ಹತ್ತಾರು ವರ್ಷಗಳಿಂದ ಕಟ್ಟಿದ್ದನ್ನು ಕೆಡವಲು ಮಾತ್ರ ನಿಮ್ಮಿಂದ ಸಾಧ್ಯ- ಬಿಜೆಪಿಗೆ ರಾಹುಲ್ ಗಾಂಧಿ

0
758

ಹೊಸದಿಲ್ಲಿ, ಆ. 3: ಬಿಜೆಪಿ ಸರಕಾರಕ್ಕೆ ದೇಶವನ್ನು ಧ್ವಂಸ ಮಾಡಲು ಮಾತ್ರ ಸಾಧ್ಯವಾಗಿದೆ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ. ಜಾಗತಿಕ ಆರ್ಥಿಕ ಶಕ್ತಿಯ ಪಟ್ಟಿಯಲ್ಲಿ ಭಾರತ ಎರಡು ಸ್ಥಾನ ಹಿಂದೆ ಸರಿದಿರುವ ಹಿನ್ನೆಲೆಯಲ್ಲಿ ರಾಹುಲ್ ಈ ಟೀಕೆ ಮಾಡಿದ್ದಾರೆ. ಬಿಜೆಪಿ ಸರಕಾರಕ್ಕೆ ನಿರ್ಮಾಣ ಸಾಧ್ಯವಿಲ್ಲ. ಹತ್ತಾರು ವರ್ಷಗಳಿಂದ ಕಟ್ಟಿದ್ದನ್ನು ಕೆಡವಲು ಮಾತ್ರ ಸಾಧ್ಯವಾಗಿದೆ ಎಂದು ರಾಹುಲ್ ಟ್ವೀಟ್ ಮಾಡಿದರು.

ಆರ್ಥಿಕ ಬೆಳವಣಿಗೆ ದರ ಇಳಿಕೆಯ ಕುರಿತು ಪ್ರತಿಕ್ರಿಯೆಗಳಿರುವ ಗ್ರಾಫಿಕ್ ವೀಡಿಯೊವನ್ನು ಕೂಡ ಟ್ವೀಟ್‍ನ ಜೊತೆಗೆ ಅವರು ಪೋಸ್ಟ್ ಮಾಡಿದ್ದಾರೆ. ಬ್ರಿಟನ್, ಫ್ರಾನ್ಯೂಸ್ ಗಿಂತಲೂ ಕುಸಿದು ಭಾರತ ಏಳನೆ ಸ್ಥಾನಕ್ಕೆ ತಲುಪಿದೆ.