ಶಾಲೆಯಲ್ಲಿ ಮಾತ್ರವಲ್ಲ ಸರಕಾರಿ ಕಚೇರಿಗಳಲ್ಲಿಯೂ ಇನ್ನು ಚಪ್ಪಲಿ ಧರಿಸಬಹುದು

0
909

ಸನ್ಮಾರ್ಗ ವಾರ್ತೆ

ತಿರುವನಂತಪುರಂ,ನ.26:ಇನ್ನು ಮುಂದೆ ಕೇರಳದ ಶಾಲೆಗಳಲ್ಲಿ ಮಾತ್ರವಲ್ಲ ವಿಲೇಜ್ ಆಫೀಸ್‍ಗಳಲ್ಲಿಯೂ ಕೂಡ ಚಪ್ಪಲಿ ಧರಿಸಬಹುದು. ರಾಜ್ಯದ ಯಾವುದೇ ವಿಲೇಜ್ ಕಚೇರಿಗಳಲ್ಲಿ ಪಾದರಕ್ಷೆ ಧರಿಸಿ ಬಂದರೆ ತಡೆಯಬಾರದೆಂದು ಕಂದಾಯ ಇಲಾಖೆ ಆದೇಶ ಹೊರಡಿಸಿದೆ.

ವಯನಾಡಿನ ಸರಕಾರಿ ಸರ್ವಜನ ವೆಕೇಶನಲ್ ಹೈಯರ್ ಸೆಕೆಂಡರಿ ಶಾಲೆಯ ತರಗತಿ ಕೋಣೆಯಲ್ಲಿ ಹಾವು ಕಚ್ಚಿ ವಿದ್ಯಾರ್ಥಿನಿ ಮೃತಪಟ್ಟ ಘಟನೆಯಲ್ಲಿ ಸರಕಾರ ಎಚ್ಚೆತ್ತುಕೊಂಡಿದೆ. ಶಾಲೆಗಳಲ್ಲಿ ಪಾದರಕ್ಷೆ ಧರಿಸುವುದನ್ನು ನಿಷೇಧಿಸಬಾರದೆಂದು ಸಾರ್ವಜನಿಕ ಶಿಕ್ಷಣ ಇಲಾಖೆಯೂ ಆದೇಶ ಹೊರಡಿಸಿದೆ.

ವಿಲೇಜ್ ಕಚೇರಿಗೆ ಬರುವ ಸಾರ್ವಜನಿಕರು ಪಾದರಕ್ಷೆಯೊಂದಿಗೆ ಬರಬಹುದು. ಈ ಮೊದಲು ಚಪ್ಪಲಿ ತೆಗೆದಿರಿಸುವಂತೆ ಹೇಳಲಾಗುತ್ತಿತ್ತು. ಇದು ಗಮನಕ್ಕೆ ಬಂದ ನಂತರ ರೆವೆನ್ಯೂ ಅಡಿಶನಲ್ ಚೀಫ್ ಸೆಕ್ರಟರಿ ಆದೇಶ ಹೊರಡಿಸಿದರು.

ಶಾಲೆಗಳಲ್ಲಿ ಚಪ್ಪಲಿ ತೆಗೆಯಬೇಕೆನ್ನುವುದು. ಮೇಲು-ಕೀಳು ಮನಸ್ಥಿತಿಯ ಪ್ರತೀಕವಾಗಿದೆ. ವಿಲೇಜ್ ಕಚೇರಿಗಳಿಗೆ ಬರುವವರು ಪಾದರಕ್ಷೆಯೊಂದಿಗೆ ಪ್ರವೇಶಿಸಲು ಬಿಡಿ. ಅಡ್ಡಪಡಿಸಬೇಡಿ. ಯಾರಾದರೂ ಪಾದರಕ್ಷೆ ತೆಗೆಯುವುದಿದ್ದರೆ ಅವರನ್ನು ಹಾಗೆ ಮಾಡಬೇಡಿರಿ ಎಂದು ಹೇಳಿರಿ ಎಂದು ಅಧಿಕಾರಿಗಳಿಗೆ ಆದೇಶದಲ್ಲಿ ತಿಳಿಸಲಾಗಿದೆ.