ಬಿಹಾರದಲ್ಲಿ ಹಕ್ಕಿಜ್ವರದ ಏರಿಕೆ: ವಿಶ್ವ ಪ್ರಾಣಿ ಆರೋಗ್ಯ ಸಂಸ್ಥೆ ವರದಿ

0
265

ಸನ್ಮಾರ್ಗ ವಾರ್ತೆ

ಪಾಟ್ನಾ: ಬಿಹಾರದಲ್ಲಿ ಹಕ್ಕಿ ಜ್ವರದ ವೈರಸ್‌( H5N1) ವಿಪರೀತ ಪ್ರಮಾಣದಲ್ಲಿ ಕಾಣಿಸಿಕೊಂಡಿದೆ ಎಂದು ವಿಶ್ವಪ್ರಾಣಿ ಆರೋಗ್ಯ ಸಂಸ್ಥೆ ಬುಧವಾರ ವರದಿ ಮಾಡಿದೆ.

ಕೋಳಿ ಸಾಕಣಿಕೆ  ಕೇಂದ್ರದವೊಂದರಲ್ಲಿ ಸಂಸ್ಥೆ ಅಧ್ಯಯನ ನಡೆಸಿ ಈ ವರದಿ ಬಿಡುಗಡೆ ಮಾಡಿದ್ದು, ಬಿಹಾರದ ರಾಜಧಾನಿ ಪಾಟ್ನಾದ ಫಾರ್ಮ್‌ ಒಂದರಲ್ಲಿ 3,859 ಕೋಳಿಗಳ ಪೈಕಿ 787 ಕೋಳಿಗಳು ವೈರಸ್‌ನಿಂದ ಸಾವಿಗೀಡಾಗಿವೆ ಎಂದು ವರದಿ ಹೇಳಿದೆ. ಬಾಕಿ ಉಳಿದ ಕೋಳಿಗಳನ್ನು ನಾಶಪಡಿಸಲಾಗಿದೆ.

ಪ್ಯಾರಿಸ್‌ ಮೂಲದ ಒಐಇ ಭಾರತದಲ್ಲಿನ ಅಧಿಕೃತ ಮೂಲಗಳು ಮತ್ತು ದತ್ತಾಂಶಗಳನ್ನು ಆಧರಿಸಿ ವರದಿ ಬಿಡುಗಡೆ  ಮಾಡಿದೆ. ಜನವರಿ 18ರಂದು ಹಕ್ಕಿಜ್ವರದ ವೈರಸ್‌ ಕಾಣಿಸಿಕೊಂಡಿತ್ತು. ಫೆ. 16ರಂದು ಪಾಟ್ನಾದ ಫಾರ್ಮ್‌ನಲ್ಲಿ ವೈರಸ್‌ ಕಾಣಿಸಿಕೊಂಡು ಕೋಳಿಗಳು ಸಾವಿಗೀಡಾಗಿವೆ.

ದೇಶದಲ್ಲಿ ಕೋವಿಡ್‌ ಕೊಂಚ ಮಟ್ಟಿಗೆ ಇಳಿಕೆಯಾಗಿರುವ ಈ ಸಮಯದಲ್ಲಿ ಹಕ್ಕಿಜ್ವರ ವೈರಸ್‌ ಕಾಣಿಸಿಕೊಂಡಿದ್ದು ಜನರಲ್ಲಿ ಆತಂಕ ಮೂಡಿಸಿದೆ. ಈಗಾಗಲೇ ನಾವು ಕೋವಿಡ್‌ ನಿಂದ ಸಾಕಷ್ಟು ತೊಂದರೆಗಳನ್ನು ಅನುಭವಿಸಿದ್ದೆವೆ. ಹಾಗಾಗಿ ಬಿಹಾರ ಸರ್ಕಾರ ಇದರ ಕಡೆ ಗಮನ ಕೊಡಬೇಕಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.