ಪೆಟ್ರೋಲ್, ಡೀಸೆಲ್‍ ಬಳಿಕ ಸಿಎನ್‍ಜಿ ದರ ಹೆಚ್ಚಳ!

0
281

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳದ ನಂತರ ಸಿಎನ್‍ಜಿಗೂ ಬೆಲೆ ಹೆಚ್ಚಿಸಲಾಗಿದೆ. ದಿಲ್ಲಿ, ಹರಿಯಾಣ, ರಾಜಸ್ತಾನದಲ್ಲಿ ಸಿಎನ್‍ಜಿ ದರ ಹೆಚ್ಚಳವಾಗಿದೆ. ಶನಿವಾರ ಬೆಳಗ್ಗೆ ಆರು ಗಂಟೆಯಿಂದ ನವೀಕೃತ ದರ ಬಿಡುಗಡೆಗೊಂಡಿದ್ದು, ದಿಲ್ಲಿ, ಹರಿಯಾಣ, ರಾಜಸ್ತಾನದಲ್ಲಿ ದರ ಏರಿಕೆ ಆಗಿದೆ. ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ ಸಿಎನ್‍ಜಿ ಗ್ಯಾಸ್ ವಿತರಣೆಯ ಪ್ರಮುಖ ಕಂಪೆನಿಯಾಗಿದ್ದು ಹೊಸ ದರದ ಕುರಿತು ತಿಳಿಸಿದೆ.

ದಿಲ್ಲಿಯಲ್ಲಿ ಈಗ ಸಿಎನ್‍ಜಿ ಒಂದು ಕಿಲೋ ಬೆಲೆ 53.04 ರೂಪಾಯಿ ಆಗಿದೆ. ಗುರುಗ್ರಾಮದಲ್ಲಿ 60.40ರೂ. ಆಗಿದೆ. ಪೆಟ್ರೋಲ್ ಡೀಸೆಲ್ ಬೆಲೆ ಹೆಚ್ಚಿಸಿದ ಬಳಿಕ ಸಿಎನ್‍ಜಿ ಜನರಿಗೆ ಒಂದು ಭರವಸೆಯಂತಿತ್ತು. ಇದರ ರೇಟನ್ನು ಈಗ ಹೆಚ್ಚಿಸಲಾಗಿದೆ.