ಇಸ್ರೇಲ್‌ಗೆ ಬೆಂಬಲ ಪುನರುಚ್ಚರಿಸಿದ ಬೈಡೆನ್; ಸೇನಾ ನೆರವು ಕೂಡ ಮುಂದುವರಿಯಲಿದೆ

0
306

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್, ಡಿ. 12: ಗಾಝದಲ್ಲಿ ಜನಸಾಮಾನ್ಯರ ನರಮೇಧ ಮುಂದುವರಿದಿರುವ ಹೊರತಾಗಿಯೂ ಇಸ್ರೇಲಿನ ಬೆಂಬಲವನ್ನು ಅಮೆರಿಕ ಪುನರುಚ್ಚರಿಸಿತು.

ಇಸ್ರೇಲಿಗೆ ಸ್ವತಂತ್ರ ಯಹೂದಿ ರಾಷ್ಟ್ರವಾಗಿರುವ ಎಲ್ಲಾ ಹಕ್ಕು ಇದೆ ಎಂದ ಬೈಡನ್, ಸೈನಿಕ ಸಹಾಯವನ್ನೂ ಮುಂದುವರಿಸುವುದಾಗಿ ಹೇಳಿದರು.

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹುರೊಂದಿಗೆ ಕಳೆದ ವರ್ಷಗಳಲ್ಲಿ ಹಲವು ರೀತಿ ಭಿನ್ನಾಭ್ರಿಪ್ರಾಯವಿತ್ತು. ಹಮಾಸ್ ಅನ್ನು ನಿರ್ಮೂಲಿಸುವ ಹೋರಾಟದಲ್ಲಿ ಎಲ್ಲ ಸೈನಿಕ ಸಹಾಯವನ್ನು ಕೊಡುತ್ತೇವೆ ಎಂದು ಅವರು ಹೇಳಿದರು.

ಆದರೆ ಅವರು ಬಹಳ ಎಚ್ಚರಿಕೆಯಿಂದ ಮುಂದೆ ಸಾಗಬೇಕು. ಒಂದೇ ರಾತ್ರೆಯಲ್ಲಿ ಜಗತ್ತಿನ ಸಾರ್ವತ್ರಿಕ ಅಭಿಪ್ರಾಯ ಬದಲಾಗಬಹುದಾಗಿದೆ. ಹಾಗೆ ಆಗಲು ನಾವು ಬಿಡುವುದಿಲ್ಲ ಎಂದು ಬೈಡನ್ ಹೇಳಿದರು.

ಗಾಝದಲ್ಲಿ ಯುದ್ಧ ವಿರಾಮವನ್ನು ಅಮೆರಿಕ ವಿರೋಧಿಸಿ ವೀಟೊ ಮಾಡಿತ್ತು. ವಿಶ್ವಸಂಸ್ಥೆಯ ಚಾರ್ಟರಿನ 99ನೇ ಪರಿಚ್ಛೇಧ ಆರ್ಟಿಕಲ್ 99 ಅನ್ನು ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ತುರ್ತು ರಕ್ಷಾ ಸಮಿತಿ ಸಭೆಯಲ್ಲಿ ಮಂಡಿಸಿದ್ದರು. ಶುಕ್ರವಾರ ಅಮೆರಿಕ ವೀಟೊ ಮಾಡಿತು.
15 ಸದಸ್ಯರು ರಕ್ಷಾ ಸಮಿತಿಯಲ್ಲಿದ್ದು ವೀಟೊ ಮಾಡುವುದರಿಂದ ಬ್ರಿಟನ್ ದೂರ ನಿಂತಿದೆ. ಉಳಿದ ಹದಿಮೂರು ದೇಶಗಳು ಕದನ ವಿರಾಮವನ್ನು ಬೆಂಬಲಿಸಿದುವು. ಈ ಹಿಂದೆ ಯುದ್ಧ ವಿರಾಮ ಮತ್ತು ಕೈದಿಗಳ ಅದಲು ಬದಲಿಗೆ ತಂದ ಪ್ರಸ್ತಾವವನ್ನು ಒಟ್ಟು 193 ದೇಶಗಳಲ್ಲಿ 121 ದೇಶಗಳು ಬೆಂಬಲಿಸಿದ್ದವು. 14 ದೇಶಗಳು ವಿರೋಧಿಸಿ 44 ದೇಶಗಳು ದೂರ ನಿಂತಿದ್ದವು.