ಬಡ ರಾಜ್ಯಗಳ ಪಟ್ಟಿಯಲ್ಲಿ ಬಿಹಾರಕ್ಕೆ ಕೊನೆಯ ಸ್ಥಾನ| ಡಬಲ್ ಇಂಜಿನ್ ಸರಕಾರ ಕೊನೆಯಲ್ಲಿ ನಂಬರ್ ಒನ್: ತೇಜಸ್ವಿ ಯಾದವ್ ವ್ಯಂಗ್ಯ

0
284

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಬಿಜೆಪಿಯ ಡಬಲ್ ಇಂಜಿನ್ ಅಭಿವೃದ್ಧಿಯ ಅಭಿಯಾನವನ್ನು ಆರ್‍ಜೆಡಿ ನಾಯಕ ತೇಜಸ್ವಿ ಯಾದವ್ ಟೀಕಿಸಿದ್ದಾರೆ. ನೀತಿ ಆಯೋಗದ ವಿವಿಧ ವರದಿಗಳಲ್ಲಿ ಬಿಹಾರ ಬಡ ರಾಜ್ಯಗಳ ಪಟ್ಟಿಯಲ್ಲಿ ತುಂಬ ಹಿಂದುಳಿದಿದೆ. ಇದನ್ನು ಸೂಚಿಸಿ ಅವರು ಡಬಲ್ ಇಂಜಿನ್ ಅಭಿವೃದ್ಧಿಯ ಪಟ್ಟಿಯಲ್ಲಿ ಕೊನೆಯಲ್ಲಿ ಮೊದಲ ನಂಬರ್‌ ನಲ್ಲಿದೆ ಎಂದು ವ್ಯಂಗ್ಯವಾಡಿದರು.

ನೀತಿ ಆಯೋಗದ ವರದಿಯನ್ನು ನೋಡಿಲ್ಲ ಎಂದು ನಿತೀಶ್ ಕುಮಾರ್ ಹೇಳಿದ್ದನ್ನು ಉಲ್ಲೇಖಿಸಿ ಯಾವ ವಿಷಯದಲ್ಲಿ ಕೇಳಿದರೂ ನಿತೀಶ್‍ರಲ್ಲಿ ಒಂದೇ ಉತ್ತರ ಇದೆ ನನಗೆ ಗೊತ್ತಿಲ್ಲ. ಈಗಿನ ಪರಿಸ್ಥಿತಿಯ ಎಬಿಸಿಡಿ ಅವರಿಗೆ ಗೊತ್ತಿಲ್ಲ ಎಂದು ತೇಜಸ್ವಿ ಆರೋಪಿಸಿದರು. ಬಿಹಾರದ ಹನ್ನೊಂದು ಕೋಟಿ ಜನರಲ್ಲಿ ಶೇ.52 ಬಡವರಾಗಿದ್ದು ನೀತಿ ಆಯೋಗ ಇತ್ತೀಚೆಗೆ ಪಟ್ಟಿ ಪ್ರಕಟಿಸಿತ್ತು. ಪೋಷಕ ಆಹಾರ ಸೂಚಿಯಲ್ಲಿ ಶೇ.51.88 ಜನರು ಕೊರತೆ ಎದುರಿಸುತ್ತಿದ್ದಾರೆ.

ಕೇಂದ್ರದಲ್ಲಿ ಕಾಂಗ್ರೆಸ್ಸನ್ನು ನಾವು ಬೆಂಬಲಿಸುವುದು. ಬಿಹಾರದ ಉಪಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುವುದು ಕಾಂಗ್ರೆಸ್ಸಿನ ತೀರ್ಮಾನವಾಗಿತ್ತು. ಆದರೆ, ವಿಧಾನಸಭೆ ಚುನಾವಣೆಯಲ್ಲಿ ಜೊತೆಗೆ ಸ್ಪರ್ಧಿಸುತ್ತೇವೆ. ಉತ್ತರಪ್ರದೇಶ ಚುನಾವಣೆಯಲ್ಲಿ ಎಐಎಂಐಎಂ ಒಂದು ಸವಾಲೆ ಅಲ್ಲ. ನಮಗೆ ಉತ್ತರಪ್ರದೇಶದಲ್ಲಿ ಅಂತಹ ಪ್ರಭಾವವಿಲ್ಲ. ಹೀಗೆಯೇ ಎಐಎಂಐಎಂ ಕೂಡ. ಬಿಜೆಪಿ ಮತ್ತು ಸಮಾಜವಾದಿ ಪಾರ್ಟಿಯ ನಡುವೆ ನೇರ ಸ್ಪರ್ಧೆಯಿದೆ ಎಂದು ತೇಜಸ್ವಿ ಹೇಳಿದರು.