ದಿಲ್ಲಿ, ಗುಜರಾತ್‍ನಲ್ಲಿ ನಡೆದಂಥ ವಂಶ ಹತ್ಯೆ ಉತ್ತರ ಪ್ರದೇಶದಲ್ಲಿ ನಡೆದಿದೆ- ಯೋಗೇಂದ್ರ ಯಾದವ್, ಹರ್ಷ್ ಮಂದರ್, ಕವಿತಾ ಕೃಷ್ಣನ್ ಒಳಗೊಂಡ ಸತ್ಯ ಶೋಧನಾ ಸಮಿತಿಯ ವರದಿಯಲ್ಲಿ ಬಹಿರಂಗ

0
1511

ಸನ್ಮಾರ್ಗ ವಾರ್ತೆ-

ಹೊಸದಿಲ್ಲಿ, ಡಿ. 27: ಪೌರತ್ವ ತಿದ್ದು ಪಡಿ ಕಾನೂನಿನ ವಿರುದ್ಧ ಉತ್ತರ ಪ್ರದೇಶದಲ್ಲಿ ನಡೆದ ಹೋರಾಟವನ್ನು ದಮನಿಸುವುದರಲ್ಲಿ ಯೋಗಿ ಆದಿತ್ಯನಾಥ್ ಸರಕಾರವು ನಡೆಸಿದ ಭಯಾನಕತೆಯು ವಸ್ತನಿಷ್ಠ ಸತ್ಯಶೋಧನಾ ತಂಡದ ವರದಿಯಲ್ಲಿ ಬಹಿರಂಗವಾಗಿದೆ. ಪ್ರಮುಖ ಸಾಮಾಜಿಕ ಕಾರ್ಯಕರ್ತರ ಸಂಘಟನೆಗಳು ವರದಿ ತಯಾರಿಸಿದ್ದು ಕೂಡಲೇ ಸುಪ್ರೀಂಕೋರ್ಟು ಮಧ್ಯ ಪ್ರವೇಶಿಸಬೇಕೆಂದು ಚಲನಚಿತ್ರ ಕಾರ್ಯಕರ್ತರೂ ಆಗ್ರಹಿಸಿದ್ದಾರೆ. 1984ರಲ್ಲಿ ದಿಲ್ಲಿಯಲ್ಲಿ ಮತ್ತು 2002ರಲ್ಲಿ ಗುಜರಾತಿನಲ್ಲಿ ನಡೆದ ವಂಶಹತ್ಯೆಯೇ ಉತ್ತರಪ್ರದೇಶದಲ್ಲಿ ನಡೆದಿದೆ ಎಂದು ಒಂದು ವಾರದಿಂದ ರಾಜ್ಯದಲ್ಲಿ ನಡೆಯುತ್ತಿರುವ ಭಯೋತ್ಪಾದಕ ಆಳ್ವಿಕೆಯ ವಿವರವಾದ ವರದಿಯನ್ನು ಹೊಸದಿಲ್ಲಿ ಪ್ರೆಸ್ ಕ್ಲಬ್ ನಲ್ಲಿ ಬಿಡುಗಡೆಗೊಳಿಸಿ ಸ್ವರಾಜ್ ಅಭಿಯಾನ್ ನೇತಾರ ಯೋಗೇಂದ್ರ ಯಾದವ್ ಹೇಳಿದರು. ಪೌರತ್ವ ತಿದ್ದುಪಡಿ ಕಾನೂನಿನ ಮೂಲಕ ಮೋದಿ ಸರಕಾರ ದೇಶದಲ್ಲಿ ಜಾರಿಗೊಳಿಸಲು ಬಯಸಿದ್ದ ಧರ್ಮ ಆಧಾರಿತ ವಿಭಜನೆಯು ಈಗಾಗಲೇ ಉತ್ತರ ಪ್ರದೇಶದಲ್ಲಿ ಆಗಿಬಿಟ್ಟಿದೆ ಎಂದು ಅವರು ಹೇಳಿದರು. ಬಿಜ್‍ನೋರಿನಲ್ಲಿ ಗಾಯಗೊಂಡ ಓಂರಾಜ್ ಸೈನಿಯನ್ನು ಭೇಟಿ ಮಾಡಿದ ಉತ್ತರ ಪ್ರದೇಶದ ಸಚಿವ ಕಪಿಲ್ ದೇವ್ ಅಗರ್ವಾಲ್ ಅವರು ಕೊಲ್ಲಲ್ಪಟ್ಟ ಮುಸ್ಲಿಮರ ಮನೆಗೆ ತಾನು ಹೋಗುವುದಿಲ್ಲ. ಅವರು ಗಲಭೆಕೋರರೆಂದು ಹೇಳಿ ವಿಭಜನೆ ಶುರು ಮಾಡಿದ್ದಾರೆ ಎಂದು ಅವರು ಹೇಳಿದರು.

