ಅರ್ಥವ್ಯವಸ್ಥೆಯ ಅಡಿಪಾಯ ಗಟ್ಟಿಯಿದೆ- ನಿರ್ಮಲಾ ಸೀತಾರಾಮನ್

0
1274

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಜ.1: ಅರ್ಥಕ್ಷೇತ್ರದ ಬುನಾದಿ ಶಕ್ತಿಯುತವಾಗಿದೆ. ಆದಾಯ ಗಳಿಕೆ ಸಾಮರ್ಥ್ಯವನ್ನು ಹೆಚ್ಚಿಸುವ ಬಜೆಟ್ ಇದು ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

ಕೇಂದ್ರ ಸರಕಾರದ ಆದಾಯ ಹೆಚ್ಚಿಸುವ ಸೂಚನೆಗಳು ಬಜೆಟಟ್ ನಲ್ಲಿದೆ. ಎರಡನೆ ಎನ್‍ಡಿಎ ಸರಕಾರದ ಮೊದಲ ಬಜೆಟನ್ನು ಪಾರ್ಲಿಮೆಂಟ್‍ನಲ್ಲಿ ಅವರು ಮಂಡಿಸುತ್ತಿದ್ದರು. ಜಿಎಸ್‍ಟಿ ಕೇಂದ್ರ ಸರಕಾರದ ಬಹುದೊಡ್ಡ ಆರ್ಥಿಕ ಸುಧಾರಣೆಯಾಗಿದೆ. ಇದರ ಮೂಲಕ ಒಂದು ಲಕ್ಷ ಕೋಟಿ ರೂಪಾಯಿ ಗಳಿಕೆ ಮಾಡಲು ಸಾಧ್ಯವಾಗಿದೆ. ಜಿಎಸ್ಟಿಯಿಂದ ಹದಿನಾರು ಲಕ್ಷ ಹೊಸ ತೆರಿಗೆ ಪಾವತಿದಾರರು ಸಿಕ್ಕಿದರು. ಒಂದು ಕುಟುಂಬದ ತಿಂಗಳ ವೆಚ್ಚದಲ್ಲಿ ಶೇ. ನಾಲ್ಕರವರೆಗೆ ಸರಕಾರಕ್ಕೆ ಲಭಿಸಲು ಜಿಎಸ್‍ಟಿ ಕಾರಣವಾಯಿತು. ಬ್ಯಾಂಕುಗಳ ಪಾವತಿಯಾಗದ ಸಾಲ ಕಡಿಮೆಯಾಗಿದೆ. ಇದರ ಮೂಲಕ ಮರುಪಾವತಿಯಾಗದ ಸಾಲದಲ್ಲಿ ಸಿಕ್ಕಿಬಿದ್ದಿದ್ದ ಬ್ಯಾಂಕುಗಳ ಸ್ಥಿತಿ ಭದ್ರವಾಗಿದೆ ಎಂದು ಸೀತಾರಾಮನ್ ಹೇಳಿದರು.

ಬಡವರಿಗಾಗಿರುವ ಯೋಜನೆಗಳನ್ನು ದಕ್ಷಗೊಳಿಸಲಾಗಿದೆ. ಬಡವರಿಗೆ ನೇರವಾಗಿ ಹಣ ಕಳುಹಿಸುವುದು ಪ್ರಯೋಜನ ತಂದು ಕೊಡುತ್ತಿದೆ. ಎಲ್ಲರ ಜೊತೆ ಎಲ್ಲರ ಅಭಿವೃದ್ಧಿ ಎಂಬುದು ಸರಕಾರದ ಪ್ರಮುಖ ಯೋಜೆನಯಾಗಿದ್ದು ಅದಕ್ಕೆ ಸ್ವಾಗತ ಲಭಿಸಿದೆ. ಕಳೆದ ಐದು ವರ್ಷದಲ್ಲಿ ವಿದೇಶ ಹೂಡಿಕೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ. ಜಗತ್ತಿನ ಐದನೆ ದೊಡ್ಡ ಆರ್ಥಿಕ ಶಕ್ತಿಯಾಗಿ ಭಾರತ ಬದಲಾಗಿದೆ. 27.1 ಕೋಟಿ ಜನರನ್ನು ಬಡತನದಿಂದ ವಿಮೋಚನೆಗೊಳಿಸಲಾಗಿದೆ ಎಂದರು. .

ಕೃಷಿ ಕ್ಷೇತ್ರದಲ್ಲಿ 16 ಕ್ರಿಯಾ ಯೋಜನೆಗಳನ್ನು ಕೇಂದ್ರ ಸರಕಾರ ಘೋಷಿಸಿದೆ. ರೈತರಿಗಾಗಿ ವಿಶೇಷ ಸೌರ ಶಕ್ತಿ ಯೋಜನೆ ಜಾರಿಗೊಳಿಸಲಾಗುವುದು. ರೈತರ ಉತ್ಪನ್ನಗಳ ಸರಕು ತೆರಿಗೆ ತೆರವಿಗಾಗಿ ಕಿಸಾನ್ ರೈಲು ಯೋಜನೆ ಜಾರಿಗೊಳಿಸಲಾಗುವುದು. ಇದರ ಪ್ರಯುಕ್ತ ವಿಶೇಷ ಬೋಗಿಗಳನ್ನು ಜೋಡಿಸಲಾಗುವುದು. ರೈತರ ವರಮಾನ ಎರಡು ವರ್ಷದಲ್ಲಿ ದ್ವಿಗುಣವಾಗಲಿದೆ. ಸಾರ್ವಜನಿಕ ಸಾಲ ಕಡಿಮೆಯಾಗಿದೆ. ಕೇಂದ್ರ ಸರಕಾರದ ಸಾಲ 2019ರಲ್ಲಿ ಶೆ. 52.2ರಿಂದ ಶೇ. 48.7ಕ್ಕೆ ಇಳಿಕೆಯಾಗಿದೆ. ರೈತರ ಆದಾಯ ಶೇ. 18. 2ರಿಂದ 16.5ಕ್ಕೆ ಏರಿಕೆಯಾಗಿದೆ. ರೈತರ ಯಾಂತ್ರೀಕರಣ, ಜಾನುವಾರಗಳ ಸಾಕಣೆ, ಮೀನುಗಾರಿಕೆಗೆ ಆದ್ಯತೆ ಕೊಡಲಾಗುವುದು.
ಮಿಷನ್ ಇಂದ್ರಧನುಷ್ ಯೋಜನೆಯಲ್ಲಿ ಮತ್ತೂ 12 ರೋಗಗಳನ್ನು ಸೇರಿಸಲಾಯಿತು. ಆರೋಗ್ಯ ಕ್ಷೇತ್ರಕ್ಕೆ 69,000 ಕೋಟಿ ರೂಪಾಯಿ ಮೀಸಲಿಡಲಾಗುವುದು. 2025ರಲ್ಲಿ ಕ್ಷಯ ರೋಗ ನಿರ್ಮೂಲನೆಯಾಗಬಹುದು. 120 ಜಿಲ್ಲೆಯಲ್ಲಿ ಆಯುಷ್ ಮಾನ್ ಭಾರತ ಯೋಜನೆ, 120 ಜಿಲ್ಲೆಗಳಲ್ಲಿ ಆಧುನಿಕ ವೈದ್ಯಕೀಯ ಉಪಕರಣಗಳನ್ನು ಲಭ್ಯಗೊಳಿಸಲಾಗುವುದು ಎಂದು ಬಜೆಟ್ ಭಾಷಣದಲ್ಲಿ ಸಚಿವೆ ಹೇಳಿದರು.