ರೋಹಿಂಗ್ಯನ್ನರ ವಿರುದ್ಧ ದ್ವೇಷ ಪ್ರಚಾರ: ಫೇಸ್‌ಬುಕ್ ನಷ್ಟ ಪರಿಹಾರ ನೀಡಬೇಕು -ಆಮ್ನೆಸ್ಟಿ ವರದಿ

0
155

ಸನ್ಮಾರ್ಗ ವಾರ್ತೆ

ಲಂಡನ್: ಮ್ಯಾನ್ಮಾರ್‌ನಲ್ಲಿ ರೋಹಿಂಗ್ಯನರ ವಿರುದ್ಧ ದ್ವೇಷ ಪ್ರಚಾರಕ್ಕೆ ಅವಕಾಶ ನೀಡಿದ್ದಕ್ಕಾಗಿ ಫೇಸ್‌ಬುಕ್ ನಷ್ಟ ಪರಿಹಾರ ನೀಡಬೇಕು ಎಂದು ಆಮ್ನೆಸ್ಟಿ ಇಂಟರ್ನ್ಯಾಷನಲ್ ವರದಿ ತಿಳಿಸಿದೆ.

ರೋಹಿಂಗ್ಯಾ ಸಂತ್ರಸ್ತರ ಸಂಘಗಳು ಮತ್ತು ಮಾನವ ಹಕ್ಕುಗಳ ಸಂಘಟನೆಗಳು ಫೇಸ್‌ಬುಕ್ ವಿರುದ್ಧ ದೂರು ದಾಖಲಿಸಿವೆ. ಫೇಸ್‌ಬುಕ್ ತನ್ನ ಪ್ಲಾಟ್‌ಫಾರ್ಮ್ ಮೂಲಕ ರೋಹಿಂಗ್ಯನ್ನರ ವಿರುದ್ಧ ದ್ವೇಷ ಹರಡುವಿಕೆಯನ್ನು ತಡೆಯಲು ಏನನ್ನೂ ಮಾಡಿಲ್ಲ ಎಂದು ಬೊಟ್ಟು ಮಾಡಿದ ಫಿರ್ಯಾದಿದಾರರು ಈ ಕುರಿತು ಗಮನ ಸೆಳೆದಿದ್ದಾರೆ.

ರೊಹಿಂಗ್ಯನ್ನರು ಹಲವಾರು ವರ್ಷಗಳಿಂದ ಫೇಸ್‌ಬುಕ್‌‌ನಲ್ಲಿರುವ ದ್ವೇಷ ಭಾಷಣಗಳ ವಿರುದ್ಧ ವರದಿ ಮಾಡಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. 2012 ರಿಂದ 2017ರವರೆಗಿನ ಸಾಮೂಹಿಕ ಹತ್ಯೆ ಕೊನೆಗೊಳ್ಳುವವರೆಗೆ ರೋಹಿಂಗ್ಯನರ ವಿರುದ್ಧ ಹಿಂಸಾತ್ಮಕವಾದ ದ್ವೇಷ ಹರಡುವ ಕಾರ್ಯ ಫೇಸ್‍ಬುಕ್‍ನಿಂದ ಮುಂದುವರೆದಿತ್ತು ಎಂದು
ಆಮ್ನೆಸ್ಟಿ ಇಂಟರ್ನ್ಯಾಷನಲ್ ವರದಿ ತಿಳಿಸಿದೆ.