ಸನ್ಮಾರ್ಗ ವಾರ್ತೆ
ಬ್ರಸಲ್ಸ್, ಜ. 30: ಯುರೋಪಿಯನ್ ಯೂನಿಯನ್ನೊಂದಿಗಿನ ಸಂಬಂಧವನ್ನು ಅಧಿಕೃತವಾಗಿ ಕೊನೆಗೊಳಿಸುವ ಬ್ರೆಕ್ಸಿಟ್ ಒಪ್ಪಂದಕ್ಕೆಯುರೋಪಿಯನ್ ಯೂನಿಯನ್ ಪಾರ್ಲಿಮೆಂಟು ಅಂಗೀಕಾರ ನೀಡಿತು. 683 ಸದಸ್ಯರ ಪಾರ್ಲಿಮೆಂಟಿನಲ್ಲಿ 621 ಮಂದಿ ಬೆಂಬಲಿಸಿದರು. 49 ಮಂದಿ ವಿರೋಧಿಸಿದರು. 13 ಮಂದಿ ಮತದಾನದಿಂದ ದೂರ ಉಳಿದರು. ಒಪ್ಪಂದದ ನಿಯಮಗಳಿಗೆ ಯುರೋಪಿಯನ್ ಪಾರ್ಲಿಮೆಂಟು ಅಂಗೀಕಾರ ನೀಡುವುದರೊಂದಿಗೆ ಬ್ರೆಕ್ಸಿಟ್ ಪ್ರಕ್ರಿಯೆ ಪೂರ್ಣಗೊಂಡಿದೆ. ಪರಂಪರಾಗತ ಸ್ಕ್ವಾಟಿಷ್ ಹಾಡು ಓಲ್ಡ್ ಲಾಮಗ್ ಸೈನೆ ಆಲಾಪಿಸಿ ಬ್ರಿಟನ್ ಯುರೋಪಿಯನ್ ಯೂನಿಯನ್ಗೆ ವಿದಾಯ ಹೇಳಿದೆ. ಯುರೋಪಿಯನ್ ಪಾರ್ಲಿಮೆಂಟಿನ 73 ಮಂದಿ ಬ್ರಿಟನ್ ಪ್ರತಿನಿಧಿಗಳ ಕೊನೆಯ ಸಮ್ಮೇಳನ ಬುಧವಾರ ನಡೆಯಿತು ಜನವರಿ 31ಕ್ಕೆ ಬ್ರೆಕ್ಸಿಟ್ ಜಾರಿಯಾದರೂ ಹನ್ನೊಂದು ತಿಂಗಳು ಬದಲಾವಣೆಯ ಕಾಲವಾಗಿದೆ. ಪರಸ್ಪರ ವ್ಯಾಪಾರ ಒಪ್ಪಂದಗಳು ಮತ್ತು ಇತರ ಚರ್ಚೆ ಮಾಡಿ ಕೊನೆಯ ತೀರ್ಮಾನವಾಗಲಿದೆ. ಯುರೋಪಿಯನ್ ಯೂನಿಯನ್ನೊಂದಿಗಿನ ಸಂಬಂಧವನ್ನು ಕೊನೆಗೊಳಿಸಿ ಬ್ರೆಕ್ಸಿಟ್ ಜಾರಿಗೊಳಿಸುವ ಬ್ರಿಟನ್ ಪಾರ್ಲಿಮೆಂಟಿನ ತೀರ್ಮಾನಕ್ಕೆ ಎಲಿಝಬೆತ್ ರಾಣಿ ಅಂಗೀಕಾರ ಕೊಟ್ಟಿದ್ದರು. ರಾಣಿಯ ಸಹಿಯೊಂದಿಗೆ ಮಸೂದೆ ಪಾಸು ಆಗಿದೆ. ಯುರೋಪಿಯನ್ ಯೂನಿಯನ್ನಿಂದ ಬೇರ್ಪಡುವ ಜನಮತ ಸಮಗ್ರಹ 2016ರಲ್ಲಿ ಬ್ರಿಟನ್ನಲ್ಲಿ ನಡೆದಿತ್ತು. ಶೇ. 51.9 ಮಂದಿ ಬ್ರೆಕ್ಸಿಟ್ ಬೆಂಬಲಿಸಿದ್ದರು.