ಬ್ರಿಟಿಷ್ ಕಾಲದ ದಾಖಲೆಯನ್ನು ಮೀರಿದ ಗುಂಡು ಹಾರಾಟ, ಬಂಧನ, ಕೇಸುಗಳು:

ಬ್ರಿಟಿಷ್ ಕಾಲದ ದಾಖಲೆಗಳನ್ನು ಮೀರಿದ ಗುಂಡು ಹಾರಾಟ, ಬಂಧನ, ಪ್ರಕರಣಗಳನ್ನು ಒಂದು ವಾರದಲ್ಲಿ ಉತ್ತರ ಪ್ರದೇಶ ಸರಕಾರ ಮಾಡಿದೆ. ಉತ್ತರ ಪ್ರದೇಶದಲ್ಲಿ ಪೌರತ್ವ ತಿದ್ದುಪಡಿ ಕಾನೂನು, NRC ವಿರುದ್ಧ ಪ್ರತಿಭಟನೆಗಳಿಗೆ ನಿಷೇಧ ಹೇರಲಾಗಿದೆ. ಮೀರತ್‍ನಲ್ಲಿ ಶುಕ್ರವಾರ ಜುಮುಅ ನಮಾಝ್ ಮುಗಿಸಿ ಹೊರಬಂದವರ ಮೇಲೆ ಗುಂಡು ಹಾರಿಸಲಾಗಿದೆ. ಕೊಲ್ಲಲ್ಪಟ್ಟರವರಲ್ಲಿ ಒಬ್ಬರು ರಿಕ್ಷಾ ಚಲಾಯಿಸುವವರು. ಒನ್ನೊಬ್ಬರು ರೊಟ್ಟಿ ವ್ಯಾಪಾರಿ. ಡಿಸೆಂಬರ್ 25ರವರೆಗೆ 925 ಮಂದಿಯನ್ನು ಬಂಧಿಸಲಾಗಿದೆ. ಇದಲ್ಲದೆ 5500 ಮಂದಿ ಕಸ್ಟಡಿಯಲ್ಲಿದ್ದಾರೆ. 30,000 ಮಂದಿಯ ವಿರುದ್ಧ ಕೇಸು ದಾಖಲಿಸಲಾಗಿದೆ. ಮುಸ್ಲಿಂ ಬಹುಸಂಖ್ಯಾತ ಪ್ರದೇಶದಲ್ಲಿ ತಾರತರಮ್ಯದ ಬಂಧನಗಳು, ಕಸ್ಟಡಿಗಳು ಮುಂದುವರಿಯುತ್ತಿವೆ.

