ಬಾಂಗ್ಲಾದೇಶ: ಮಾಜಿ ಪ್ರಧಾನಿ ಖಾಲಿದಾ ಜಿಯಾರಿಗೆ 6 ತಿಂಗಳ ಮಧ್ಯಂತರ ಜಾಮೀನು

0
450

ಚಿತ್ತಗಾಂಗ್, ಮಾ.6: ಬಾಂಗ್ಲಾದೇಶದ ಮಾಜಿ ಪ್ರಧಾನಿ ಹಾಗೂ ವಿಪಕ್ಷ ಬಿಎನ್‍ಪಿಯ ಅಧ್ಯಕ್ಷೆ ಖಾಲಿದಾ ಝಿಯಾರಿಗೆ ಆರು ತಿಂಗಳ ಮಧ್ಯಂತರ ಜಾಮೀನನ್ನು ಹೈಕೋರ್ಟು ಮಂಜೂರು ಮಾಡಿದೆ. ಕುಮಿಲ್ಲ ಅರ್ಸನ್ ಪ್ರಕರಣದಲ್ಲಿ ಖಾಲಿದಾ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ.

2015 ಫೆಬುವರಿ 3ರಂದು ಬಿಎನ್‍ಪಿ ನೇತೃತ್ವದ ಸಖ್ಯದ ಹೋರಾಟದ ಸಂದರ್ಭದಲ್ಲಿ ಛೌದ ಗ್ರಾಮದ ಜೊಗ್ಮೋಹನ್ ಪುರದಲ್ಲಿ ಬಸ್ಸಿನಲ್ಲಿ ಪೆಟ್ರೋಲ್ ಬಾಂಬು ಸ್ಫೋಟಗೊಂಡು ಎಂಟು ಮಂದಿ ಮೃತಪಟ್ಟಿದ್ದರು. ಇತರ 20 ಮಂದಿ ಗಾಯಗೊಂಡಿದ್ದರು.

ಜಸ್ಟಿಸ್ ಎ ಕೆ ಎಂ ಅಸದುಝ್ಝಮಾನ್ ಮತ್ತು ಜಸ್ಟಿಸ್ ಎಸ್ ಎಂ ಮೊಝ್ಬಿರ್ ರಹ್ಮಾನ್‍ರ ಪೀಠ ಖಾಲಿದಾರಿಗೆ ಜಾಮೀನು ನೀಡಿದೆ. ಸರಕಾರದ ಪರ ಅಟಾರ್ನಿ ಜನರಲ್ ಮಹಬೂಬೆ ಅಲಂ ಕೋರ್ಟಿನಲ್ಲಿ ಹಾಜರಾಗಿದ್ದರು. ಖಾಲಿದಾರ ಪರ ಎ ಜೆ ಮುಹಮ್ಮದ ಅಲಿ ಸ್ಟೂದ್ ಕೋರ್ಟಿನಲ್ಲಿ ವಾದ ಮಂಡಿಸಿದ್ದಾರೆ.

ಈ ಹಿಂದೆ ಫೆಬ್ರುವರಿ 27ರಂದು ಕುಮಿಲ್ಲದ ಅಧೀನ ನ್ಯಾಯಾಲಯ ಖಾಲಿದಾರಿಗೆ ಜಾಮೀನು ನೀಡಲು ನಿರಾಕರಿಸಿತ್ತು. ನಂತರ ಖಾಲಿದಾರ ವಕೀಲರು ಹೈಕೋರ್ಟಿನಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದರು.