ಕಾಂಗ್ರೆಸ್ ಆಡಳಿತದಲ್ಲಿಯು ಕೋಮುವಾದ ಮತ್ತು ಭ್ರಷ್ಟಾಚಾರ ಹೆಚ್ಚಾಗಿದೆ: ವೆಲ್ಪೇರ್ ಪಾರ್ಟಿ ಕಾರ್ಯಕಾರಿ ಸಭೆಯಲ್ಲಿ ತೀವ್ರ ಆಕ್ಷೇಪ

0
69

ಸನ್ಮಾರ್ಗ ವಾರ್ತೆ

ಆಲಮಟ್ಟಿ : ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕದ ರಾಜ್ಯ ಕಾರ್ಯಕಾರಿ ಸಮಿತಿಯ ಸಭೆಯು ಬಾಗಲಕೋಟೆ ಜಿಲ್ಲೆಯ ಆಲಮಟ್ಟಿಯಲ್ಲಿ ನಡೆಯಿತು.

ಸಭೆಯಲ್ಲಿ ಪಕ್ಷದ ಸ್ಥಿತಿಗತಿಯ ಬಗ್ಗೆ ಅವಲೋಕನ ನಡೆಸಿ ಪಕ್ಷ ಸಂಘಟನೆಯ ಬಗ್ಗೆ ಹಲವಾರು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಯಿತು.

ಈ ಸಂಧರ್ಭದಲ್ಲಿ ಕಾರ್ಯಕಾರಿ ಸಮಿತಿಯಲ್ಲಿ ರಾಜ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ಸುಧಿರ್ಘವಾಗಿ ಚರ್ಚೆ ನಡೆಸಲಾಯಿತು. ರಾಜ್ಯ ಸರ್ಕಾರದ ಕಾರ್ಯ ವೈಖರಿಯ ಬಗ್ಗೆ ಸಭೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಲಾಯಿತು.

ಹಿಂದಿನ ಫ್ಯಾಸಿಸ್ಟ್ ಸರಕಾರವನ್ನು ಜನರು ಕಿತ್ತೆಸೆದು ಕಾಂಗ್ರೆಸ್ ಪಕ್ಷಕ್ಕೆ ಸರಕಾರ ನಡೆಸಲು ಅವಕಾಶ ಕೊಟ್ಟಿದ್ದು ಯಾವುದೇ ಬದಲಾವಣೆ ಕಾಣುತ್ತಿಲ್ಲ, ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಸರಕಾರ ಎಂಬ ಭ್ರಷ್ಟಚಾರ ಮತ್ತು ಕೋಮುವಾದ ಆರೋಪಗಳು ಕೇಳಿ ಬಂದಾಗ ರೋಸಿ ಹೋದ ಜನ ಸರಕಾರವನ್ನು ಕಿತ್ತೆಸೆದು ಕಾಂಗ್ರೆಸ್ ಗೆ ಅವಕಾಶ ನೀಡಿದರು. ಸಿಕ್ಕ ಅವಕಾಶವನ್ನು ಕಾಂಗ್ರೆಸ್ ಸರಕಾರ ಸಮರ್ಪಕವಾಗಿ ಬಳಸುತ್ತಿಲ್ಲ. ದಿನಗಳೆದಂತೆ ಭ್ರಷ್ಟಾಚಾರದ ವರದಿಗಳು ಹೆಚ್ಚುತ್ತಲೆ ಇವೆ. ಕೋಮುವಾದವೂ ವ್ಯಾಪಕವಾಗುತ್ತಿದೆ. ಕೋಮುವಾದವನ್ನ ಸದೆಬಡಿಯುವಲ್ಲಿ ಸರಕಾರ ವಿಫಲವಾಗುತ್ತಿದೆ. ಕೋಮುವಾದಿ ಶಕ್ತಿಗಳು ಮೆರೆದಾಡುತ್ತಿವೆ.

