ಸನ್ಮಾರ್ಗ ವಾರ್ತೆ
ಮುಂಬೈ: ಇಂಧನ ಬೆಲೆ ಹೆಚ್ಚಳ ಸಹಿಸಲಾರದೆ ಪ್ರಯಾಣದ ಸಲುವಾಗಿ ಮಹಾರಾಷ್ಟ್ರದ ಔರಂಗಬಾದ್ ನವಾಸಿ ಶೇಖ್ ಯೂಸುಫ್ ಎಂಬವರು ತನ್ನ ಪ್ರಯಾಣಕ್ಕಾಗಿ ಕುದುರೆ ಖರೀದಿಸಿದ್ದಾರೆ. ವೈ.ಬಿ. ಛವಾನ್ ಕಾಲೇಜ್ ಆಫ್ ಫಾರ್ಮಸಿಯ ಲ್ಯಾಬ್ ಅಸಿಸ್ಟೆಂಟ್ ಆಗಿರುವ ಯೂಸುಫ್ರವರು ‘ಜಿಗರ್’ ಎಂಬ ಕುದರೆಯನ್ನು ಖರೀದಿಸಿದ್ದಾರೆ.
ಕೊರೋನ ಆರಂಭಿಕ ಲಾಕ್ಡೌನ್ ವೇಳೆ ಬೈಕ್ ಕೊಟ್ಟಿತ್ತು. ದಿನೇದಿನೇ ಹೆಚ್ವುತ್ತಿರುವ ಇಂಧನ ಬೆಲೆಯಿಂದಾಗಿ ಹದಿನೈದು ಕಿಲೋ ಮೀಟರ್ ದೂರದಲ್ಲಿರುವ ತನ್ನ ಉದ್ಯೋಗದ ಸ್ಥಳಕ್ಕೆ ತೆರಳಲು ಸಾರಿಗೆ ಬಸ್ಸುಗಳು ಕೂಡ ಸ್ಥಗಿತವಾಗಿದ್ದವು. ಈ ವೇಳೆ ಕುದುರೆ ಖರೀದಿಸಿದರೆ ಹೇಗೆ ಎಂಬ ಆಲೋಚನೆ ಅವರ ಮನಸಲ್ಲಿ ಮೂಡಿತು. ನಲವತ್ತು ಸಾವಿರ ರೂ ನೀಡಿ ಕುದುರೆ ಖರೀದಿಸಿದ್ದಾಗಿ ಶೈಖ್ ಯೂಸುಫ್ ಹೇಳುತ್ತಾರೆ.
ಕೊರೋನ ಆರಂಭದಿಂದ ಮೂರನೇ ವರ್ಷವೂ ‘ಜಿಗರ್’ ಎಂಬ ತನ್ನ ಕುದರೆಯಲ್ಲಿ ಕೂತು ಯೂಸುಫ್ ಬರುತ್ತಾರೆ. ಇವರನ್ನು ಜನರು ‘ಘೋಡೆವಾಲಾ’ ಎಂದು ಕರೆಯುತ್ತಿದ್ದಾರೆ. ಔರಂಗಾಬಾದಿನ ರಸ್ತೆಗಳಲ್ಲಿ ಕಾರು, ಬೈಕ್ ಮತ್ತು ಇತರ ವಾಹನಗಳ ನಡುವೆ ಕುದುರೆ ಜಿಗರ್ ಮತ್ತು ಯೂಸುಫ್ ಸಹ ಪ್ರಯಾಣಿಕರಾಗಿದ್ದಾರೆ.
#WATCH Maharashtra | Aurangabad's Shaikh Yusuf commutes to work on his horse 'Jigar'. " I bought it during lockdown. My bike wasn't functioning, petrol prices had gone up & public transport wasn't plying. which is when I bought this horse for Rs 40,000 to commute," he said (14.3) pic.twitter.com/ae3xvK57qf
— ANI (@ANI) March 14, 2022












