ಬಿಜೆಪಿಯ ರಾಹುಲ್ ಗಾಂಧಿ ರಾವಣ- ಕೋರ್ಟ ನ್ನು ಸಮೀಪಿಸಿದ ಕಾಂಗ್ರೆಸ್

0
371

ಸನ್ಮಾರ್ಗ ವಾರ್ತೆ

ನವದೆಹಲಿ: ರಾಹುಲ್ ಗಾಂಧಿಯನ್ನು ರಾವಣನಂತೆ ಬಿಂಬಿಸಿ ಪೋಸ್ಟರ್ ಹರಿದಾಡಿರುವ ಘಟನೆಯಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ವಿರುದ್ಧ ಅರ್ಜಿ ಸಲ್ಲಿಸಲಾಗಿದೆ. ರಾಜಸ್ಥಾನ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜಸ್ವಂತ್ ಗುರ್ಜರ್ ಜೈಪುರ ಮೆಟ್ರೋಪಾಲಿಟನ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಮಾನನಷ್ಟ, ಮನಪೂರ್ವಕ ಚಾರಿತ್ರ್ಯ ಹನನ ಇತ್ಯಾದಿ ಸೆಕ್ಷನ್ ಪ್ರಕಾರ  ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು  ಅರ್ಜಿದಾರರು ಆಗ್ರಹಿಸಿದ್ದು ಅಕ್ಟೋಬರ್ 9ಕ್ಕೆ ಅರ್ಜಿ ವಿಚಾರಣೆಗೆತ್ತಿಕೊಳ್ಳುವುದಾಗಿ ಕೋರ್ಟು ತಿಳಿಸಿತು.

ರಾಹುಲ್ ಗಾಂಧಿಯವರನ್ನು ರಾವಣನಿಗೆ ಹೋಲಿಸಿದ ಬಿಜೆಪಿಯ ಪೋಸ್ಟರ್  ದುಷ್ಟನೆಂದು, ಧರ್ಮ ವಿರೋಧಿ, ರಾಮನ ವಿರೋಧಿ, ಭಾರತವನ್ನು ಇಲ್ಲದಾಗಿಸುವುದು ಉದ್ದೇಶವಾಗಿದೆ ಎಂದು ಬಿಜೆಪಿ ಬರೆದಿತ್ತು. ಇದರ ನಂತರ ಎರಡು ಪಾರ್ಟಿಗಳ ನಡುವೆ ವಿವಾದ ಗರಿಕೆದರಿಕೊಂಡಿತ್ತು.

ಬಿಜೆಪಿ ಪೋಸ್ಟರ್ ಬಂದ ಮೇಲೆ ಮೋದಿ ಅದಾನಿಯ ಕೈಗೊಂಬೆ ಎಂಬ ಪೋಸ್ಟರ್ ಅನ್ನು ಕಾಂಗ್ರೆಸ್ ಬಿಡುಗಡೆಗೊಳಿಸಿತ್ತು. ಘಟನೆ ಚರ್ಚೆಯಲ್ಲಿ ಮುನ್ನೆಲೆಗೆ ಬಂದ ಮೇಲೆ ಶನಿವಾರ ಕಾಂಗ್ರೆಸ್ ಅನ್ನು ನಿಷೇಧಿಸಬೇಕೆಂದು ಮಾಜಿ ಕೇಂದ್ರ ಸಚಿವ ಬಿಜೆಪಿ ನಾಯಕ ಮುಕ್ತಾರ್ ಅಬ್ಬಾಸ್ ನಕ್ವಿ ರಂಗ ಪ್ರವೇಶಿಸಿದ್ದರು. ಜೂನ್‍ನಲ್ಲಿ ಕಾಂಗ್ರೆಸ್‍ನ ಪೋಸ್ಟರ್ ಅನ್ನು ಎತ್ತಿ ಹಿಡಿದ ನಕ್ವಿ, ಮೋದಿಯನ್ನು ತುಗ್ಲಕ್‍ಗೆ ಹೋಲಿಸಿದನ್ನು ನಕ್ವಿ ಕಾಂಗ್ರೆಸ್ ವಿರುದ್ಧ ಬಳಸಿಕೊಂಡಿದ್ದಾರೆ. ಪಾಠ ಪುಸ್ತಕಗಳಲ್ಲಿ ಬದಲಾವಣೆ ತರಲು ಮೋದಿ ಬಯಸುವುದಿದ್ದರೆ ತುಗ್ಲಕ್ ಯುಗದ ಬದಲಿಗೆ ನಿಮ್ಮದು ತನ್ನಿ ಎಂದು ಪೋಸ್ಟರಿನಲ್ಲಿ ಅಂದು ಕಾಂಗ್ರೆಸ್  ಬರೆದಿತ್ತು.