ಭಾರತದ ಗಡಿ ಸಮೀಪ ಟಿಬೆಟ್‍ನಲ್ಲಿ ಪ್ರಥಮ ಸಂಪೂರ್ಣ ವಿದ್ಯುತ್ ಬುಲೆಟ್ ರೈಲು ಓಡಿಸಿದ ಚೀನಾ

0
508

ಸನ್ಮಾರ್ಗ ವಾರ್ತೆ

ಬೀಜಿಂಗ್ : ಹಿಮಾಲಯದ ಪ್ರದೇಶ ಟಿಬೆಟ್‍ನಲ್ಲಿ ಸಂಪೂರ್ಣ ವಿದ್ಯುತ್ ಬುಲೆಟ್ ರೈಲನ್ನು ಚೀನ ಚಲಾಯಿಸಿದೆ. ಚೀನದ ಪ್ರಾಂತ ರಾಜಧಾನಿ ಲಾಸದಿಂದ ಟಿಬೆಟ್ ಗಡಿ ನಗರ ನಯಿಂಗ್‍ಚಿಗೆ ಬುಲೆಟ್ ರೈಲು ಸಂಚಾರ ನಡೆಸಿದೆ. ಅರುಣಾಚಲ ಪ್ರದೇಶಕ್ಕೆ ತಾಗಿಕೊಂಡಿರುವ ನಗರ ನಯಿಂಗ್ಚಿ ಆಗಿದೆ. ಸಿಚುವಾನ್ -ಟಿಬೆಟ್ ರೈಲ್ವೆಯ 435.5 ಕಿಲೊಮೀಟರ್ ಲಾಸಾ-ನಯಿಂಗ್ಚಿ ವಿಭಾಗವಾಗಿದ್ದು, ಇದು ಚೀನದ ಕಮ್ಯುನಿಸ್ಟ್ ಪಾರ್ಟಿಯ ಶತಾಬ್ದಿ ಪ್ರಯುಕ್ತ ಜುಲೈ ಒಂದರಂದು ಉದ್ಘಾಟನೆಗೊಳ್ಳಲಿದೆ.

ಟಿಬೆಟನ್ ಮೊದಲ ಸಂಪೂರ್ಣ ವಿದ್ಯುತ್ ಚಾಲಿತ ರೈಲು ಇದಾಗಿದ್ದು, ಕ್ವಿನ್‍ಹಾಯ್ -ಟಿಬೆಟ್ ಮಾರ್ಗದ ಬಳಿಕ ಟಿಬೆಟಿನಗೆ ಇರುವ ಎರಡನೇ ರೈಲು ಮಾರ್ಗ ಇದು. ಜಗತ್ತಿನ ಅತ್ಯಂತ ಭೌಗೋಳಿಕ ವಿಶೇಷತೆಯನ್ನೊಳಗೊಂಡ ಸಕ್ರಿಯ ಪ್ರದೇಶವಾದ ಕಿಂಗ್‍ಹಾಯ್ -ಟಿಬೆಟ್ ಪೀಠಭೂಮಿಯ ಮೂಲಕ ಈ ಮಾರ್ಗ ಹಾದು ಹೋಗುತ್ತಿದೆ.ಹೊಸ ರೈಲು ಮಾರ್ಗ ಕೆಲಸ ತ್ವರಿತಗೊಳಿಸಲು ಚೀನದ ಅಧ್ಯಕ್ಷ ಶಿಜಿನ್‍ಇಂಗ್ ಅಧಿಕಾರಿಗಳಿಗೆ ನವೆಂಬರಿನಲ್ಲಿ ಸೂಚನೆ ನೀಡಿದ್ದರು.

ಗಡಿ ಸಂರಕ್ಷಣೆಗೆ ನಿರ್ಣಾಯಕವಾದ ರೈಲುಪಥ ಇದೆನ್ನಲಾಗುತ್ತಿದೆ. ಸಿಚುವಾನ್ ಪ್ರಾಂತದ ರಾಜಧಾನಿಯಾದ ಚೆಂಗ್ಡುವಿನಿಂದ ರೈಲು ಸಂಚಾರ ಆರಂಭಿಸಿ ಅಲ್ಲಿಂದ ಯಾನ್, ಕಾಂಮ್ಡೊ ಪ್ರದೇಶವಾಗಿ ಟಿಬೆಟ್‍ಗೆ ತಲುಪಲಿದೆ. ಇದರ ಮೂಲಕ ಚೆಂಗ್ಡುವಿನಿಂದ ಲಾಸಾಕ್ಕೆ 13 ಗಂಟೆಗಳಲ್ಲಿ ತಲುಪಬಹುದಾಗಿದೆ. ಇಲ್ಲದಿದ್ದರೆ 48 ಗಂಟೆ ಪ್ರಯಾಣ ಬೆಳಸಬೇಕಾಗಿತ್ತು. ಅರುಣಾಚಲ ಪ್ರದೇಶವು ಚೀನದ ಭಾಗ ಎಂದು ಎಂದು ಚೀನ ಹೇಳುತ್ತಿದೆ. ಆದರೆ ಭಾರತ ಇದನ್ನು ನಿರಾಕರಿಸುತ್ತಿದೆ. ಭಾರತ-ಚೀನ ಗಡಿಯ ಸರಿಯಾಧ ನಿಯಂತ್ರಣ ರೇಖೆಗೆ ಸಂಬಂಧಿಸಿ 3488 ಕಿಲೋ ಮೀಟರ್ ಈಗಲೂ ಗಡಿ ವಿವಾದ ಅಸ್ತಿತ್ವದಲ್ಲಿದೆ.