ರಾಷ್ಟ್ರಧ್ವಜವನ್ನು ತಾಲಿಬಾನ್‌ ಧ್ವಜಕ್ಕೆ ಹೋಲಿಸಿದ ಬಿಜೆಪಿ ನಾಯಕ ಸಿ.ಟಿ ರವಿ!

0
171

ಸನ್ಮಾರ್ಗ ವಾರ್ತೆ

ಮಂಡ್ಯ ತಾಲೂಕಿನ ಕೆರಗೋಡು ಗ್ರಾಮದಲ್ಲಿ ಉಂಟಾಗಿರುವ ಧ್ವಜ ವಿವಾದದ ಕುರಿತು ಮಾತನಾಡುವಾಗ ಬಿಜೆಪಿ ನಾಯಕ ಸಿ.ಟಿ ರವಿ ‘ರಾಷ್ಟ್ರಧ್ವಜವನ್ನು ತಾಲಿಬಾನ್ ಧ್ವಜಕ್ಕೆ ಹೋಲಿಕೆ’ ಮಾಡಿದ್ದಾರೆ.

ಧ್ವಜ ವಿವಾದದ ಬಗ್ಗೆ ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಹಿಂದಿಯಲ್ಲಿ ಮಾತನಾಡಿದ ಸಿ.ಟಿ ರವಿ, “ಹನುಮ ಧ್ವಜವನ್ನು ಕೆಳಗಿಳಿಸಿ ತಾಲಿಬಾನ್‌ ಧ್ವಜವನ್ನು ಹಾರಿಸಿದ್ದಾರೆ” ಎಂದಿದ್ದಾರೆ. ಸಿ.ಟಿ ರವಿಯ ಈ ಹೇಳಿಕೆಯ ಸತ್ಯಾಸತ್ಯತೆ ಪರಿಶೀಲಿಸಿ ನೋಡಿದರೆ, ಅಧಿಕಾರಿಗಳು ಕೆರಗೋಡಿನಲ್ಲಿ ಹನುಮ ಧ್ವಜ ಇಳಿಸಿದ್ದು ನಿಜ, ಅದರ ಬದಲಾಗಿ ರಾಷ್ಟ್ರ ಧ್ವಜವನ್ನು ಹಾರಿಸಿದ್ದಾರೆ. ಸಿ.ಟಿ ರವಿ ಹೇಳಿದಂತೆ ತಾಲಿಬಾನ್ ಧ್ವಜ ಹಾರಿಸಿಲ್ಲ. ಹಾಗಾದರೆ, ಸಿ.ಟಿ ರವಿ ತಾಲಿಬಾನ್ ಧ್ವಜ ಎಂದು ಹೇಳಿದ್ದು ರಾಷ್ಟ್ರ ಧ್ವಜವನ್ನೇ ಎಂಬುವುದರಲ್ಲಿ ಅನುಮಾನವಿಲ್ಲ. ಈ ರೀತಿಯ ಹೇಳಿಕೆ ಕೊಡುವುದು ದೇಶದ್ರೋಹಕ್ಕೆ ಸಮವಲ್ಲವೇ? ಸಿ.ಟಿ ರವಿ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕಲ್ಲವೇ? ಎಂಬ ಪ್ರಶ್ನೆ ಮೂಡಿದೆ.

ಸಿ.ಟಿ ರವಿಯ ಹೇಳಿಕೆ ವಿರುದ್ದ ಕಿಡಿಕಾರಿದ ಕಾಂಗ್ರೇಸ್, “ಪವಿತ್ರವಾದ ರಾಷ್ಟ್ರ ಧ್ವಜವನ್ನು ತಾಲಿಬಾನ್ ಧ್ವಜಕ್ಕೆ ಹೋಲಿಸಿದ ದೇಶದ್ರೋಹಿ ಬಿಜೆಪಿಯ ಸಿ.ಟಿ ರವಿ ಎನ್ನುವ ಕೋಮು ಕ್ರಿಮಿ ದೇಶದ ಘನತೆಯನ್ನು ಮಣ್ಣುಪಾಲು ಮಾಡುವ ಹೇಳಿಕೆ ನೀಡಿದ್ದಾರೆ. ತ್ರಿವರ್ಣ ಧ್ವಜ ಈಗ ಬಿಜೆಪಿ ಪ್ರಕಾರ ತಾಲಿಬಾನ್ ಧ್ವಜವಾಗಿದೆಯೇ?. ತ್ರಿವರ್ಣ ಧ್ವಜವನ್ನು ವಿರೋಧಿಸುವ ಆರ್‌.ಎಸ್‌.ಎಸ್‌ನ ಸಿದ್ಧಾಂತವನ್ನು ಬಿಜೆಪಿ ಚಾಚೂ ತಪ್ಪದೆ ಪಾಲಿಸುತ್ತಿದೆ” ಎಂದಿದೆ.

ಬಿಜೆಪಿಗೆ INDIA ಮೇಲೂ ದ್ವೇಷ, ಬಿಜೆಪಿಗೆ ಭಾರತದ ಸಂವಿಧಾನದ ಮೇಲೂ ದ್ವೇಷ, ಬಿಜೆಪಿಗೆ ಭಾರತದ ತ್ರಿವರ್ಣ ಧ್ವಜದ ಮೇಲೂ ದ್ವೇಷ. ಇಂತಹ ಬಿಜೆಪಿ ದೇಶದ್ರೋಹಿಯಲ್ಲದೆ ಇನ್ನೇನು? ಎಂದು ಪ್ರಶ್ನಿಸಿದೆ. ಸಂವಿಧಾನದ ವಿಧಿ 51ಎ(ಎ) ಪ್ರಕಾರ ಇದು ಮಹಾ ಅಪರಾಧ ಎಂದು ಹೇಳಿದೆ.