ವಿಧಾನಸಭಾ ಚುನಾವಣೆ ಹಿನ್ನೆಲೆ: ಹಸುವನ್ನು ರಾಜ್ಯಮಾತೆ ಎಂದು ಘೋಷಿಸಿದ ಮಹಾರಾಷ್ಟ್ರ ಸರ್ಕಾರ

0
94

ಸನ್ಮಾರ್ಗ ವಾರ್ತೆ

ಮಹಾರಾಷ್ಟ್ರದಲ್ಲಿ ಶೀಘ್ರದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು ಇದಕ್ಕೆ ಪೂರಕವೆಂಬಂತೆ ಹಸುವನ್ನು ರಾಜ್ಯಮಾತೆ ಎಂದು ಮಹಾರಾಷ್ಟ್ರ ಸರ್ಕಾರ ಘೋಷಿಸಿದೆ

ಮಹಾರಾಷ್ಟ್ರದಲ್ಲಿ ಅಧಿಕಾರರೂಢ ಬಿಜೆಪಿ ನೇತೃತ್ವದ ಸರಕಾರದ ವಿರುದ್ಧ ಜನರು ತೀವ್ರವಾಗಿ ಸಿಟ್ಟಾಗಿದ್ದಾರೆ. ಈ ಬಾರಿ ವಿಪಕ್ಷಗಳ ಒಕ್ಕೂಟವಾದ ಅಗಾಡಿ ಒಕ್ಕೂಟ ಅಧಿಕಾರಕ್ಕೆ ಬರಲಿದೆ ಎಂಬ ಬಗ್ಗೆ ವಿವಿಧ ಮಾಹಿತಿಗಳು ಬರುತ್ತಿರುವುದರ ನಡುವೆಯೇ ಈ ಹಸು ರಾಜ್ಯಮಾತೆಯ ಹೊಸ ಅಸ್ತ್ರವನ್ನು ಬಿಜೆಪಿ ಝಲಪಿಸಿದೆ.

ಕಳೆದ ವಾರ ನಡೆದ ವಿಶ್ವವಿದ್ಯಾಲಯದ 10 ಸ್ಥಾನಗಳ ಚುನಾವಣೆಯಲ್ಲಿ ಹತ್ತನ್ನು ಕೂಡ ವಿಪಕ್ಷ ವಿದ್ಯಾರ್ಥಿ ಸಂಘಟನೆ ಗೆದ್ದುಕೊಂಡಿತ್ತು. ಎಬಿವಿಪಿ ಸಂಪೂರ್ಣವಾಗಿ ಮುಖಭಂಗವನ್ನ ಅನುಭವಿಸಿತ್ತು. ಇದು ಮುಂದಿನ ಚುನಾವಣಾ ಫಲಿತಾಂಶದ ಮುನ್ಸೂಚನೆ ಎಂದು ಹೇಳಲಾಗುತ್ತಿದೆ. ಈ ನಡುವೆ ಬಿಜೆಪಿ ಹೊಸ ಆಟಕ್ಕೆ ಇಳಿದಿದೆ.