ಬಹಿರಂಗವಾಗಿ ಕೋಮು ಪ್ರಚೋದಕ ಭಾಷಣಗಳು ಆಗುತ್ತಿದ್ದರು ಆರೋಪಿಗಳ ಬಂಧನವಾಗುತ್ತಿಲ್ಲ. ರೈತರ ಸಮಸ್ಯೆಗಳಿಗೂ ಸರಿಯಾದ ರೀತಿಯಲ್ಲಿ ಸ್ಪಂಧಿಸುತ್ತಿಲ್ಲ. ನಿರುದ್ಯೋಗದ ಸಮಸ್ಯೆಗೆ ಯಾವುದೇ ಸಮರ್ಪಕ ಯೋಜನೆಗಳು ಇನ್ನು ತನಕ ಅಸ್ತಿತ್ವಕ್ಕೆ ಬಂದಿಲ್ಲ ಅತ್ಯಾಚಾರದ ವರದಿಗಳೂ ಕೂಡ ಹೆಚ್ಚಾಗುತ್ತಿವೆ. ಮಹಿಳೆಯರ ಸಮಸ್ಯೆಗಳಿಗೂ ಸರಿಯಾದ ಪರಿಹಾರ ಸಿಗುತ್ತಿಲ್ಲ. ಹೀಗೆ ಹಿಂದಿನ ಸರಕಾರಕ್ಕಿಂತ ಪ್ರಸ್ತುತ ಸರಕಾರ ಭಿನ್ನವಾಗಿಲ್ಲ. ಇದು ಅತ್ಯಂತ ಗಂಭೀರ ಮತ್ತು ಕಳವಳಕಾರಿ ವಿಷಯವಾಗಿದ್ದು ರಾಜ್ಯ ಕಾರ್ಯಕಾರಿ ಸಮಿತಿ ಇದರ ಬಗ್ಗೆ ತನ್ನ ಆಕ್ರೋಶ ಮತ್ತು ಚಿಂತನೆ ವ್ಯಕ್ತಪಡಿಸಿದೆ.

ರಾಜ್ಯದ ರಾಜಕೀಯ ಈ ಪರಿಸ್ಥಿತಿ ಸುಧಾರಣೆಗೊಳ್ಳಲು ಮೌಲ್ಯಧಾರಿತ ರಾಜಕೀಯವನ್ನು ಗಟ್ಟಿಗೊಳಿಸುವ ಅಗತ್ಯತೆ ಇದೆ. ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಈ ದೇಶದಲ್ಲಿ ಮೌಲ್ಯಧಾರಿತ ರಾಜಕೀಯದ ಶ್ರಮಿಸುತ್ತಿದೆ ನಮ್ಮ ಕಾರ್ಯಕರ್ತರು ರಾಜ್ಯದ ಜನರ ಮುಂದೆ ವೆಲ್ಫೇರ್ ಪಾರ್ಟಿಯನ್ನು ಒಂದು ಪರ್ಯಾಯ ರಾಜಕೀಯ ಪಕ್ಷವಾಗಿ ಪರಿಚಯಪಡಿಸಬೇಕಾದ ಅಗತ್ಯವಿದೆ. ಇದರ ಕಡೆ ಹೆಚ್ಚಿನ ಗಮನ ವಹಿಸಬೇಕೆಂದು ತೀರ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ ಪರ್ಯಾಯ ರಾಜಕೀಯ ಶಕ್ತಿಯನ್ನು ಬೆಳೆಸಲು ಮತ್ತು ಮೌಲ್ಯಧಾರಿತ ರಾಜಕೀಯವನ್ನು ಗಟ್ಟಿಗೊಳಿಸಲು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ರಾಜಕೀಯದಲ್ಲಿ ಪಾಲ್ಗೊಳ್ಳುವ ಅಗತ್ಯವಿದ್ದು ಯುವಕರಿಗೆ ಇದರ ಮನವರಿಕೆ ಮಾಡಿಸುವ ಬಗ್ಗೆ ಕಾರ್ಯಕ್ರಮಗಳು ರುಪಿಸಬೇಕೆಂದು ತೀರ್ಮಾನಿಸಲಾಯಿತು.