ಕಲ್ಲಿದ್ದಲು ಭ್ರಷ್ಟಾಚಾರ: ಅದಾನಿ ವಿರುದ್ಧ ತನಿಖೆಗೆ ಆದೇಶಿಸಿದ ತಮಿಳ್ನಾಡು ಸರಕಾರ

0
148

ಸನ್ಮಾರ್ಗ ವಾರ್ತೆ

ಚೆನ್ನೈ, ಜು. 3: ಉದ್ಯಮಿ ಅದಾನಿಗೂ ಕಷ್ಟಕಾಲ ಶುರುವಾದಂತಾಗಿದೆ. ತಮಿಳ್ನಾಡು ಸರಕಾರ ಕಲ್ಲಿದ್ದಲು ಭ್ರಷ್ಟಾಚಾರದಲ್ಲಿ ಅದಾನಿ ಗ್ರೂಪ್ ವಿರುದ್ಧ ತನಿಖೆಗೆ ಆದೇಶಿಸಿದೆ.

ಕಲ್ಲಿದ್ದಲು ವ್ಯವಹಾರದಲ್ಲಿ ರಾಜ್ಯ ಸರಕಾರಕ್ಕೆ ನಷ್ಟ ಆಗಿದೆ ಎಂದು ಪ್ರಕರಣ ಇದ್ದು ದೂರಿನಲ್ಲಿ ಪ್ರಾಥಮಿಕ ತನಿಖೆ ನಡೆಸಲು ಭ್ರಷ್ಟಾಚಾರ ನೀಗ್ರ ದಳಕ್ಕೆ ಸ್ಟಾಲಿನ್ ಆದೇಶಿಸಿದರೆಂದು ದೇಶಿ ಮಾಧ್ಯಮಗಳಲ್ಲಿ ವರದಿಯಾಗಿದೆ.

ಈಗ ತನಿಖೆ ಮಾಡುವುದು ತಮಿಳ್ನಾಡು ಜರೇಷನ್ ಆಂಡ್ ಡಿಸ್ಟ್ರಿಬ್ಯೂಷನ್ ಕಂಪೆನಿಗೆ ಕಲ್ಲಿದ್ದಲು ಆಮದು ಮಾಡಿದುದರಲ್ಲಿ ನಡೆದಿರುವ ಅಕ್ರಮವನ್ನು ಆಗಿದೆ.

ಭ್ರಷ್ಟಾಚರ ತಡೆ ಕಾನೂನಿನ ಪ್ರಕಾರ ಅದಾನಿಯ ವಿರುದ್ಧ ತನಿಖೆ ನಡೆಸಲು ಸರಕಾರ ಸೂಚಿಸಿದ್ದು ಭ್ರಷ್ಟಾಚಾರದ ವಿರುದ್ಧ ಕೆಲಸ ಮಾಡುವ ಸಂಘಟನೆ ಅರೊಪಾರ್ ಇಯಗ ದೂರು ನೀಡಿತ್ತು. ಈ ಆಧಾರದಲ್ಲಿ ಸಾರ್ವಜನಿಕ ವಲಯದ ಕಂಪೆನಿ ಜನರೇಷನ್ ಹೆಚ್ಚು ಬೆಲೆಗೆ ಅದಾನಿಯಿಂದ ಕಲ್ಲಿದ್ದಲು ಪಡೆದುಕೊಂಡಿದ್ದನ್ನು ತನಿಖೆಗೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಸರಕಾರ ಸೂಚಿಸಿದೆ.

ಇದು 2016 ರಿಂದ 2020ರ ವರೆಗೆ ನಡೆದಿರುವ ಭ್ರಷ್ಟಾಚಾರವಾಗಿ ಸುಮಾರು 6,066 ಕೋಟಿ ರೂಪಾಯಿಯಷ್ಟು ಈ ವ್ಯವಹಾರದಲ್ಲಿ ಅದಾನಿ ಬೆಲೆ ಹೆಚ್ಚಿಸಿ ಮಾರಿದ್ದರಿಂದ ಸರಕಾರಕ್ಕೆ ನಷ್ಟೌಅಘೀಧೇ. 2018 – 2019ರಲ್ಲಿ ಈ ಭ್ರಷ್ಟಾಚಾರವನ್ನು ಬೊಟ್ಟು ಮಾಡಿ ದೂರು ಬಂದಿತ್ತು. ಆದರೆ ಅಂದು ಕೇಸು ಹಾಕಲು ನಿರಾಕರಿಸಲಾಗಿತ್ತು. ನಂತರ ಮುಖ್ಯಮಂತ್ರಿ ಸ್ಟಾಲಿನ್ ನೇರವಾಗಿ ದೂರು ನೀಡಿದ್ದಾರೆ. ನಂತರ ಪ್ರಕರಣದಲ್ಲಿ ತನಿಖೆಗೆ ಭ್ರಷ್ಟಾಚಾರ ನೀಗ್ರಹ ದಳ ಸಿದ್ಧವಾಯಿತು.