ಠಾಕೂರ್ ಪ್ರದೇಶದಲ್ಲಿ ವಾಸವಿದ್ದ ಕ್ರೈಸ್ತ ಕುಟುಂಬದ ಮೇಲೆ ಕಿರುಕುಳ; ಮನೆ ತೆರವಿಗೆ ಯತ್ನ

0
746

ಲಕ್ನೋ, ಜು. 26: ಕ್ರೈಸ್ತರಾದ್ದರಿಂದ ಬದುಕಲು ಬಿಡುವುದಿಲ್ಲ ಎಂದು ಕುಟುಂಬವೊಂದು ಹೇಳಿದೆ. ಲಕ್ನೊದ ಠಾಕೂರ್ ಆಧಿಪತ್ಯದ ನಂದಿವಿಹಾರ್ ಕಾಲನಿಯ ಚಿನಾಡ್ ಎಂಬಲ್ಲಿ ಕ್ರೈಸ್ತ ಕುಟುಂಬವೊಂದರ ವಿರುದ್ಧ ಕಿರುಕುಳ ಮಾಡಲಾಗುತ್ತಿದೆ ಎಂದು ದೂರು ಕೇಳಿಬಂದಿದೆ. ಊರಿನಿಂದಲೇ ತಮ್ಮನ್ನು ಹೊರಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ಪೊಮಿಲಾಪಾಲ್ ಎಂಬ ಗೃಹಿಣಿ ಹೇಳಿದ್ದಾರೆ.

ಕ್ರೈಸ್ತರು ಎಂಬ ಕಾರಣದಿಂದ ಕೆಲವು ದಿವಸಗಳಿಂದ ನಿಂದನೆಯನ್ನು ಕೇಳಿಸಿಕೊಳ್ಳುತ್ತಿದ್ದೇವೆ. ಪತಿಯನ್ನು ತಡೆಹಿಡಿದು ಹೊಡೆದಿದ್ದಾರೆ. ಕುಟುಂಬದ ನೆರವಿಗೆ ಬಂದ ನೆರೆಮನೆಯವರಿಗೂ ಹೊಡೆದರು. ಇಲ್ಲಿ ನಮ್ಮದೊಂದೇ ಕುಟುಂಬ ಅಲ್ಪಸಂಖ್ಯಾತ ಸಮುದಾಯದ್ದಾಗಿದೆ. ಇಲ್ಲಿರಲು ಬಿಡುವುದಿಲ್ಲ ಎಂದು ಹೇಳಿ ನಾನಾ ರೀತಿಯ ದಾಳಿ ನಡೆಸಲಾಗುತ್ತಿದೆ ಎಂದು ಪೊಮಿಲಾ ಹೇಳಿದರು. ಈ ನಡುವೆ ಪೊಮಿಲಾರ ಮಕ್ಕಳು ಮತ್ತು ಠಾಕೂರ್ ಕುಟುಂಬ ಸದಸ್ಯರ ನಡುವೆ ಹೊಯ್‍ ಕೈ ನಡೆದದ್ದು ಸಮಸ್ಯೆ ಮತ್ತಷ್ಟು ಬಿಗಡಾಯಿಸಲು ಕಾರಣವಾಯಿತು. ದೂರು ನೀಡಿದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ತಮಗೆ ಹೊಡೆದ ವ್ಯಕ್ತಿ ಉತ್ತರಪ್ರದೇಶ ಪೊಲೀಸ್‍ ನಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿದ್ದಾನೆ ಎಂದು ಪೊಮಿಲಾ ಹೇಳಿದರು.

ಇದೇವೇಳೆ, ಮುಖ್ಯ ಆರೋಪಿ ಶುಭಂನನ್ನು ಬಂಧಿಸಲಾಗಿದ್ದು ಎರಡು ಪಂಗಡದವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಗೊಮತಿ ನಗರ ಸರ್ಕಲ್ ಅಧಿಕಾರಿ ಆವನೀಶ್ವರ್ ಚಂದ್ರ ಶ್ರೀವಾಸ್ತವ ಹೇಳಿದರು.