ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಆ.30: ವಿವಾದಾತ್ಮಕ ಹೇಳಿಕೆಗಳ ಹಿನ್ನೆಲೆಯಲ್ಲಿ ಭೋಪಾಲ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ಗೆ ಬಿಜೆಪಿ ಎಚ್ಚರಿಕೆ ನೀಡಿದೆ. ಸಾರ್ವಜನಿಕ ವೇದಿಕೆಗಳಲ್ಲಿ ಮಾತಾಡಬಾರದೆಂದು ಬಿಜೆಪಿಯ ಕೇಂದ್ರ ನಾಯಕರು ನಿಷೇಧ ಹೇರಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಹೇಳಿಕೆ ನೀಡುವುದರಿಂದ ಅವರನ್ನು ತಡೆಯಲಾಗಿದೆ.
ಪ್ರತಿಪಕ್ಷಗಳು ವಾಮಾಚಾರ ನಡೆಸಿದ್ದರಿಂದ ಪ್ರಮುಖ ಬಿಜೆಪಿ ನಾಯಕರು ಮೃತಪಟ್ಟಿದ್ದಾರೆಂದು ಪ್ರಜ್ಞಾ ಸಿಂಗ್ ನೀಡಿದ ಹೇಳಿಕೆ ವಿವಾದಕ್ಕೆ ಗುರಿಯಾಗಿತ್ತು. ತನಂತರ ಬಿಜೆಪಿ ಪಾರ್ಟಿ ಕ್ರಮ ಜರಗಿಸಿದೆ. ಮಾಜಿ ಕೇಂದ್ರ ಸಚಿವ ಅರುಣ್ ಜೇಟ್ಲಿ ನಿಧನಕ್ಕೆ ಶೋಕ ವ್ಯಕ್ತಪಡಿಸಲು ಬಿಜೆಪಿ ರಾಜ್ಯ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಪ್ರಜ್ಞಾಸಿಂಗ್ ಹೀಗೆ ಹೇಳಿದ್ದರು. ಮುಂಬೈ ಭಯೋತ್ಪಾದನಾ ದಾಳಿಯಲ್ಲಿ ಹತ್ಯೆಯಾಗಿದ್ದ ಹೇಮಂತ್ ಕರ್ಕರೆ ತನ್ನ ಶಾಪದಿಂದ ಸತ್ತರೆಂದು ಪ್ರಜ್ಞಾ ಈ ಹಿಂದೆ ನೀಡಿದ ಹೇಳಿಕೆ ವಿವಾದಕ್ಕೆ ಗುರಿಯಾಗಿತ್ತು.












