ಕೊರೋನದ ಮರೆಯಲ್ಲಿ ಬಿಜೆಪಿ ಗ್ರಾಮಪಂಚಾಯತಿಗಳನ್ನು ಅಪವಿತ್ರಗೊಳಿಸುತ್ತಿದೆ- ವೆಲ್ಫೇರ್ ಪಾರ್ಟಿ ಆರೋಪ

0
732

ಸನ್ಮಾರ್ಗ ವಾರ್ತೆ

ಮಂಗಳೂರು:‌ಬಿಜೆಪಿ ಸರಕಾರವು ಕೊರೋನವನ್ನು ರಾಜಕೀಯ ಲಾಭಕ್ಕಾಗಿ ಉಪಯೋಗಿಸುತ್ತಿದೆ. ಅವಧಿ ಮುಗಿದ ಗ್ರಾಮ ಪಂಚಾಯತಿಗಳ ಚುನಾವಣೆಯನ್ನು ಸಾಂಕ್ರಾಮಿಕ ರೋಗದ ಕಾರಣ ನೀಡಿ ತೆರೆಮರೆಯಲ್ಲಿ ತನ್ನ ಪಕ್ಷದ ಸದಸ್ಯರನ್ನು ಗ್ರಾಮ ಪಂಚಾಯತ್ ಸದಸ್ಯರನ್ನಾಗಿಸುವ ತಂತ್ರ ರೂಪಿಸುವ ಮೂಲಕ ಗ್ರಾಮ ಪಂಚಾಯತನ್ನು ಅಪವಿತ್ರಗೊಳಿಸುತ್ತಿದ್ದಾರೆ, ಅಲ್ಲದೇ ಕೊವಿಡ್ ಪರಿಹಾರವನ್ನು ಸಂಪೂರ್ಣವಾಗಿ ಗುಳುಂ ಮಾಡುವ ತಯಾರಿ ನಡೆಸುತ್ತಿರುವಂತೆ ಕಾಣುತ್ತಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಮಂಗಳೂರು ವಿಧಾನಸಭಾ ಸಮಿತಿ ಅಧ್ಯಕ್ಷರಾದ ಹನೀಫ್ ತಲಪ್ಪಾಡಿ ಆರೋಪಿಸಿದರು.

ಅವರು, ಒಂದೋ ಗ್ರಾಮಪಂಚಾತ್ ಚುನಾವಣೆ ನಡೆಸಬೇಕು ಇಲ್ಲ ಈ ಮೊದಲಿನ ಸದಸ್ಯರನ್ನೇ ಚುನಾವಣೆ ನಡೆಯುವವರೆಗೆ ಮುಂದುವರಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ಸೋಮೇಶ್ವರ ಪುರಸಭೆ ಮುಖ್ಯಾಧಿಕಾರಿಯವರ ಮೂಲಕ ಮನವಿ ಸಲ್ಲಿಸಿದರು.

ಚುನಾವಣೆ ನಡೆಸಲು ಈ ಸಂಧರ್ಭ ಸೂಕ್ತವಲ್ಲದಿದ್ದರೆ 1987ರ ಕಾಯಿದೆ ಪ್ರಕಾರ ಈಗಿರುವ ಸದಸ್ಯರನ್ನೇ ಆರು ತಿಂಗಳ ಮಟ್ಟಿಗೆ ಮುಂದುವರಿಸಬೇಕು.ಅದು ತನ್ನ ಪಕ್ಷದ ಕಾರ್ಯಕರ್ತರನ್ನು ಹಿಂಬಾಗಿಲಿನಿಂದ ಗ್ರಾಮಪಂಚಾಯತ್ ಸದಸ್ಯರನ್ನಾಗಿಸುವ ನೀಚ ಹೊಲಸು ರಾಜಕೀಯ ಮಾಡಬಾರದು ಎಂದು ಅವರು ಹೇಳಿದರು.

ಮನವಿಯಲ್ಲಿ ಮುಖ್ಯವಾಗಿ, ಜಿಲ್ಲಾಧಿಕಾರಿಗಳು ಗ್ರಾಮಪಂಚಾಯತಿಗೆ ನಾಮನಿರ್ದೇಶಕ ಸದಸ್ಯರನ್ನು ನೇಮಿಸಲು ಅಂಗೀಕಾರ ನೀಡಬಾರದು ಎಂದು ವೆಲ್ಫೇರ್ ಪಾರ್ಟಿ ಪ್ರಸ್ತಾಪಿಸಿದ್ದು, ಈ ಸಂಧರ್ಭದಲ್ಲಿ ಪಕ್ಷದ ಮಂಗಳೂರು ಅಧ್ಯಕ್ಷರಾದ ಹನೀಫ್ ತಲಪ್ಪಾಡಿ, ಎಫ್‌ಐಟಿಯುವಿನ ಜಿಲ್ಲಾ ಅಧ್ಯಕ್ಷ ಅಬ್ದುಲ್ ಜಲೀಲ್, ಫ್ರಟರ್ನಿಟಿಯ ಫಝಲ್ ಪಿಲಾರ್ ಉಪಸ್ಥಿತರಿದ್ದರು.

ಓದುಗರೇ, ಸನ್ಮಾರ್ಗ‌ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.