ಕೇರಳದಲ್ಲಿ ಮತ್ತೆ ಪಕ್ಷಿ ಜ್ವರ ಭೀತಿ!

0
383

ಸನ್ಮಾರ್ಗ ವಾರ್ತೆ

 

ಕೋಝಿಕೋಡ್: ಕೋಝಿಕೋಡ್ ಜಿಲ್ಲೆಯ ಚಾತಮಂಗಳಂ ಪ್ರದೇಶದ ಪೌಲ್ಟ್ರಿ ಫಾರ್ಮ್ ನಲ್ಲಿ ಪಕ್ಷಿ ಜ್ವರ ದೃಢೀಕರಣಗೊಂಡಿದೆ. ಈ ಹಿನ್ನೆಲೆಯಲ್ಲಿ ಕೋಳಿಗಳ ಮಾರಣಹೋಮ ಪ್ರಾರಂಭವಾಗಿದೆ. ಪಕ್ಷಿ ಜ್ವರವನ್ನು ಹತ್ತಿಕ್ಕುವ ಭಾಗವಾಗಿ 11000 ಕೋಳಿಗಳನ್ನು ಸಾಯಿಸುವುದಕ್ಕೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ

ಹಾಗೆಯೇ 40,000 ಕೋಳಿ ಮೊಟ್ಟೆಗಳನ್ನು ಕೂಡ ನಾಶ ಮಾಡಲಾಗುವುದು. ಈವರೆಗೆ 2300 ಕೋಳಿಗಳನ್ನು ಸಂಹಾರ ಮಾಡಲಾಗಿದೆ. ಈ ಕೋಳಿಗಳನ್ನು ಸಾಯಿಸಿದ ಬಳಿಕ ಪೌಲ್ಟ್ರಿ ಫಾರ್ಮ್ ನ ಕಾಂಪೌಂಡಿನಲ್ಲಿ ತಯಾರಿಸಿರುವ ದೊಡ್ಡ ಒಲೆಯಲ್ಲಿ ಇಟ್ಟು ದಹಿಸಲಾಗುವುದು

ಪಕ್ಷಿ ಜ್ವರ ಕಾಣಿಸಿಕೊಂಡ ಪ್ರದೇಶದ ಸುತ್ತಮುತ್ತಲಿನ ಒಂದು ಕಿಲೋಮೀಟರ್ ವರೆಗಿನ ಪ್ರದೇಶದ ಪಕ್ಷಿಗಳನ್ನು ಕೂಡ ಸಾಯಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾತ್ರ ಅಲ್ಲ ಅವುಗಳನ್ನು ಇದೇ ಒಲೆಯಲ್ಲಿಟ್ಟು ದಹಿಸಲಾಗುವುದು

ಈ ಪೌಲ್ಟ್ರಿ ಫಾರ್ಮ್ ನಲ್ಲಿ 1800 ಕೋಳಿಗಳು ಸಾವಿಗೀಡಾದ ಹಿನ್ನೆಲೆಯಲ್ಲಿ ಆರೋಗ್ಯ ತಪಾಸಕರು ಪರೀಕ್ಷಿಸಿದ್ದರು ತೀವ್ರವಾಗಿ ಹರಡುವ ಪಕ್ಷಿ ಜ್ವರದ ವೈರಸ್ ತಳಿ ಇದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.