ಅಯೋಧ್ಯೆ: ಮಧ್ಯಸ್ಥಿಕೆ ವಿಫಲ; ಆ.6ರಿಂದ ವಾದ

0
386

ಹೊಸದಿಲ್ಲಿ, ಆ. 2: ಅಯೋಧ್ಯೆ ಭೂವಿವಾದ ಪ್ರಕರಣದಲ್ಲಿ ಮಧ್ಯಸ್ಥಿಕೆಯ ಮೂಲಕ ಸಮನ್ವಯ ಯತ್ನ ವಿಫಲವಾಗಿದೆ ಎಂದು ಸುಪ್ರೀಂಕೋರ್ಟು ತಿಳಿಸಿದೆ. ಆಗಸ್ಟ್ ಆರರಿಂದ ಪ್ರಕರಣದಲ್ಲಿ ಕೋರ್ಟು ವಾದ ಆಲಿಕೆ ನಡೆಸಲಿದೆ. ಸುಪ್ರೀಂಕೋರ್ಟಿನ ಮಾಜಿ ಜಡ್ಜ್ ಎಫ್‍ಎಂಎ ಖಲೀಫುಲ್ಲರ ನೇತೃತ್ವದ ಸಮಿತಿ ಮಧ್ಯಸ್ಥಿಕೆ ವಹಿಸಿತ್ತು. ಶ್ರೀಶ್ರೀ ರವಿಶಂಕರ್ ಮತ್ತು ಹಿರಿಯ ವಕೀಲ ಶ್ರೀರಾಂ ಪಂಜು ಸಮಿತಿಯ ಇತರ ಸದಸ್ಯರಾಗಿದ್ದರು. ಆಗಸ್ಟ್ ಆರರಿಂದ ಪ್ರತಿದಿವಸ ಸುಪ್ರೀಂಕೋರ್ಟಿನ ವಿಚಾರಣೆ ಆರಂಭವಾಗಲಿದೆ. ಚೀಫ್ ಜಸ್ಟಿಸ್ ರಂಜನ್ ಗೊಗೊಯ್ ಅಧ್ಯಕ್ಷತೆಯ ಸಂವಿಧಾನ ಪೀಠ ಕೇಸು ಪರಿಗಣಿಸುತ್ತಿದೆ. ಚೀಫ್ ಜಸ್ಟಿಸ್ ರಲ್ಲದೆ ಜಸ್ಟಿಸ್ ಎಸ್‍ಎ ಬೊಂಬ್ಡೆ, ಡಿವೈ ಚಂದ್ರಚೂಡ್ ಪೀಠದ ಇತರ ಸದಸ್ಯರಾಗಿದ್ದಾರೆ.

ಸಮಿತಿಯ ವರದಿಯನ್ನು ಮಂಗಳವಾರ ಕೋರ್ಟಿಗೆ ಸಲ್ಲಿಸಿತು. ಜುಲೈ ಹನ್ನೊಂದಕ್ಕೆ ಸುಪ್ರೀಂಕೋರ್ಟು ಪ್ರಕರಣದಲ್ಲಿ ಮಧ್ಯಸ್ಥಿಕೆ ಯತ್ನದ ಪ್ರಗತಿಯನ್ನು ಅವಲೋಕಿಸಿತ್ತು.