ಉತ್ತರ ಪ್ರದೇಶ, ಗುಜರಾತ್‍ ಬಳಿಕ ಊರುಗಳ ಹೆಸರು ಬದಲಿಸಲು ಹೊರಟ ಅಸ್ಸಾಂ ಸರಕಾರ…!

0
195

ಸನ್ಮಾರ್ಗ ವಾರ್ತೆ

ಗುವಾಹಟಿ: ಉತ್ತರ ಪ್ರದೇಶ, ಗುಜರಾತ್‍ಗಳಲ್ಲಿ ವ್ಯಾಪಕವಾಗಿ ಹೆಸರು ಬದಲಿಸಿದಂತೆ ಅಸ್ಸಾಮಿನ ಬಿಜೆಪಿ ಸರಕಾರ ಕೂಡ ಅಂತಹ ಹೆಜ್ಜೆ ಇಟ್ಟಿದೆ. ಮುಖ್ಯಮಂತಿ ಹೇಮಂತ್ ಬಿಶ್ವ ಶರ್ಮಾ ಇದಕ್ಕೆ ಸಂಬಂಧಿಸಿ ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ ಸ್ಥಳದ ಹೆಸರನ್ನು ಬದಲಾಯಿಸಲು ಜನರಿಗೆ ಅವಕಾಶ ಕೊಡುವುದಾಗಿ ತಿಳಿಸಿರುವ ಅವರು, ಜನರು ಇ-ಪೋರ್ಟಲ್‍ನಲ್ಲಿ ಹೆಸರು ಬದಲಾಯಿಸಲು ಹೆಸರು ಸೂಚಿಸಬಹುದು ಎಂದು ಹೇಳಿದ್ದಾರೆ.

ಹೊಸ ಹೆಸರುಗಳು ದೇಶದ ಸಂಸ್ಕೃತಿ ಮತ್ತು ಪರಂಪರೆಯನ್ನು ಸೂಚಿಸುವಂತಹ ಹೆಸರಿರಬೇಕೆಂದು ಅವರು ಗುವಾಹಟಿಯ ಎರಡನೇ ಮೆಡಿಕಲ್ ಕಾಲೇಜು ಉದ್ಘಾಟಿಸುವ ಕಾರ್ಯಕ್ರದಲ್ಲಿ ಅವರು ಮಾತನಾಡುತ್ತಾ ಹೇಳಿದ್ದಾರೆ.

ಈಗ ಕೆಲವು ಸ್ಥಳಗಳ ಹೆಸರು ಜನರಿಗೆ ಬೇಕಾಗಿಲ್ಲ. ಕಾಮಕ್ಯ ಮಂದಿರಕ್ಕೆ ದಾಳಿ ಮಾಡಿದ ಬಂಗಾಳದ ಸುಲ್ತಾನ ಒಬ್ಬ ಮುಸ್ಲಿಂ ಜನರಲ್ ಹೆಸರು ಗುವಾಹಟಿಯ ಕಲಾಫರ್ ಆಗಿದೆ ಎಂದು ಉದಾಹರಣೆ ನೀಡಿರುವ ಹೇಮಂತ್ ಬಿಶ್ವ ಶರ್ಮಾ, ಇದನ್ನು ತೆಗೆದು ಸೂಕ್ತ ಹೆಸರು ಇರಿಸುವುದಕ್ಕೆ ಹೆಸರು ಸೂಚಿಸಬೇಕೆಂದು ಶಾಸಕರಿಗೆ ಮನವಿ ಮಾಡುವುದಾಗಿ ಅವರು ಹೇಳಿದರು.

ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ದೇಶದ ವಿವಿಧ ವಿಮಾನ ನಿಲ್ದಾಣಗಳಲ್ಲಿ, ರೈಲು ನಿಲ್ದಾಣಗಳಲ್ಲಿ ಕ್ರೀಡಾ ಸಮುಚ್ಚಯ ಹೆಸರು ಬದಲಿಸಿದ್ದು. ಬಿಜೆಪಿ ಆಳ್ವಿಕೆಯ ರಾಜ್ಯ ಅಸ್ಸಾಮಿನಲ್ಲಿಯೂ ಇದು ಮುಂದುವರಿಯಲಿದೆ ಎಂದು ವರದಿಯಾಗಿದೆ.