ಬೆಂಗಳೂರು ನಿರ್ಮಾಣ ಹಂತದ ಕಟ್ಟಡ ಕುಸಿತ; ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡ HRS ತಂಡ

0
79

ಸನ್ಮಾರ್ಗ ವಾರ್ತೆ

ಬೆಂಗಳೂರಿನ ಬಾಬೂಸ ಪಾಳ್ಯದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದ ದುರ್ಘಟನೆಯ ಸ್ಥಳದಲ್ಲಿ NDRF, ಅಗ್ನಿ ಶಾಮಕ ದಳ, ಪೋಲೀಸ್ ಇಲಾಖೆ ಹಾಗೂ ಸ್ಥಳೀಯರ ಸಹಕಾರದಿಂದ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡ ಸುಮಾರು 14 ಮಂದಿ ಕಟ್ಟಡ ಕಾರ್ಮಿಕರನ್ನು ರಕ್ಷಿಸಲಾಗಿದೆ.

ತಡ ರಾತ್ರಿಯಲ್ಲಿ ಯಶವಂತಪುರ ಹ್ಯುಮ್ಯಾನಿಟೇರಿಯನ್ ರಿಲೀಫ್ ಸೊಸೈಟಿ (HRS) ಯ ಸ್ವಯಂಸೇವಕರ ತಂಡವು ತೆರಳಿ ರಕ್ಷಣಾ ಕಾರ್ಯದಲ್ಲಿ ತನ್ನನ್ನು ತೊಡಗಿಕೊಂಡಿದೆ. 2 ಮೃತ ದೇಹವನ್ನು ಹುಡುಕಿ ತರುವಲ್ಲಿ ಯಶಸ್ವಿಯಾಗಿದೆ. ಜನ ಸಂದಣಿ ನಿಂಯತ್ರಣ ಕಾರ್ಯದಲ್ಲಿಯೂ ಭಾಗಿಯಾಗಿದ್ದಾರೆ.

ಹೆಚ್.ಆರ್.ಎಸ್. ಸೇವಾ ಸಂಸ್ಥೆಯ ಪರಿಚಯವಿರುವ ಇಲಾಖೆಯ ಅಧಿಕಾರಿಗಳು ಸಂಪೂರ್ಣ ಬೆಂಬಲವನ್ನು ನೀಡಿದ್ದಾರೆ ಎಂದು ಹೆಚ್.ಆರ್.ಎಸ್. ಗ್ರೂಪ್ ಲಿಡರ್ ಮನ್ಸೂರು ಅಹ್ಮದ್ ತಿಳಿಸಿದ್ದಾರೆ. ಮೃತರ ಸಂಬಂದಿಕರನ್ನು ಬೇಟಿಯಾಗಿ ಸಾಂತ್ವನ ನೀಡುವ ಪ್ರಯತ್ನ ಮಾಡಿರುವುದಾಗಿ ಅವರು ಹೇಳಿದರು. ಕಳಪೆ ಕಾಮಗಾರಿ, ಮುಂಜಾಗ್ರತಾ ಕ್ರಮದ ಕೊರತೆ ಹಾಗೂ ಮಳೆಯಿಂದಾಗಿ ಈ ದುರ್ಘಟನೆ ನಡೆದಿರುವುದಾಗಿ ಅಂದಾಜಿಸಲಾಗಿದೆ.