ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಸೆ.2: ಅಸ್ಸಾಂ ನಾಗರಿಕ ಪಟ್ಟಿಯ ಕುರಿತು ಹೊಸ ಕಾನೂನು ನಿರ್ಮಾಣಕ್ಕೆ ಬಿಜೆಪಿ ಮುಂದಾಗಿದೆ. ಪೌರತ್ವ ಪಟ್ಟಿಯಿಂದ ಹೊರಗಾಗಿರುವ ನೈಜ ಪ್ರಜೆಗಳನ್ನು ಸೇರಿಸುವುದಕ್ಕಾಗಿ ಕಾನೂನು ನಿರ್ಮಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಹತ್ತೊಂಬತ್ತು ಲಕ್ಷ ಮಂದಿಯಲ್ಲಿ ಬಂಗಾಳಿ ಮುಸ್ಲಿಮರಿಗಿಂತ ಹೆಚ್ಚು ಬಂಗಾಳಿ ಹಿಂದೂಗಳ ಹೆಸರು ಇರುವುದು ಬಿಜೆಪಿ, ಸಂಘಪರಿವಾರ ಸಂಘಟನೆಗಳಿಗೆ ತಲೆನೋವಾಗಿ ಪರಿಣಮಿಸಿದೆ. ಪಟ್ಟಿಯಲ್ಲಿ ಸೇರಿದ ಅನರ್ಹರನ್ನು ಹೊರಗಿಡಲು ಬಿಜೆಪಿ ಆಗ್ರಹಿಸಲಿದೆ.
ಇದಕ್ಕಾಗಿ ಸುಪ್ರೀಂಕೋರ್ಟಿನಲ್ಲಿ ಮರುಪರಿಶೀಲನೆ ಅದು ಅರ್ಜಿ ಸಲ್ಲಿಸಲಿದೆ. ಅಸ್ಸಾಂನಲ್ಲಿ ಹತ್ತೊಂಬತ್ತು ಲಕ್ಷ ಮಂದಿ ಪೌರತ್ವ ಪಟ್ಟಿಯಿಂದ ಹೊರಗಿದ್ದಾರೆ. ಪೌರತ್ವ ಪಟ್ಟಿ ಹೊರಬಂದ ಬಳಿಕ ಬಿಜೆಪಿಯೊಳಗೆ ಅಸಮಾಧಾನ ಕಾಣಿಸಿಕೊಂಡಿದೆ. ಹಲವು ಪ್ರದೇಶಗಳಲ್ಲಿ ಬಿಜೆಪಿ ವೋಟು ಬ್ಯಾಂಕ್ಗಳಲ್ಲಿ ಕಠಿಣ ಅಸಂತೃಪ್ತಿ ತಲೆದೋರಿದೆ. ಪೌರತ್ವ ಪಟ್ಟಿಯಿಂದ ಹೊರಗಾದವರಲ್ಲಿ ಹಲವರು ಬಿಜೆಪಿ ಬಯಸದವರು ಕೂಡಾ ಸೇರಿದ್ದಾರೆ. ಆದ್ದರಿಂದ ಮರುಪರಿಶೀಲನಾ ಅರ್ಜಿ ಸಲ್ಲಿಸುವ ಕುರಿತು ಬಿಜೆಪಿ ಚಿಂತನೆ ನಡೆಸುತ್ತಿದೆ. ಹಲವು ಅನರ್ಹರು ಪಟ್ಟಿಗೆ ಸೇರಿದ್ದಾರೆ ಎಂದು ಬಿಜೆಪಿ ಆರೋಪಿಸುತ್ತಿದೆ. ಮರುಪರಿಶೀಲನಾ ಅರ್ಜಿಯೊಂದಿಗೆ ಕಾನೂನು ನಿರ್ಮಾಣಕ್ಕೂ ಬಿಜೆಪಿ ಸಜ್ಜಾಗಿದೆ.












