ಬೆಂಗಳೂರಿನ ಏರ್ ಶೋ ಪಾರ್ಕಿನಲ್ಲಿ 300 ಕಾರುಗಳು ಭಸ್ಮ

0
785

ಬೆಂಗಳೂರು: ಬೆಂಗಳೂರಿನ ಪಾರ್ಕಿಂಗ್‍ ವಲಯದಲ್ಲಿ ನಿಲ್ಲಿಸಿದ್ದ 300 ಕಾರುಗಳು ಸುಟ್ಟುಹೋಗಿವೆ. ಬೆಂಗಳೂರು ಏರ್ ಶೋ ನಡೆಯುವ ವೇದಿಕೆಯ ಸಮೀಪದ ಪಾರ್ಕಿಂಗ್ ಸ್ಥಳದಲ್ಲಿ ದುರಂತ ನಡೆದಿದೆ.

ಬೆಂಗಳೂರು ಉತ್ತರ ಯಲಹಂಕ ಏರ್‍ಬೇನ ಸಮೀಪ ಆಕಾಶದಲ್ಲಿ ದಟ್ಟ ಹೋಗೆ ಆವರಿಸಿದ್ದು ದುರಂತ ಸ್ಥಳದಲ್ಲಿ ಹತ್ತು ಅಗ್ನಿಶಾಮಕ ದಳ ಬೆಂಕಿ ನಂದಿಸಲು ಶ್ರಮಿಸುತ್ತಿವೆ.

ಕಾರು ನಿಲ್ಲಿಸಿದ್ದ ಸ್ಥಳದಲ್ಲಿ ಹುಲ್ಲಿದ್ದು ಯಾರೊ ಸಿಗರೇಟು ಸೇದಿ ಎಸೆದದ್ದರಿಂದ ಕಾರುಗಳಿಗೆ ಬೆಂಕಿ ಹಿಡಿದಿರಬಹುದು ಎಂದು ಪ್ರಾಥಮಿಕ ಅಂದಾಜು. ಪಾರ್ಕಿಂಗ್ ಕ್ಷೇತ್ರದಲ್ಲಿ ಒಣಗಿದ ಹುಲ್ಲುಗಲು ರಭಸದಲ್ಲಿ ಗಾಳಿ ಬೀಸುತ್ತಿದ್ದುದರಿಂದ ಬೆಂಕಿ ಅತಿಬೇಗನೆ ಉರಿದಿರಬಹುದು. ನೂರಾರು ದ್ವಿಚಕ್ರ ವಾಹನಗಳು ಕಾರುಗಳು ಬೆಂಕಿಗಾಹುತಿಯಾಗಿದ್ದು ಬೆಂಕಿ ನಿಯಂತ್ರಣಕ್ಕೆ ಬಂದಿದೆ.

ಘಟನೆಯಿಂದ ಏರ್ ಶೋ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಆಕಾಶದೆತ್ತರ ಕಪ್ಪು ದಟ್ಟ ಹೊಗೆ ಕಾಣಿಸಿಕೊಂಡಿದ್ದು ವಿಮಾನ ಹಾರಾಟ ಸಾಧ್ಯವಾಗಿಲ್ಲ. ಐದು ದಿವಸಗಳ ಏರ್‍ಶೋ ನಾಳೆ ಮುಕ್ತಾಯಗೊಳ್ಳಲಿದೆ.