ಸಿ ಎ ಎ: ಸೋನಿಯ, ಪ್ರಿಯಾಂಕಾ, ಉವೈಸಿ ವಿರುದ್ಧ ಪ್ರಕರಣ ದಾಖಲು- ಗಂಭೀರ ಆರೋಪ

0
1196

ಸನ್ಮಾರ್ಗ ವಾರ್ತೆ-

ಹೊಸದಿಲ್ಲಿ, ಡಿ. 25: ಪೌರತ್ವ ತಿದ್ದುಪಡಿ ಕಾನೂನಿನ ಕುರಿತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಎಐಎಂಐಎಂ ಅಧ್ಯಕ್ಷ ಅಸದುದ್ದೀನ್ ಉವೈಸಿ ವಿರುದ್ಧ ದೂರು ದಾಖಲಿಸಲಾಗಿದ್ದು, ಇವರೆಲ್ಲ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂಬ ಆರೋಪವನ್ನು ಹೊರಿಸಲಾಗಿದೆ. ಸಿಜೆಎಂ ಕೋರ್ಟು ಇವರ ವಿರುದ್ಧ ದೂರನ್ನು ಸ್ವೀಕರಿಸಿದ್ದು ಜನವರಿ 24ಕ್ಕೆ ವಿಚಾರಣೆಗೆ ದಿನ ನಿಗದಿಪಡಿಸಲಾಗಿದೆ.

ರಾಷ್ಟ್ರೀಯ ಹಿಂದೂವಾಹಿನಿಯ ಅಖಂಡ ಭಾರತ ರಾಷ್ಟ್ರೀಯ ಕಾರ್ಯದರ್ಶಿ ಮತ್ತು ವಕೀಲ ಪ್ರವೀಣ್ ಗುಪ್ತಾ ಎಂಬವರು ಈ ಮೂವರ ವಿರುದ್ಧ ಕ್ರಮ ಜರಗಿಸಬೇಕೆಂದು ಅಲಿಗಢ ಹೆಚ್ಚುವರಿ ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್ ಕೋರ್ಟಿನಲ್ಲಿ ಸೋಮವಾರ ದೂರು ಸಲ್ಲಿಸಿದ್ದರು. ಮೂವರು ನಾಯಕರು ದೇಶದಲ್ಲಿ ಶಾಂತಿ ಕದಡುವ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

ತನ್ನ ಅರ್ಜಿಯನ್ನು ನ್ಯಾಯಾಲಯ ಸ್ವೀಕರಿಸಲಿಲ್ಲ. ಆದರೆ ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್ ಕರುಣಾ ಸಿಂಗ್‍ ಅವರು ಅರ್ಜಿಯನ್ನು ಸ್ವೀಕರಿಸಿ ಜನವರಿ 24ರಂದು ವಿಚಾರಣೆಯನ್ನುಗೊತ್ತುಪಡಿಸಿದರೆಂದು ಅರ್ಜಿದಾರರಾದ ಗುಪ್ತಾ ತಿಳಿಸಿದ್ದಾರೆ.