ಗುಂಡಿನಿಂದಾಗಿ ಗಾಯಗೊಂಡವರಿಗೆ ಖಾಸಗಿ ಆಸ್ಪತ್ರೆಯನ್ನು ನಿಷೇಧಿಸಲು ಸೂಚನೆ:

ಗುಂಡಿನಿಂದ ಗಾಯಗೊಂಡ ಯಾರನ್ನೂ ದಾಖಲಿಸಬಾರದು, ಸರಕಾರಿ ಆಸ್ಪತ್ರೆಗೆ ಕಳುಹಿಸಬೇಕೆಂದು ಸೂಚನೆ ನೀಡಲಾಗಿದೆ. ಪೊಲೀಸ್ ನಿಯಂತ್ರಣದಲ್ಲಿರುವ ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಯಿಲ್ಲ. ಸಂಬಂಧಿಕರಿಗೆ ಪ್ರವೇಶವಿಲ್ಲ. ಪೊಲೀಸರ ಗುಂಡು ಹಾರಾಟದಿಂದ ಗಾಯಗೊಂಡವರಿಗೆ ಚಿಕಿತ್ಸೆ ನಿರಾಕರಿಸಲಾಗುತ್ತಿದೆ. ಪ್ರತಿಭಟನೆ, ಹೋರಾಟವನ್ನು ಉತ್ತರಪ್ರದೇಶದಲ್ಲಿ ಮಾಡದಿರಲು ಪೊಲೀಸರು ಭಯಾನಕ ವಾತಾವರಣ ಸೃಷ್ಟಿಸುತ್ತಿದ್ದಾರೆ.

ಪೋಸ್ಟ್ ಮಾರ್ಟಂ ವರದಿ ಕೊಡಲಿಲ್ಲ:

ಪೊಲೀಸರ ಗುಂಡೇಟಿನಿಂದ ಮೃತಪಟ್ಟವರ ಮೃತದೇಹಗಳನ್ನು ಮನೆಗೆ ಕೊಂಡುಹೋಗಲು ಮತ್ತು ಮರಣಾನಂತರದ ಕಾರ್ಯಕ್ರಮ ನಡೆಸುವುದನ್ನು ನಿಷೇಧಿಸಲಾಗಿದೆ. ಕೊಲೆಯಾದವರ ಪೋಸ್ಟ್ ಮಾರ್ಟಂ ವರದಿ ನೀಡಲಿಲ್ಲ. ಉತ್ತರಪ್ರದೇಶದ ವಿವಿಧ ಸ್ಥಳಗಳಿಗೆ ಭೇಟಿ ನೀಡಿದ ಯೋಗೇಂದ್ರ ಯಾದವ್, ಹರ್ಷ್ ಮಂದರ್, ಕವಿತಾ ಕೃಷ್ಣನ್, ನದೀಂ ಖಾನ್ ಸಹಿತ ಸತ್ಯಶೋದನನಾ ತಂಡ ಈ ವರದಿ ತಯಾರಿಸಿದೆ. ಈ ವರದಿ ಹೊರಬಂದ ಬಳಿಕ ಚಲನಚಿತ್ರ ನಟಿ ಸ್ವರ ಭಾಸ್ಕರ್, ನಿಶಾನ್ ಅಯ್ಯೂಬ್ ಪತ್ರಿಕಾಗೋಷ್ಠಿ ಕರೆದು ಸುಪ್ರೀಂಕೋರ್ಟು ಸ್ವಪ್ರೇರಣೆಯಿಂದ ಕೂಡಲೇ ಮಧ್ಯಪ್ರವೇಶಿಸಬೇಕೆಂದು ಆಗ್ರಹಿಸಿದ್ದಾರೆ. ಚಲನಚಿತ್ರ ಕ್ಷೇತ್ರದ ಪ್ರಮುಖರಾದ ಅನುರಾಗ್ ಕಶ್ಯಪ್, ಕೊಂಕಣ ಸೇನ್, ಅಪರ್ಣಾ ಸೇನ್, ಮಲ್ಲಿಕ ದುವ, ಅಲಂಕೃತ ಶ್ರೀವಾಸ್ತವರು ಕೂಡ ಸುಪ್ರೀಂಕೋರ್ಟು ಮಧ್ಯಪ್ರವೇಶಕ್ಕೆ ಆಗ್ರಹಿಸಿದ್ದಾರೆ.