ರೈಲಿನಲ್ಲಿ ಒಳುಡುಪಿನ ಮೇಲೆ ಶಾಸಕನ ಓಡಾಟ; ಪ್ರಶ್ನಿಸಿದ ಸಹಯಾತ್ರಿಕರಿಗೆ ಬೆದರಿಕೆ

0
505

ಸನ್ಮಾರ್ಗ ವಾರ್ತೆ

ಪಾಟ್ನ: ಮಹಿಳಾ ಪ್ರಯಾಣಿಕರಿದ್ದ ಕಂಪಾರ್ಟ್ಮೆಂಟಿನಲ್ಲಿ ಬಿಹಾರದ ಶಾಸಕ ಒಳ ಉಡುಪಿನಲ್ಲಿ ಪ್ರಯಾಣಿಸಿರುವುದು ವಿವಾದವಾಗಿದೆ. ಸಹಪ್ರಯಾಣಿಕರು ಪ್ರಶ್ನಿಸಿದಾಗ ಶಾಸಕರು ಬೈದು ಬೆದರಿಕೆಹಾಕಿದರೆಂದು ಹೇಳಲಾಗುತ್ತಿದೆ. ಗೋಪಾಲ್ ಮಂಡಲ್ ಜೆಡಿಯು ಶಾಸಕರಾಗಿದ್ದಾರೆ.

ಪಾಟ್ನದಿಂದ ದಿಲ್ಲಿಗೆ ಹೋಗುವ ತೇಜಸ್ ರಾಜಧಾನಿ ಎಕ್ಸ್‌ಪ್ರೆಸ್ ಕಂಪಾರ್ಟ್ಮೆಂಟಿನಲ್ಲಿ ಒಳುಡುಪು ಧರಿಸಿ ನಡೆದಾಡಿದ್ದರು. ತನ್ನ ಹೊಟ್ಟೆ ಸರಿಯಿರಲಿಲ್ಲ. ಅರ್ಜೆಂಟಾಗಿ ಶೌಚಾಲಯಕ್ಕೆ ಹೋದ್ದರಿಂದ ಹೀಗೆ ಆಗಿತ್ತು ಎಂದು ಶಾಸಕರು ಹೇಳಿದರು. ತಾನು ಸಹ ಪ್ರಯಾಣಿಕರೊಂದಿಗೆ ಕೆಟ್ಟದಾಗಿ ಮಾತಾಡಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಗುರುವಾರ ರಾತ್ರೆ ಪಾಟ್ನದಿಂದ ದಿಲ್ಲಿಗೆ ಅವರು ಪ್ರಯಾಣಿಸುತ್ತಿದ್ದರು. ಕಂಪಾರ್ಟ್ಮೆಂಟಿನಲ್ಲಿ ಪ್ರಹಾದ್ ಪಾಸ್ವಾನ್ ಎಂಬವರು ಇದ್ದರು. ಶಾಸಕರ ಈ ವರ್ತನೆಯನ್ನು ಅವರು ಪ್ರಶ್ನಿಸಿದ ಬೆನ್ನಿಗೆ ಕೋಪಗೊಂಡ ಮಂಡಲ್ ತನ್ನ ಸಹೋದರಿ ಅಮ್ಮನಿಗೆ ಬೈದರು ಎಂದು ದೂರಿದ್ದಾರೆ. ತನ್ನ ಸಹಿತ ಸಹಪ್ರಯಾಣಿಕರಿಗೆ ಗುಂಡು ಹಾರಿಸುವುದಾಗಿ ಬೆದರಿಕೆ ಹಾಕಿದರು ಎಂದು ಪ್ರಹಾದ್ ಪಾಸ್ವಾನ್ ಹೇಳಿದ್ದಾರೆ.