್ಡ ವಿಷಯ. ವ್ಯಂಗ್ಯವಾಡುತ್ತಾ ಮಲಿಕ್ ಜೈಲಿನಲ್ಲಿ ತನ್ನ ಭವಿಷ್ಯಕ್ಕಾಗಿ ಹಾರೈಸಿ ಟ್ವೀಟ್ ಮಾಡಿದ್ದಾರೆ.