ಗಾಝಾ ಕದನ ವಿರಾಮಕ್ಕೆ ಕರೆ ನೀಡಿದ ಬ್ರಿಕ್ಸ್ ; ಇಸ್ರೇಲ್ ದಾಳಿಗೆ 36 ರಾಷ್ಟ್ರದ ಖಂಡನೆ

0
144

ಸನ್ಮಾರ್ಗ ವಾರ್ತೆ

ಕಝಾನ್: ಗಾಜಾ ಪಟ್ಟಿಯಲ್ಲಿ ತಕ್ಷಣ ಮತ್ತು ಶಾಶ್ವತ ಕದನ ವಿರಾಮವನ್ನು ಘೋಷಿಸಿ, ‘ಎರಡೂ ಕಡೆಯಿಂದ’ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವಂತೆ ಬ್ರಿಕ್ಸ್ ರಾಷ್ಟ್ರಗಳ ನಾಯಕರು ಅಕ್ಟೋಬರ್ 23ರಂದು
ಕರೆ ನೀಡಿದ್ದಾರೆ.

ಜೊತೆಗೆ ಆ ಪ್ರದೇಶದಲ್ಲಿ ನಾಗರಿಕರ ‘ಸಾಮೂಹಿಕ ಹತ್ಯೆಗಳಿಗೆ’ ಕಾರಣವಾದ ಇಸ್ರೇಲ್‌ನ ಮಿಲಿಟರಿ ಆಕ್ರಮಣವನ್ನು ತೀವ್ರವಾಗಿ ಖಂಡಿಸಿದ್ದಾರೆ.

ರಷ್ಯಾದ ಕಝಾನ್ ನಗರದಲ್ಲಿ ನಡೆದ 16ನೇ ಶೃಂಗಸಭೆಯಲ್ಲಿ ಭಾಗವಹಿಸಿದ ನಾಯಕರು, ಪಶ್ಚಿಮ ಏಷ್ಯಾದಲ್ಲಿ ಉಲ್ಬಣಗೊಳ್ಳುತ್ತಿರುವ ಸಂಘರ್ಷವು ಮುಖ್ಯವಾಗಿ ಸಭೆಯಲ್ಲಿ ಪರಿಗಣಿಸಿದ್ದಾರೆ.

ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ಈ ಬ್ರಿಕ್ಸ್ ಸದಸ್ಯರಾಗಿದ್ದು, ಈಜಿಪ್ಟ್, ಇಥಿಯೋಪಿಯಾ, ಇರಾನ್, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಅನ್ನು ಸೇರಿಸಿ, ಇದರ ವ್ಯಾಪ್ತಿಯು ಇನ್ನೂ ವಿಸ್ತಾರಗೊಳ್ಳುತ್ತಿದೆ. ಇರಾನ್ ಮೇಲೆ ಇತ್ತೀಚೆಗೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯನ್ನು ಕೂಡ ಬ್ರಿಕ್ಸ್ ಸಭೆ ಖಂಡಿಸಿ ನಿರ್ಣಯ ಹೊರಡಿಸಿದೆ. ಈ ಸಭೆಯಲ್ಲಿ ಸುಮಾರು 36 ರಾಷ್ಟ್ರದ ನಾಯಕರುಗಳು ಭಾಗವಹಿಸಿದ್ದರು.